Published on: February 13, 2023

ಜೋಳದ ಕೊರತೆ: 2 ಹೊಸ ತಳಿಗಳ ಸಂಶೋಧನೆ

ಜೋಳದ ಕೊರತೆ: 2 ಹೊಸ ತಳಿಗಳ ಸಂಶೋಧನೆ


Shaoxing ಸುದ್ದಿಯಲ್ಲಿ ಏಕಿದೆ? purchase prednisone online ಉತ್ತರ ಕರ್ನಾಟಕದ ಜನರ ಪ್ರಮುಖ ಆಹಾರವಾದ ಜೋಳದ ಉತ್ಪಾದನೆಯಲ್ಲಿ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ, ವಿಜಯಪುರದ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರ (RARS) ಹೆಚ್ಚು ಇಳುವರಿ ನೀಡುವ ಎರಡು ಹೊಸ ತಳಿಗಳನ್ನು ಅಭಿವೃದ್ಧಿಪಡಿಸಿದೆ. 


ಮುಖ್ಯಾಂಶಗಳು

  • ಗಿಡಗಳು ಎತ್ತರವಾಗಿ ಬೆಳೆಯುತ್ತವೆ ಮತ್ತು ಸಾಮಾನ್ಯಕ್ಕಿಂತ ಕನಿಷ್ಠ ಶೇ 25 ರಷ್ಟು ಹೆಚ್ಚು ಧಾನ್ಯವನ್ನು ಇವು ನೀಡಬಹುದು.
  • ತಳಿಗಳು: BGV-44 ಮತ್ತು CSV-29 ಎಂದು ಇವುಗಳನ್ನು ಹೆಸರಿಸಲಾಗಿದ್ದು, ಈ ಎರಡು ತಳಿಗಳು ಜೋಳದ ಉತ್ಪಾದನೆಗೆ ಉತ್ತೇಜನ ನೀಡುತ್ತವೆ.

ಈ ತಳಿಗಳ ವಿಶೇಷತೆಗಳು

  • BGV-44 ರ ಬಗ್ಗೆ, ಹೆಚ್ಚು ತೇವಾಂಶವನ್ನು ಹೊಂದಿರುವ ಕಪ್ಪು ಹತ್ತಿ ಮಣ್ಣಿಗೆ ಇದು ಸೂಕ್ತವಾಗಿರುತ್ತದೆ. CSV-29 ವಿಧದ ಗುಣಮಟ್ಟವೂ ಇದೇ ಆಗಿದೆ.
  • ಹಿಂದಿನ M-35-1 ಗಿಂತ ಈ ಪ್ರಭೇದಗಳು ಉತ್ತಮವಾಗಿವೆ.
  • ಹೊಸ ತಳಿಯು 8-10 ಕ್ವಿಂಟಾಲ್ ಧಾನ್ಯಗಳು ಮತ್ತು 22-25 ಕ್ವಿಂಟಾಲ್ ಮೇವು ನೀಡಬಹುದು.
  • ಮೇವು ಹೆಚ್ಚು ತೇವಾಂಶವನ್ನು ಹೊಂದಿರುವ ಕಾರಣ, ಇದು ಜಾನುವಾರುಗಳಿಗೆ ಹೆಚ್ಚಿನ ಪೋಷಣೆಯನ್ನು ನೀಡುತ್ತದೆ.
  • ಹೆಚ್ಚಿನ ಇಳುವರಿ ನೀಡುವುದರ ಜೊತೆಗೆ, ತಳಿಗಳು ಕೀಟ-ನಿರೋಧಕವೂ ಆಗಿವೆ’.
  • ಸದ್ಯ, ಹಿಟ್ಟಿನಹಳ್ಳಿ ಗ್ರಾಮದ ಬಳಿ ಇರುವ ಕೇಂದ್ರದಲ್ಲಿ ತಳಿಗಳು ಲಭ್ಯವಿದೆ.