Published on: September 28, 2021
ಜೊಜಿಲಾ ಸುರಂಗಮಾರ್ಗ
ಜೊಜಿಲಾ ಸುರಂಗಮಾರ್ಗ
ಸುದ್ಧಿಯಲ್ಲಿ ಏಕಿದೆ? ಏಷ್ಯಾದ ಅತ್ಯಂತ ಉದ್ದದ ಮತ್ತು ಅತಿ ಎತ್ತರದಲ್ಲಿರುವ ಜೊಜಿಲಾ ಸುರಂಗ ಮಾರ್ಗವು 2026ರಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ. ವರ್ಷದ ಎಲ್ಲಾ ಋತುವಿನಲ್ಲೂ ಸಂಚಾರಕ್ಕೆ ಅವಕಾಶವಿರುವ ಈ ಸುರಂಗಮಾರ್ಗವು ಜಮ್ಮು-ಕಾಶ್ಮೀರ ಮತ್ತು ಲಡಾಖ್ ಪ್ರಾಂತದ ನಡುವೆ ಸಂಪರ್ಕವನ್ನು ಸುಲಭಗೊಳಿಸುತ್ತದೆ.
- ಜೊಜಿಲಾ ಪಾಸ್ನಲ್ಲಿ ಚಳಿಗಾಲದ ನಂತರವೂ 20 ಅಡಿ ಎತ್ತರದಷ್ಟು ಹಿಮ ಬಿದ್ದಿರುತ್ತದೆ. ಆಗ ರಸ್ತೆ ಸಂಚಾರ ಸಾಧ್ಯವೇ ಇಲ್ಲ. ಈ ಸುರಂಗಮಾರ್ಗವು ಕಾರ್ಯಾರಂಭ ಮಾಡಿದರೆ, ಈ ತೊಂದರೆ ಇಲ್ಲದಂತಾಗುತ್ತದೆ.
- ದ್ವಿಮುಖ ಸಂಚಾರ ವ್ಯವಸ್ಥೆ ಇರುವ ಈ ಸುರಂಗ ಮಾರ್ಗದ ನಿರ್ಮಾಣ ಕಾರ್ಯವನ್ನು ಅತ್ಯಂತ ವೇಗವಾಗಿ ನಡೆಸಲಾಗುತ್ತಿದೆ.
ಜೊಜಿಲಾ ಪಾಸ್ ಎಲ್ಲಿದೆ?
- ಜೋಜಿಲಾ ಭಾರತದ ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ನಲ್ಲಿರುವ ಹಿಮಾಲಯದಲ್ಲಿರುವ ಎತ್ತರದ ಪರ್ವತ ಮಾರ್ಗವಾಗಿದೆ. ದ್ರಾಸ್ನಲ್ಲಿರುವ ಈ ಪಾಸ್ ಕಾಶ್ಮೀರ ಕಣಿವೆಯನ್ನು ಅದರ ಪಶ್ಚಿಮಕ್ಕೆ ದ್ರಾಸ್ ಮತ್ತು ಸುರು ಕಣಿವೆಗಳನ್ನು ಈಶಾನ್ಯಕ್ಕೆ ಮತ್ತು ಸಿಂಧೂ ಕಣಿವೆಯನ್ನು ಮತ್ತಷ್ಟು ಪೂರ್ವಕ್ಕೆ ಸಂಪರ್ಕಿಸುತ್ತದೆ.