Published on: March 14, 2023

ಟಿಬಿ ಮುಕ್ತ ಭಾರತ ಉಪಕ್ರಮ

ಟಿಬಿ ಮುಕ್ತ ಭಾರತ ಉಪಕ್ರಮ

ಸುದ್ದಿಯಲ್ಲಿ ಏಕಿದೆ? ಕೇಂದ್ರ ಸರ್ಕಾರದ ಟಿಬಿ ಮುಕ್ತ ಭಾರತ ಅಭಿಯಾನದ ‘ನಿ-ಕ್ಷಯ ಮಿತ್ರ’ದ ಅಂಗವಾಗಿ ಕರ್ನಾಟಕ ರಾಜ್ಯಪಾಲರಾದ ತಾವರಚಂದ್ ಗೆಲ್ಹೋಟ್ ಅವರು 100 ಕ್ಷಯ ರೋಗಿಗಳ ದತ್ತು ಪಡೆದಿದ್ದಾರೆ.

ಮುಖ್ಯಾಂಶಗಳು

  • 5 ಲಕ್ಷ ನೋಂದಾಯಿತ ಟಿಬಿ ರೋಗಿಗಳನ್ನು ಹೊಂದಿರುವ ‘ನಿ-ಕ್ಷಯ್ 2.0’ ಪೋರ್ಟಲ್ ಮೂಲಕ ಟಿಬಿ ರೋಗಿಗಳಿಗೆ ಸಮುದಾಯದ ಸಹಭಾಗಿತ್ವವನ್ನು ಒದಗಿಸಿ, ಅದರಲ್ಲಿ 8.9 ಲಕ್ಷ ಸಕ್ರಿಯ ಟಿಬಿ ರೋಗಿಗಳು ದತ್ತು ತೆಗೆದುಕೊಳ್ಳಲು ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ.
  • ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಮಿಷನ್, ಕರ್ನಾಟಕ ಟಿಬಿ ಸೆಲ್ ಮತ್ತು ರಾಜಭವನದಿಂದ ಈ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.
  • ಇಲ್ಲಿಯವರೆಗೆ, ಕರ್ನಾಟಕದಲ್ಲಿ ಗುರುತಿಸಲಾದ 39,745 ಟಿಬಿ ರೋಗಿಗಳ ಪೈಕಿ 25,895 ರೋಗಿಗಳು ಪೋಶಣ್ ಆಧಾರ್‌ಗೆ ಒಪ್ಪಿಗೆ ನೀಡಿದ್ದಾರೆ ಮತ್ತು ಅವರಲ್ಲಿ 25,110 ರೋಗಿಗಳನ್ನು ದತ್ತು ಪಡೆಯಲಾಗಿದೆ ಎಂದು ತಿಳಿದುಬಂದಿದೆ.
  • ಕರ್ನಾಟಕದ ಆರೋಗ್ಯ ಇಲಾಖೆಯು “ಕ್ಷಯ ಮುಕ್ತ ಕರ್ನಾಟಕ-2025′ ಕಾರ್ಯತಂತ್ರವನ್ನು ಅಳವಡಿಸಿಕೊಂಡು ಸಂಘ-ಸಂಸ್ಥೆಗಳು, ಕಂಪೆನಿ ಗಳು, ಎನ್ಜಿಒಗಳು ಕ್ಷಯ ರೋಗಿಗಳನ್ನು ದತ್ತು ಪಡೆದು ಅವರಿಗೆ ಅಗತ್ಯ ಪೌಷ್ಟಿಕಾಂಶ ಪೂರೈಸಲಾರಂಭಿಸಿದೆ.

ಉದ್ದೇಶ

2025ರ ವೇಳೆಗೆ ಕ್ಷಯ (ಟಿಬಿ) ರೋಗ ನಿರ್ಮೂಲನೆ ಉದ್ದೇಶದಿಂದ ಆರಂಭಿಸಿರುವ “ಪ್ರಧಾನಮಂತ್ರಿ ಕ್ಷಯ ಮುಕ್ತ ಭಾರತ ಅಭಿಯಾನ’ದ ಭಾಗವಾಗಿ ಸೆಪ್ಟಂಬರ್ನಿಂದ “ನಿ-ಕ್ಷಯ ಮಿತ್ರ’ ಯೋಜನೆ ಮೂಲಕ ರೋಗಿಗಳಿಗೆ ಆಹಾರದ ಕಿಟ್ ನೀಡಲಾಗುತ್ತಿದೆ.

ಏನಿದು ನಿ-ಕ್ಷಯ ಮಿತ್ರ?

  • ಕ್ಷಯ ರೋಗಿಗಳು ಮತ್ತು ದಾನಿಗಳ ವಿವರಗಳನ್ನು ನಿ-ಕ್ಷಯ ತಂತ್ರಾಂಶದಲ್ಲಿ ದಾಖಲಿಸಿ ದಾನಿಗಳು ರೋಗಿಗಳನ್ನು ದತ್ತು ಪಡೆಯಲು ಅವಕಾಶ ಕಲ್ಪಿಸಲಾಗುತ್ತಿದೆ.
  • ಈ ತಂತ್ರಾಂಶದಿಂದ ದೇಶದಲ್ಲಿ ಎಷ್ಟು ರೋಗಿಗಳಿಗೆ ಯಾವ ದಾನಿಗಳು ಕಿಟ್ ಒದಗಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗುತ್ತದೆ.
  • ಕ್ಷಯ ರೋಗಿಗಳಿಗೆ ಕನಿಷ್ಠ 6 ತಿಂಗಳು ಪೌಷ್ಟಿಕ ಆಹಾರ ಲಭಿಸಿದಾಗ ಅವರ ಜೀವ ನಿರೋಧಕ ಶಕ್ತಿ ಹೆಚ್ಚಳಗೊಂಡು ರೋಗ ನಿವಾರಣೆಗೆ ದೇಹ ಸ್ಪಂದಿಸಲು ಆರಂಭಿಸುತ್ತದೆ.