Published on: November 10, 2022
‘ಜಿ 20’ಯ ಅಧ್ಯಕ್ಷತೆ
‘ಜಿ 20’ಯ ಅಧ್ಯಕ್ಷತೆ

ಸುದ್ದಿಯಲ್ಲಿ ಏಕಿದೆ?
19 ದೇಶಗಳು ಹಾಗೂ ಐರೋಪ್ಯ ಒಕ್ಕೂಟ (ಅದರಲ್ಲಿ 27 ದೇಶಗಳಿವೆ) ಒಳಗೊಂಡ ವಿಶ್ವದ ಅತ್ಯಂತ ಪ್ರಭಾವಿ ಕೂಟ ‘ಜಿ 20’ಯ ಅಧ್ಯಕ್ಷತೆಯನ್ನು ಡಿ.1, 2022 ರಿಂದ ವಹಿಸಿಕೊಳ್ಳುತ್ತಿರುವ ಭಾರತ ಈ ಐತಿಹಾಸಿಕ ಜವಾಬ್ದಾರಿಯ ಸಂಭ್ರಮಕ್ಕಾಗಿ ಲಾಂಛನ, ಧ್ಯೇಯ (ಥೀಮ್) ಹಾಗೂ ವೆಬ್ಸೈಟ್ಗಳನ್ನು ಲೋಕಾರ್ಪಣೆ ಮಾಡಿದೆ.
ಮುಖ್ಯಾಂಶಗಳು
- G20 ಅಧ್ಯಕ್ಷರ ಅವಧಿಯಲ್ಲಿ ಭಾರತವು ಭಾರತದಾದ್ಯಂತ ಅನೇಕ ಸ್ಥಳಗಳಲ್ಲಿ 32 ವಿವಿಧ ವಲಯಗಳಲ್ಲಿ ಸುಮಾರು 200 ಸಭೆಗಳನ್ನು ನಡೆಸಲಿದೆ.
- 2023ರಲ್ಲಿ ನಡೆಯಲಿರುವ ಜಿ20 ಶೃಂಗಸಭೆಯು ಭಾರತದಲ್ಲಿ ನಡೆಯಲಿದೆ.
ಲಾಂಛನ
- ಧ್ಯೇಯ : “ವಸುಧೈವ ಕುಟುಂಬಕಮ್” (ಭಾರತದ ಕರುಣೆಯ ಸಂಕೇತ).
- ಅಥವಾ “ಒಂದು ಭೂಮಿ ಒಂದು ಕುಟುಂಬ ಒಂದು ಭವಿಷ್ಯ” -ಇದನ್ನು ಮಹಾ ಉಪನಿಷತ್ತಿನ ಪ್ರಾಚೀನ ಸಂಸ್ಕೃತ ಪಠ್ಯದಿಂದ ಪಡೆಯಲಾಗಿದೆ.
- ಕಮಲ : ವಿಶ್ವವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಭಾರತದ ಸಾಂಸ್ಕೃತಿಕ ಪರಂಪರೆ ಹಾಗೂ ವಿಶ್ವಾಸವನ್ನು ಬಿಂಬಿಸುತ್ತದೆ.
- ಈ ಸಂದರ್ಭದಲ್ಲಿ ಜಿ20 ಲಾಂಛನ (G20 emblem) ಆಶಾವಾದದ ಪ್ರತೀಕ. ಎಂತಹುದೇ ಪರಿಸ್ಥಿತಿ ಇದ್ದರೂ ಕಮಲ ಅರಳುತ್ತದೆ ಎಂಬುದರ ಸೂಚಕ. ಲಾಂಛನದಲ್ಲಿರುವ ಕಮಲದ ಏಳು ದಳಗಳು (seven petals)ವಿಶ್ವದ 7 ಖಂಡಗಳನ್ನು, ಸಂಗೀತ 7 ಸ್ವರಗಳನ್ನು ಪ್ರತಿನಿಧಿಸುತ್ತದೆ.
ಲಾಂಛನ ಏನನ್ನು ಬಿಂಬಿಸುತ್ತದೆ ?
- ಈ ಲಾಂಛನ ಭಾರತದ ಪುರಾತನ ಸಂಸ್ಕೃತಿನಂಬಿಕೆ, ಬುದ್ಧಿವಂತಿಕೆಯನ್ನು ಬಿಂಬಿಸುತ್ತದೆ.
ಜಿ20 ದೇಶಗಳು
- ರಚನೆ :20 ಆಗಸ್ಟ್ 2003
- ಜಿ20 ವಿಶ್ವದ ವ್ಯಾಪಾರದ 75% ಅನ್ನು ಪ್ರತಿನಿಧಿಸುವ 20 ದೇಶಗಳ ಗುಂಪಾಗಿದೆ
- ಜಿ20 ಎನ್ನುವುದು ದೇಶಗಳ ಸಮೂಹವಾಗಿದ್ದು, ಇದರ ಆರ್ಥಿಕ ಸಾಮರ್ಥ್ಯವು ವಿಶ್ವದ ಜಿಡಿಪಿಯ 85% ಅನ್ನು ಪ್ರತಿನಿಧಿಸುತ್ತದೆ.
- ಇದಕ್ಕೆ ತನ್ನದೇ ಆದ ಸ್ವಂತ ಆಡಳಿತ ಕಚೇರಿಯನ್ನು ಹೊಂದಿಲ್ಲ. ಈ ಗ್ರೂಪ್ನ ಅಧ್ಯಕ್ಷೀಯ ಸ್ಥಾನ ಸದಸ್ಯ ರಾಷ್ಟ್ರಗಳ ನಡುವೆ ಪ್ರತಿ ವರ್ಷ ಬದಲಾಗುತ್ತಲೇ ಇರುತ್ತದೆ ಮತ್ತು ಇದಕ್ಕಾಗಿ ವಿಭಿನ್ನ ಪ್ರಾದೇಶಿಕ ರಾಷ್ಟ್ರಗಳ ಸಮೂಹದಿಂದಲೇ ಆಯ್ಕೆ ಮಾಡಲಾಗುತ್ತದೆ.
- ಯಾವ ರಾಷ್ಟ್ರವು ಜಿ20 ಶೃಂಗದ ಆತಿಥ್ಯ ವಹಿಸುತ್ತದೆಯೋ ಅದೇ ರಾಷ್ಟ್ರ ಆ ವರ್ಷ ಪೂರ್ತಿ ಅದರ ನಿರ್ವಹಣೆ ಮಾಡುತ್ತದೆ. ಅಂದರೆ ತಾತ್ಕಾಲಿಕವಾಗಿ ಆಡಳಿತ ಕಚೇರಿಯನ್ನು ಆರಂಭಿಸಿ, ಗ್ರೂಪ್ನ ಕೆಲಸವನ್ನು ಮತ್ತು ಸಂಘಟನೆಯ ಸಭೆಗಳನ್ನು ನೆರವೇರಿಸುತ್ತದೆ.
- ಜಿ20 ಮೊದಲಿಗೆ ಆರಂಭಗೊಂಡಾಗ, ಸದಸ್ಯ ರಾಷ್ಟ್ರಗಳ ಹಣಕಾಸು ಸಚಿವರು ಮತ್ತು ಕೇಂದ್ರ ಬ್ಯಾಂಕುಗಳ ಗೌರ್ನರ್ಗಳು ಮಾತ್ರ ಶೃಂಗದಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ, 2008ರಲ್ಲಿ ಲೆಹ್ಮನ್ ಬ್ರದರ್ಸ್ ಹಣಕಾಸು ಸಂಸ್ಥೆ ದಿವಾಳಿ ಎದ್ದು, ಇಡೀ ಜಗತ್ತೇ ಆರ್ಥಿಕ ಹಿಂಜರಿಕೆಗೆ ಒಳಗಾಯಿತು. ಆ ಬಳಿಕವಷ್ಟೆ ಸದಸ್ಯ ರಾಷ್ಟ್ರಗಳ ಮುಖ್ಯಸ್ಥರು ವಾರ್ಷಿಕ ಜಿ20 ಶೃಂಗದಲ್ಲಿ ಪಾಲ್ಗೊಳ್ಳುವುದು ಆರಂಭವಾಯಿತು.
ಸದಸ್ಯ ರಾಷ್ಟ್ರಗಳು
- ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ರಿಪಬ್ಲಿಕ್ ಆಫ್ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಯುನೈಟೆಡ್ ಕಿಂಗ್ಡಮ್, ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪಿಯನ್ ಯೂನಿಯನ್ (EU)ನ್ನು ಹೊಂದಿದೆ.
- ಮೊದಲ ಜಿ-20 ಸಭೆ 1999ರಲ್ಲಿ ಬರ್ಲಿನ್ನಲ್ಲಿ ನಡೆದಿತ್ತು.
- ಜಿ-20 2022 ರ ಶೃಂಗಸಭೆಯು ಬಾಲಿಯಲ್ಲಿ ನವೆಂಬರ್ 15-16 ರಂದು ನಡೆಯಲಿದೆ.