Published on: January 14, 2023
ಜೋಶಿಮಠ ಮತ್ತು ಇಸ್ರೊ
ಜೋಶಿಮಠ ಮತ್ತು ಇಸ್ರೊ
between-decks ಸುದ್ದಿಯಲ್ಲಿ ಏಕಿದೆ? where can i buy dapoxetine in nigeria ಉತ್ತರಾಖಂಡದ ಭೂಕುಸಿತ ವಲಯವಾಗಿ ಪರಿಗಣಿಸಿರುವ ಜೋಶಿಮಠ ಪಟ್ಟಣ ಕೇವಲ 12 ದಿನಗಳಲ್ಲಿ 5.4 ಸೆಂ.ಮೀನಷ್ಟು ವೇಗವಾಗಿ ಕುಸಿದಿರುವುದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಬಿಡುಗಡೆ ಮಾಡಿರುವ ಕಾರ್ಟೊಸ್ಯಾಟ್ -2 ಎಸ್ ಉಪಗ್ರಹ ಚಿತ್ರಗಳಲ್ಲಿ ಕಂಡುಬಂದಿದೆ.
ಮುಖ್ಯಾಂಶಗಳು
- ಜೋಶಿಮಠದಲ್ಲಿ ಜನವರಿ 2ರಂದು ಸಂಭವಿಸಿದ ಭೂಕುಸಿತದಿಂದ ಪಟ್ಟಣದ ಜನವಸತಿ ಪ್ರದೇಶದ ಕುಸಿಯುವಿಕೆ ವೇಗ ತೀವ್ರಗೊಮಂಡಿದೆ.
- ಹಿಮಾಲಯ ಪರ್ವತಶ್ರೇ ಣಿಯ ಈ ಪಟ್ಟಣದಲ್ಲಿ 2022 ಏಪ್ರಿಲ್ ಮತ್ತು ನವೆಂಬರ್ ನಡುವೆ ಭೂಕುಸಿತ ನಿಧಾನದಲ್ಲಿತ್ತು.
- ಈ ಅವಧಿಯಲ್ಲಿ 8.9 ಸೆಂ.ಮೀಯಷ್ಟು ಕುಸಿದಿರುವುದು ಇಸ್ರೊದ ರಾಷ್ಟ್ರೀ ಯ ದೂರಸಂವೇದಿ ಕೇಂದ್ರದ (ಎನ್ಆರ್ಎಸ್ಸಿ) ಪ್ರಾಥಮಿಕ ಅಧ್ಯಯನದಲ್ಲಿ ಕಂಡುಬಂದಿತ್ತು.
- ಆದರೆ, 2022ರ ಡಿಸೆಂಬರ್ 27ರಿಂದ 2023ರ ಜ.8ರ ನಡುವೆ ಭೂ ಕುಸಿತದ ವೇಗ ತೀವ್ರಗೊಂಡಿದೆ. ಕೇವಲ 12 ದಿನಗಳಲ್ಲಿ ವ್ಯಾಪಕ ಪ್ರಮಾಣದ ಕುಸಿತವಾಗಿದೆ. ‘ಈ ಪ್ರದೇಶವು ಕೆಲವೇ ದಿನಗಳಲ್ಲಿ 5 ಸೆಂ.ಮೀ. ಕುಸಿದಿದೆ. ಇದರ ವ್ಯಾಪ್ತಿ ವಾಸಸ್ಥಳ ಹೆಚ್ಚು ಆವರಿಸಿದೆ. ಆದರೆ, ಇದು ಪಟ್ಟಣದ ಕೇಂದ್ರ ಭಾಗಕ್ಕೆ ಮಾತ್ರ ಸೀಮಿತವಾಗಿದೆ. ಭೂಕುಸಿತದ ಮುಕುಟ ಭಾಗ 2,180 ಮೀಟರ್ ಎತ್ತರದಲ್ಲಿ ಜೋಶಿಮಠ-ಔಲಿ ರಸ್ತೆ ಬಳಿಯ ವಸತಿ ಸ್ಥಳದಲ್ಲಿ ಗುರುತಿಸಲಾಗಿದೆ’ ಎಂದು ಎನ್ಆರ್ಎಸ್ಸಿ ವರದಿ ಹೇಳಿದೆ.
- ಇಸ್ರೊ ಬಿಡುಗಡೆ ಮಾಡಿರುವ ಈ ಚಿತ್ರಗಳಲ್ಲಿ ಜೋಶಿಮಠ ಪಟ್ಟಣದ ಕೇಂದ್ರ ಭಾಗ ವ್ಯಾಪಿಸಿರುವ ಸೇನೆಯ ಹೆಲಿಪ್ಯಾಡ್ ಮತ್ತು ನರಸಿಂಗ ದೇವಸ್ಥಾನ ಭೂಕುಸಿತದ ವಲಯದಲ್ಲಿ ಕಾಣಿಸಿವೆ.
ಕಾರ್ಟೊಸ್ಯಾಟ್-2
- ಸೂರ್ಯ-ಸಿಂಕ್ರೊನಸ್ ಕಕ್ಷೆಯಲ್ಲಿರುವ ಭೂಮಿಯ ವೀಕ್ಷಣಾ ಉಪಗ್ರಹವಾಗಿದೆ ಮತ್ತು ಕಾರ್ಟೊಸ್ಯಾಟ್ ಸರಣಿಯ ಉಪಗ್ರಹಗಳಲ್ಲಿ ಎರಡನೆಯದು.ಉಪಗ್ರಹವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಿರ್ಮಿಸಿ, ಉಡಾವಣೆ ಮಾಡಿದೆ ಮತ್ತು ನಿರ್ವಹಿಸುತ್ತಿದೆ.
- ಉಡಾವಣಾ ದಿನಾಂಕ: 10 ಜನವರಿ 2007
- ಕಕ್ಷೆಯ ಎತ್ತರ: 630 ಕಿ.ಮೀ
- ಉಡಾವಣಾ ಸ್ಥಳ: ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ
- ತಯಾರಕ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ