Published on: July 19, 2022
ಟೆಂಟ್ ಟೂರಿಸಂ
ಟೆಂಟ್ ಟೂರಿಸಂ

ಸುದ್ದಿಯಲ್ಲಿ ಏಕಿದೆ?
ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಬೂಸ್ಟ್ ನೀಡುವ ಉದ್ದೇಶದಿಂದ ಕೆಲವೊಂದು ಹೊಸ ಚಿಂತನೆಗಳನ್ನು ಅಳವಡಿಸಿಕೊಳ್ಳಲಾಗುತ್ತಿದ್ದು, ಇದರಲ್ಲಿ ‘ಟೆಂಟ್ ಟೂರಿಸಂ’ ಕೂಡ ಸೇರಿದೆ. ಇದರ ಪ್ರಾಯೋಗಿಕ ಯೋಜನೆ ಆಗಿ ಮೈಸೂರಿನ ಲಲಿತ ಮಹಲ್ ಹೋಟೆಲ್ ಆವರಣವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಮುಖ್ಯಾಂಶಗಳು
- ಪ್ರವಾಸೋದ್ಯಮಕ್ಕೆ ಹೊಸ ಆಯಾಮ ನೀಡುವ ದೃಷ್ಟಿಯಿಂದ ಇದೀಗ ರಾಜ್ಯದಲ್ಲಿ ‘ಟೆಂಟ್ ಟೂರಿಸಂ’ ಅಭಿವೃದ್ಧಿಪಡಿಸಲಾಗುತ್ತಿದೆ.
- ಈಗಾಗಲೇ ಕೇರಳ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಈ ಟೆಂಟ್ ಟೂರಿಸಂ ಜನಪ್ರಿಯವಾಗಿದೆ.
- ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ವರ್ದಿಸುವ ಉದ್ದೇಶದಿಂದ ಕೆಲವೊಂದು ಹೊಸ ಚಿಂತನೆಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಈ ಯೋಜನೆಯಿಂದ ಪ್ರವಾಸಿಗರು ಹಾಗೂ ಮಾಲೀಕರಿಗೆ ಸಾಕಷ್ಟು ಪ್ರಯೋಜನವಾಗಲಿದೆ. ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಲಿದೆ.
- ಪ್ರವಾಸಿ ತಾಣಗಳ ಬಳಿ ಕಟ್ಟಡ ಕಟ್ಟಲು ಅವಕಾಶ ಇಲ್ಲ. ಇದರಿಂದಾಗಿ ವಾಸ್ತವ್ಯದ ಕೊರತೆಯೂ ಇದೆ. ಟೆಂಟ್‌ಗಳ ನಿರ್ಮಾಣದ ಮೂಲಕ ಈ ಸಮಸ್ಯೆ ನಿವಾರಣೆಯೊಂದಿಗೆ ಲಾಭ ಕೂಡ ಗಳಿಸಬಹುದು. ಪ್ರವಾಸಿಗಗರು ಉತ್ತಮ ಸೌಲಭ್ಯವನ್ನೂ ಹೊಂದಬಹುದು.
ಉದ್ದೇಶ
- ಸಾಮಾನ್ಯವಾಗಿ ಪ್ರವಾಸಿ ತಾಣಗಳಿಂದ ವಾಸ್ತವ್ಯಕ್ಕೆ ಸಾಕಷ್ಟು ದೂರ ತೆರಳಬೇಕಾಗುತ್ತದೆ. ಅದರಲ್ಲಿಯೂ ಸಂಜೆಯ ನಂತರ ವಾಸ್ತವ್ಯದ ಸಮಸ್ಯೆಯಿಂದಾಗಿ ಹಲವು ಪ್ರವಾಸಿಗರು ಇಂತಹ ಸ್ಥಳಗಳನ್ನು ನೋಡಲು ಹಿಂಜರಿಯುತ್ತಾರೆ. ಇದರಿಂದಾಗಿ ಈ ತಾಣಗಳ ಸಮೀಪವೇ ಟೆಂಟ್‌ಗಳನ್ನು ನಿರ್ಮಿಸಿ ಪ್ರವಾಸಿಗರಿಗೆ ವಾಸ್ತವ್ಯ ಕಲ್ಪಿಸುವುದು ಟೆಂಟ್ ಟೂರಿಸಂನ ಉದ್ದೇಶ.
ಏನಿದು ಟೆಂಟ್ ಟೂರಿಸಂ?
- ಐತಿಹಾಸಿಕ ತಾಣಗಳು, ಖ್ಯಾತ ಪ್ರವಾಸಿ ಸ್ಥಳಗಳು, ಧಾರ್ಮಿಕ ಕ್ಷೇತ್ರಗಳು, ಪ್ರಕೃತಿಯ ರಮಣೀಯ ಪ್ರದೇಶಗಳಲ್ಲಿ ಪ್ರವಾಸಿಗರ ವಾಸ್ತವ್ಯಕ್ಕೆ ಅತ್ಯಾಧುನಿಕ ಟೆಂಟ್‌ಗಳನ್ನು ಹಾಕುವುದು. ಇದು ಪ್ರವಾಸಿಗರಿಗೆ ಹೊಸ ಅನುಭವವಾಗಲಿದೆ.
ಆಗುವ ಲಾಭವೇನು?
- ಪ್ರವಾಸಿ ತಾಣಗಳಿಂದ ರೆಸಾರ್ಟ್, ಹೋಟೆಲ್, ಹೋಂಸ್ಟೇಗಳಿಗೆ ಸಾಕಷ್ಟು ದೂರ ತೆರಳಬೇಕಿರುವುದರ ಅನಾನುಕೂಲವನ್ನು ತಪ್ಪಿಸುವುದರ ಜೊತೆ ಇನ್ನಷ್ಟು ಪ್ರಯೋಜನವಾಗಲಿದೆ. ಸಾಮಾನ್ಯವಾಗಿ ಪ್ರವಾಸಿಗರ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಬೇಕಿದ್ದಲ್ಲಿ ಭಾರೀ ಬಂಡವಾಳ ಹೂಡಬೇಕಾಗುತ್ತದೆ.
- ಹೋಟೆಲ್, ಹೋಂಸ್ಟೇಗಳ ಕಟ್ಟಡ ನಿರ್ಮಾಣಕ್ಕೆ ಲಕ್ಷಾಂತರ ರೂ.ಗಳ ಅಗತ್ಯವಿದೆ. ಆದರೆ, ಟೆಂಟ್ ಟೂರಿಸಂ ಭಾರೀ ಬಂಡವಾಳದ ಅನಿವಾರ್ಯತೆಯನ್ನು ನೀಗಿಸಲಿದೆ. ಕಡಿಮೆ ವೆಚ್ಚದಲ್ಲಿ ಪ್ರವಾಸಿಗರ ಅಗತ್ಯಕ್ಕೆ ತಕ್ಕಂತೆ ಟೆಂಟ್‌ಗಳನ್ನು ನಿರ್ಮಿಸಬಹುದು.
- ಅಷ್ಟೇ ಅಲ್ಲ ಹೋಟೆಲ್ ಕೊಠಡಿಗಳ ಏಕಾತಾನತೆ ಹಾಗೂ ಕಿರಿಕಿರಿಯಿಂದಲೂ ಪ್ರವಾಸಿಗರೂ ಮುಕ್ತಿ ಪಡೆಯಬಹುದು. ತಾವು ಇಚ್ಛಿಸಿದ ತಾಣಗಳ ಸಮೀಪವೇ ಬಯಲಿನಲ್ಲಿ ನಿರ್ಮಿಸುವ ಟೆಂಟ್‌ಗಳಲ್ಲಿ ತಂಗಬಹುದು. ಪ್ರಕೃತಿ ಹಾಗೂ ಆ ತಾಣಗಳ ನಡುವೆ ರಾತ್ರಿಗಳನ್ನು ಕಳೆಯುವುದೇ ಒಂದು ಅವರ್ಣನೀಯ ಅನುಭವವಾಗಿದೆ.
ಉದ್ಯೋಗ ಅವಕಾಶ ಹೆಚ್ಚಳ
- ಟೆಂಟ್ ಟೂರಿಸಂನಿಂದಾಗಿ ಸಾಕಷ್ಟು ಉದ್ಯೋಗ ಅವಕಾಶ ಸೃಷ್ಟಿಯಾಗಲಿದೆ. ಹೊಸಬರು ಈ ಉದ್ಯಮಕ್ಕೆ ಎಂಟ್ರಿ ನೀಡಲಿದ್ದಾರೆ. ಕಡಿಮೆ ಬಂಡವಾಳ ಹಾಕಿ ಹೆಚ್ಚು ಲಾಭ ಪಡೆಯಬಹುದು. ಇಲ್ಲಿ ನಿರ್ವಹಣೆ, ಆಹಾರ ಹಾಗೂ ಇನ್ನಿತರ ಸೇವಾ ಕ್ಷೇತ್ರದಲ್ಲಿ ಯುವ ಜನತೆಗೆ ಉದ್ಯೋಗ ದೊರೆಯಲಿದೆ.
- ವೃತ್ತಿಗಾಗಿ ಗ್ರಾಮಾಂತರ ಪ್ರದೇಶಗಳಿಂದ ನಗರಕ್ಕೆ ವಲಸೆ ಹೋಗುವುದು ಕೂಡ ತಪ್ಪಲಿದೆ. ಗ್ರಾಮಾಂತರ ಪ್ರದೇಶಗಳು ಹಾಗೂ ಪ್ರವಾಸಿ ತಾಣಗಳಲ್ಲಿಯೇ ದುಡಿಮೆ ಲಭ್ಯವಾಗಲಿದೆ.
ರಾಜ್ಯದ ಇತರೆಡೆಗೂ ವಿಸ್ತರಣೆ
- ಮೈಸೂರಿನಲ್ಲಿ ಟೆಂಟ್ ಟೂರಿಸಂ ಅನ್ನು ಪೈಲೆಟ್ ಪ್ರಾಜೆಕ್ಟ್ ಆಗಿ ಪರಿಗಣಿಸಲಿದ್ದು, ಇಲ್ಲಿ ಯಶಸ್ವಿಯಾದ ನಂತರ ಇತರ ಪ್ರಮುಖ ಸ್ಥಳಗಳಿಗೂ ವಿಸ್ತರಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಯೋಜನೆಯ ರೂಪುರೇಷೆ ತಯಾರಿಸುತ್ತಿದ್ದಾರೆ.
ಈ ಟೂರಿಸಂ ನ ವಿಶೇಷತೆಗಳು
- ಈಗಾಗಲೇ ರಾಜಸ್ಥಾನದ ಅರಮನೆ ಬಳಿ ಯಶಸ್ವಿಯಾಗಿದೆ.
- ಕೇಂದ್ರ ಸರಕಾರವೂ ಟೆಂಟ್ ಟೂರಿಸಂ ಗೈಡ್‌ಲೈನ್ಸ್ ತಯಾರಿಸಿದೆ
- ಅಧಿಕೃತವಾಗಿ ನೋಂದಾಯಿಸಿಕೊಂಡು ಈ ಉದ್ಯಮದಲ್ಲಿ ತೊಡಗಬಹುದು
- ಸಾಮಾನ್ಯ ಹಾಗೂ ಲಕ್ಸುರಿ ಎಂಬ ಎರಡು ವಿಭಾಗಗಳಿರುತ್ತವೆ
- ಕಡಿಮೆ ಬಂಡವಾಳದಲ್ಲಿ ಹೆಚ್ಚು ಲಾಭವಾಗಲಿದೆ.
ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಇಲಾಖೆ (ಕೆಎಲ್‌ಸಿಡಿಎ) ಅನುಮೋದನೆ ನೀಡಿದೆ.