Published on: February 9, 2023
ಜೊಹರ್ ಖಿಲಾಡಿ ಸ್ಪೋರ್ಟ್ಸ್ ಇಂಟಿಗ್ರೇಟೆಡ್ ಪೋರ್ಟಲ್
ಜೊಹರ್ ಖಿಲಾಡಿ ಸ್ಪೋರ್ಟ್ಸ್ ಇಂಟಿಗ್ರೇಟೆಡ್ ಪೋರ್ಟಲ್
ಸುದ್ಧಿಯಲ್ಲಿ ಏಕಿದೆ? ದೇಶದಲ್ಲೇ ಮೊದಲ ಬಾರಿಗೆ ಕ್ರೀಡೆ ಹಾಗೂ ಕ್ರೀಡಾಪಟುಗಳಿಗಾಗಿ ಜಾರ್ಖಂಡ್ ಸರ್ಕಾರ ಡಿಜಿಟಲ್ ಪೋರ್ಟಲ್ ಪ್ರಾರಂಭಿಸಿದ್ದು, ಯುವಜನತೆಯಲ್ಲಿ ಕ್ರೀಡಾ ಸಂಸ್ಕೃತಿಯನ್ನು ಉತ್ತೇಜಿಸುವುದು ಜೊಹರ್ ಖಿಲಾಡಿ ಸ್ಪೋರ್ಟ್ಸ್ ಇಂಟಿಗ್ರೇಟೆಡ್ ಪೋರ್ಟಲ್ ನ ಉದ್ದೇಶವಾಗಿದೆ.
ಮುಖ್ಯಾಂಶಗಳು
- ಕ್ರೀಡಾಪಟುಗಳ ಪ್ರತಿಭೆಯನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಈ ಪೋರ್ಟಲ್ ಉಪಯ್ತುಕ್ತವಾಗಲಿದೆ.
- ಕ್ರೀಡೆಯ ಡಿಜಿಟಲೀಕರಣದ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಹೆಜ್ಜೆ ಇದಾಗಿದೆ ಎಂದು ವಿಶ್ಲೇಶಿಸಲಾಗುತ್ತಿದೆ.
- ಕ್ರೀಡಾಪಟುಗಳು, ಕೋಚ್, ರೆಫರಿಗಳು, ಕ್ರೀಡಾ ಅಕಾಡೆಮಿಗಳು, ಕ್ರೀಡಾ ಮೈದಾನಗಳು ಮತ್ತು ಕ್ರೀಡಾ ಕ್ರೀಡಾಂಗಣಗಳ ಬಗ್ಗೆ ವಿಸ್ತೃತ ಡೇಟಾಬೇಸ್ ನ್ನು ಈ ವೆಬ್ ಪೋರ್ಟಲ್ ಹೊಂದಿರಲಿದೆ
- ರಾಜ್ಯದಲ್ಲಿ ನಡೆಯಲಿರುವ ರಾಜ್ಯ, ಜಿಲ್ಲಾ ಮಟ್ಟದ ಸ್ಪರ್ಧೆಗಳ ಬಗ್ಗೆ ಮಾಹಿತಿಯನ್ನೂ ಇನ್ನು ಮುಂದೆ ವೆಬ್ ಪೋರ್ಟಲ್ ನಲ್ಲಿ ನೀಡಲಾಗುತ್ತದೆ. ಒಟ್ಟು 32 ಕ್ರೀಡೆಗಳನ್ನು ಪೋರ್ಟಲ್ ನಲ್ಲಿ ಪಟ್ಟಿ ಮಾಡಲಾಗಿತ್ತು ಒಲಂಪಿಕ್ ಅಸೋಸಿಯೇಶನ್ ನಿಂದ ಗುರುತಿಸಲ್ಪಟ್ಟಿರುವ 32 ಕ್ರೀಡೆಗಳ ಕ್ರೀಡಾಪಟುಗಳು ಈ ವೆಬ್ ಸೈಟ್ ನಿಂದ ಉಪಯೋಗ ಪಡೆಯಬಹುದು
- ಈ ವೆಬ್ ಪೋರ್ಟಲ್ ಮೂಲಕ ಕ್ರೀಡಾ ಇಲಾಖೆ ರಾಜ್ಯ ಮಟ್ಟದಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಮೇಲೆಯೂ ಗಮನ ಹರಿಸುವುದಕ್ಕೆ ಸಾಧ್ಯವಾಗಲಿದೆ. ಪ್ರಸ್ತುತ ಫುಟ್ಬಾಲ್ ಗೆ ಸಂಬಂಧಿಸಿದ ನೋಂದಣಿ, ಹಾಕಿ, ಬಿಲ್ಲುಗಾರಿಕೆ, ಅಥ್ಲೆಟಿಕ್ಸ್, ವಾಲಿಬಾಲ್, ವೇಟ್‌ಲಿಫ್ಟಿಂಗ್ ಮತ್ತು ಕುಸ್ತಿಗೆ ಸಂಬಂಧಿಸಿದ ನೋಂದಣಿಗೆ ಅವಕಾಶ ಪೋರ್ಟಲ್ ನಲ್ಲಿ ಪ್ರಗತಿಯಲ್ಲಿದೆ.
- ಇನ್ನು ಕ್ರೀಡಾಪಟುಗಳಿಗೆ ಎದುರಾಗುವ ಸಮಸ್ಯೆಗಳ ಬಗ್ಗೆಯೂ ಈ ಪೋರ್ಟಲ್ ಮೂಲಕ ಕ್ರೀಡಾ ಇಲಾಖೆಯ ಗಮನಕ್ಕೆ ತರುವ ಅವಕಾಶವಿದ್ದು, ಅಧಿಕಾರಿಗಳು ಸಮಸ್ಯೆಗಳಿಗೆ ಪರಿಹಾರ ನೀಡಲಿದ್ದಾರೆ