Published on: June 1, 2023

ಜ್ಯೂಸ್ ಮಿಷನ್

ಜ್ಯೂಸ್ ಮಿಷನ್

ಸುದ್ದಿಯಲ್ಲಿ ಏಕಿದೆ? ಗುರುವಿನ ಚಂದ್ರಗಳ ಮೇಲ್ಮೈನಲ್ಲಿರುವ ಜೀವಿಗಳ ಕುರುಹು ಪತ್ತೆಗಾಗಿ ಯುರೋಪಿಯನ್ ಸ್ಪೇಸ್ ಏಜೆನ್ಸಿ ಜ್ಯೂಸ್ ಮಿಷನ್ ಅನ್ನು ಸಿದ್ದಪಡಿಸಿದೆ. ಏರಿಯನ್-5 ರಾಕೆಟ್ ಮೂಲಕ ಜ್ಯೂಸ್ ನೌಕೆ ನಭಕ್ಕೆ ಚಿಮ್ಮಲಿದೆ.

ಉದ್ದೇಶ

  • ಗುರು ಗ್ರಹ ಮೂರು ಪ್ರಧಾನ ಉಪಗ್ರಹಗಳನ್ನು ಹೊಂದಿದೆ. ಅವುಗಳೆಂದರೆ ಗ್ಯಾನಿಮೇಡಾ, ಯುರೋಪ ಮತ್ತು ಕ್ಯಾಲಿಸ್ಟೊ. ಈ ಉಪಗ್ರಹಗಳಲ್ಲಿ ಜೀವಿಗಳಿರುವ ಸಾಧ್ಯತೆ ಬಗ್ಗೆ ಪ್ರಬಲ ಶಂಕೆ ಇದೆ. ಈ ಕಾರಣದಿಂದಾಗಿ ಈ ಉಪಗ್ರಹಗಳ ಕುರಿತ ಹೆಚ್ಚಿನ ಸಂಶೋಧನೆಗಾಗಿ ಯೂರೋಪಿಯನ್ ಬಾಹ್ಯಾಕಾಶ ಏಜೆನ್ಸಿ ಜ್ಯೂಸ್ ಮಿಷನ್ ಅನ್ನು ಗುರುವಿನ ಕಕ್ಷೆಗೆ ಕಳುಹಿಸುತ್ತಿದೆ.

ಏನಿದು ಜ್ಯೂಸ್ ಮಿಷನ್?

  • ’ಜ್ಯೂಸ್’ ಎಂದರೆ ಜ್ಯುಪಿಟರ್ ಐಸಿ ಮೂನ್ಸ್ ಎಕ್ಸ್ಪ್ಲೋರರ್(Jupiter Icy Moons Explorer– Juice).
  • 5,963 ಕೆಜಿ ತೂಕದ ನೌಕೆಯು ಬರೋ ಬ್ಬರಿ 8 ವರ್ಷ ಬಾಹ್ಯಾಕಾಶದಲ್ಲಿಪ್ರಯಾಣಿಸಿ 2031ರ ಜುಲೈನಲ್ಲಿ ಗುರು ಗ್ರಹದ ಕಕ್ಷೆಯನ್ನು ಸೇರಲಿದೆ.
  • ಮೊದಲು ಈ ಮಿಷನ್ ಭೂಮಿಯಿಂದ ಸೂರ್ಯನ ದಿಕ್ಕಿನಲ್ಲಿರುವ ಶುಕ್ರ ಗ್ರಹವನ್ನು ತಲುಪಿ, ಅಲ್ಲಿಂದ ಪುನಃ ಭೂಕಕ್ಷೆಗೆ ಬಂದು ನೇರವಾಗಿ ಗುರುಗ್ರಹವನ್ನು ಪ್ರವೇಶಿಸಲಿದೆ.

ಜ್ಯೂಸ್ ಕಾರ್ಯಾಚರಣೆ ಹೇಗಿರಲಿದೆ?

  • ಗುರುವಿನ ಉಪಗ್ರಹಗಳಾದ ಗ್ಯಾನಿಮೇಡ, ಯುರೋಪ ಮತ್ತು ಕ್ಯಾಲಿಸ್ಟೊಗಳನ್ನು ಜ್ಯೂಸ್ ಮಿಷನ್ ಸುತ್ತು ಹಾಕಲಿದೆ. ಗುರುವಿನ ಉಪಗ್ರಹಗಳಿಗಾಗಿಯೇ ವಿಶೇಷವಾಗಿ ಸಿದ್ಧಪಡಿಸಲಾಗಿರುವ ಮೊಟ್ಟಮೊದಲ ಬಾಹ್ಯಾಕಾಶ ನೌಕೆ ಇದಾಗಿದೆ.
  • ಕ್ಯಾಲಿಸ್ಟೊ ಸುತ್ತಲೂ 21 ಬಾರಿ, ಗ್ಯಾನಿಮೇಡಾ ಸುತ್ತ 12 ಮತ್ತು ಯುರೋಪವನ್ನು ಎರಡು ಬಾರಿ ಇದು ಸುತ್ತಲಿದೆ.
  • ಸಮೀಪದಿಂದ ಅವುಗಳ ಚಿತ್ರವನ್ನು ಸೆರೆಹಿಡಿದು ಭೂಮಿಗೆ ಕಳುಹಿಸಲಿದೆ. ಹಿಮಾವೃತ ಸಮುದ್ರಗಳ ಬಗೆಗಿನ ಸಂಶೋಧನೆಗೆ ಈ ಫೋಟೋಗಳು ನೆರವಾಗಲಿವೆ.
  • ಗುರುವಿನ ಉಪಗ್ರಹಗಳ ಭೌಗೋಳಿಕ ತನಿಖೆಗೆ ರಿಮೋಟ್ ಸೆನ್ಸಿಂಗ್ ನೆರವಾಗಲಿದೆ.

ಗುರು ಉಪಗ್ರಹಗಳ ಪ್ರಾಮುಖ್ಯ

  • ಗುರು ಗ್ರಹದ ಮೂರು ಉಪಗ್ರಹಗಳಲ್ಲಿ ಹಿಮಾವೃತ ಸಮುದ್ರಗಳಿದ್ದು ಇವು ಭೂಮಿ ಮೇಲಿನ ಸಮುದ್ರದ ರಚನೆಯನ್ನೇ ಹೋಲುತ್ತಿವೆ ಎಂಬುದು ವಿಜ್ಞಾನಿಗಳ ಊಹೆಯಾಗಿದೆ. ಒಂದು ವೇಳೆ ಅಲ್ಲಿ ಜೀವಿಗಳ ಕುರುಹು ಪತ್ತೆಯಾದರೆ ಅನ್ಯಗ್ರಹ ಜೀವಿಗಳ ಅಸ್ತಿತ್ವದ ಪರಿಕಲ್ಪನೆ ನೈಜತೆ ಪಡೆದುಕೊಳ್ಳುತ್ತದೆ. ವಿಜ್ಞಾನಿಗಳು ಈ ಹಿಂದೆ ಶುಕ್ರ ಮತ್ತು ಮಂಗಳ ಗ್ರಹಗಳು ಮನುಷ್ಯರ ವಾಸ ಯೋಗ್ಯ ಸ್ಥಳವೆಂದು ಊಹಿಸಿದ್ದರು. ಆದರೆ ಅದು ಅಸಾಧ್ಯ ಎನ್ನುವುದು ಖಚಿತವಾಗುತ್ತಿದೆ. ಶುಕ್ರ ಗ್ರಹದ ತಾಪಮಾನ 475 ಡಿಗ್ರಿ ಸೆ. ಆಗಿರುವುದರಿಂದ ಅಲ್ಲಿ ಮನುಷ್ಯ ವಾಸಿಸುವುದು ಕಷ್ಟ. ಲಕ್ಷಾಂತರ ವರ್ಷಗಳ ಹಿಂದೆ ಮಂಗಳ ಗ್ರಹದಲ್ಲಿ ನೀರು ಕಣ್ಮರೆಯಾಗಿರುವ ಸಂಗತಿ ಸಂಶೋಧನೆಗಳಿಂದ ತಿಳಿಯುತ್ತಿದೆ. ಈ ಕಾರಣದಿಂದ ಗುರುವಿನ ಉಪಗ್ರಹಗಳು ಭರವಸೆ ಹುಟ್ಟಿಸಿವೆ.

ಗುರು ಗ್ರಹ

  • ಭೂಮಿಯಿಂದ 890 ದಶಲಕ್ಷ ಕಿಲೋ ಮೀಟರ್ ದೂರದಲ್ಲಿರುವ ಗುರು ಗ್ರಹವು ಸೌರಮಂಡಲದ ಅತಿ ದೊಡ್ಡ ಗ್ರಹವಾಗಿದೆ.
  • ಗಾತ್ರದಲ್ಲಿ  ಭೂಮಿಗಿಂತ 11 ಪಟ್ಟು ದೊಡ್ಡದಾಗಿದೆ. ಕ್ಷುದ್ರಗ್ರಹಗಳನ್ನು ತನ್ನತ್ತ ಸೆಳೆದುಕೊಂಡು ಉಪಗ್ರಹ ಮಾಡಿಕೊಂಡ ದೈತ್ಯ ಗ್ರಹ ಇದು.
  • ಇದರ ವಾಯುಗೋಳವು ಜಲಜನಕ, ಮೀಥೇನ್ ಮತ್ತು ಹೀಲಿಯಂಗಳಿಂದ ಆವೃತವಾಗಿದೆ.
  • ಈ ಗ್ರಹವನ್ನು ಕಂಡುಹಿಡಿದವರು ಗೆಲಿಲಿಯೋ ಗೆಲಲಿ. ಗೆಲಿಲಿಯೋ ಕಂಡು ಹಿಡಿದ ನಾಲ್ಕು ಉಪಗ್ರಹಗಳೆಂದರೆ ಕ್ಯಾಲಿಸ್ಟೊ, ಯುರೋಪ, ಗ್ಯಾನಿಮೆಡ ಮತ್ತು ಐಯೊಹೊ.
  • ಇವುಗಳಲ್ಲಿ ಎಂಟು ಜೀವಂತ ಜ್ವಾಲಾಮುಖಿಗಳಿವೆ. ಸೌರಮಂಡಲದಲ್ಲಿಯೇ ಅತ್ಯಂತ ದೊಡ್ಡದಾದಂತಹ ಉಪಗ್ರಹ ಗ್ಯಾನಿಮೇಡ.
  • ಗುರು ಗ್ರಹವು ಅತಿ ಹೆಚ್ಚು ಗುರುತ್ವ ಹೊಂದಿರುವ ಗ್ರಹವಾಗಿದೆ. ಕಾರಣ ಇದರಲ್ಲಿಅತಿ ಹೆಚ್ಚು ದ್ರವ್ಯತ್ವ(ತೂಕ)ಇದೆ.
  • ಈ ಗ್ರಹವು ಅತಿ ಕಡಿಮೆ ಅಕ್ಷ ಭ್ರಮಣೆ ಹೊಂದಿದೆ (9 ಗಂಟೆ ಮತ್ತು 56 ನಿಮಿಷ ). ಇದರ ಅಧ್ಯಯನಕ್ಕೆ ನಾಸಾ ಕಳುಹಿಸಿರುವ ಉಪಗ್ರಹ ಜುನೋ ಆಗಿದೆ.

ನಿಮಗಿದು ತಿಳಿದಿರಲಿ

  • ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಕೂಡ ಗುರುವಿನ ಕಕ್ಷೆಗೆ ‘ಯುರೋಪ ಕ್ಲಿಪ್ಪರ್’ ಎಂಬ ಬಾಹ್ಯಾಕಾಶ ನೌಕೆಯನ್ನು 2024ರ ಅಕ್ಟೋಬರ್ 10ರಂದು ಕಳುಹಿಸಲಿದೆ. ಆದರೆ ಇದು ಕೇವಲ ಆರು ವರ್ಷಗಳಲ್ಲಿ 2030ಕ್ಕೆ ಗುರುವಿನ ಕಕ್ಷೆ ತಲುಪಲಿದೆ.