Published on: July 19, 2022

ಟೆಂಟ್ ಟೂರಿಸಂ

ಟೆಂಟ್ ಟೂರಿಸಂ

buy isotretinoin online in canada ಸುದ್ದಿಯಲ್ಲಿ ಏಕಿದೆ?

how to buy Quetiapine without a prescription ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಬೂಸ್ಟ್‌ ನೀಡುವ ಉದ್ದೇಶದಿಂದ ಕೆಲವೊಂದು ಹೊಸ ಚಿಂತನೆಗಳನ್ನು ಅಳವಡಿಸಿಕೊಳ್ಳಲಾಗುತ್ತಿದ್ದು, ಇದರಲ್ಲಿ ‘ಟೆಂಟ್‌ ಟೂರಿಸಂ’ ಕೂಡ ಸೇರಿದೆ. ಇದರ ಪ್ರಾಯೋಗಿಕ ಯೋಜನೆ ಆಗಿ ಮೈಸೂರಿನ ಲಲಿತ ಮಹಲ್‌ ಹೋಟೆಲ್‌ ಆವರಣವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಮುಖ್ಯಾಂಶಗಳು

  • ಪ್ರವಾಸೋದ್ಯಮಕ್ಕೆ ಹೊಸ ಆಯಾಮ ನೀಡುವ ದೃಷ್ಟಿಯಿಂದ ಇದೀಗ ರಾಜ್ಯದಲ್ಲಿ ‘ಟೆಂಟ್‌ ಟೂರಿಸಂ’ ಅಭಿವೃದ್ಧಿಪಡಿಸಲಾಗುತ್ತಿದೆ.
  • ಈಗಾಗಲೇ ಕೇರಳ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಈ ಟೆಂಟ್‌ ಟೂರಿಸಂ ಜನಪ್ರಿಯವಾಗಿದೆ.
  • ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ವರ್ದಿಸುವ ಉದ್ದೇಶದಿಂದ ಕೆಲವೊಂದು ಹೊಸ ಚಿಂತನೆಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಈ ಯೋಜನೆಯಿಂದ ಪ್ರವಾಸಿಗರು ಹಾಗೂ ಮಾಲೀಕರಿಗೆ ಸಾಕಷ್ಟು ಪ್ರಯೋಜನವಾಗಲಿದೆ. ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಲಿದೆ.
  • ಪ್ರವಾಸಿ ತಾಣಗಳ ಬಳಿ ಕಟ್ಟಡ ಕಟ್ಟಲು ಅವಕಾಶ ಇಲ್ಲ. ಇದರಿಂದಾಗಿ ವಾಸ್ತವ್ಯದ ಕೊರತೆಯೂ ಇದೆ. ಟೆಂಟ್‌ಗಳ ನಿರ್ಮಾಣದ ಮೂಲಕ ಈ ಸಮಸ್ಯೆ ನಿವಾರಣೆಯೊಂದಿಗೆ ಲಾಭ ಕೂಡ ಗಳಿಸಬಹುದು. ಪ್ರವಾಸಿಗಗರು ಉತ್ತಮ ಸೌಲಭ್ಯವನ್ನೂ ಹೊಂದಬಹುದು.

ಉದ್ದೇಶ

  • ಸಾಮಾನ್ಯವಾಗಿ ಪ್ರವಾಸಿ ತಾಣಗಳಿಂದ ವಾಸ್ತವ್ಯಕ್ಕೆ ಸಾಕಷ್ಟು ದೂರ ತೆರಳಬೇಕಾಗುತ್ತದೆ. ಅದರಲ್ಲಿಯೂ ಸಂಜೆಯ ನಂತರ ವಾಸ್ತವ್ಯದ ಸಮಸ್ಯೆಯಿಂದಾಗಿ ಹಲವು ಪ್ರವಾಸಿಗರು ಇಂತಹ ಸ್ಥಳಗಳನ್ನು ನೋಡಲು ಹಿಂಜರಿಯುತ್ತಾರೆ. ಇದರಿಂದಾಗಿ ಈ ತಾಣಗಳ ಸಮೀಪವೇ ಟೆಂಟ್‌ಗಳನ್ನು ನಿರ್ಮಿಸಿ ಪ್ರವಾಸಿಗರಿಗೆ ವಾಸ್ತವ್ಯ ಕಲ್ಪಿಸುವುದು ಟೆಂಟ್‌ ಟೂರಿಸಂನ ಉದ್ದೇಶ.

ಏನಿದು ಟೆಂಟ್ ಟೂರಿಸಂ?

  • ಐತಿಹಾಸಿಕ ತಾಣಗಳು, ಖ್ಯಾತ ಪ್ರವಾಸಿ ಸ್ಥಳಗಳು, ಧಾರ್ಮಿಕ ಕ್ಷೇತ್ರಗಳು, ಪ್ರಕೃತಿಯ ರಮಣೀಯ ಪ್ರದೇಶಗಳಲ್ಲಿ ಪ್ರವಾಸಿಗರ ವಾಸ್ತವ್ಯಕ್ಕೆ ಅತ್ಯಾಧುನಿಕ ಟೆಂಟ್‌ಗಳನ್ನು ಹಾಕುವುದು. ಇದು ಪ್ರವಾಸಿಗರಿಗೆ ಹೊಸ ಅನುಭವವಾಗಲಿದೆ.

 ಆಗುವ ಲಾಭವೇನು?

  • ಪ್ರವಾಸಿ ತಾಣಗಳಿಂದ ರೆಸಾರ್ಟ್‌, ಹೋಟೆಲ್‌, ಹೋಂಸ್ಟೇಗಳಿಗೆ ಸಾಕಷ್ಟು ದೂರ ತೆರಳಬೇಕಿರುವುದರ ಅನಾನುಕೂಲವನ್ನು ತಪ್ಪಿಸುವುದರ ಜೊತೆ ಇನ್ನಷ್ಟು ಪ್ರಯೋಜನವಾಗಲಿದೆ. ಸಾಮಾನ್ಯವಾಗಿ ಪ್ರವಾಸಿಗರ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಬೇಕಿದ್ದಲ್ಲಿ ಭಾರೀ ಬಂಡವಾಳ ಹೂಡಬೇಕಾಗುತ್ತದೆ.
  • ಹೋಟೆಲ್‌, ಹೋಂಸ್ಟೇಗಳ ಕಟ್ಟಡ ನಿರ್ಮಾಣಕ್ಕೆ ಲಕ್ಷಾಂತರ ರೂ.ಗಳ ಅಗತ್ಯವಿದೆ. ಆದರೆ, ಟೆಂಟ್‌ ಟೂರಿಸಂ ಭಾರೀ ಬಂಡವಾಳದ ಅನಿವಾರ್ಯತೆಯನ್ನು ನೀಗಿಸಲಿದೆ. ಕಡಿಮೆ ವೆಚ್ಚದಲ್ಲಿ ಪ್ರವಾಸಿಗರ ಅಗತ್ಯಕ್ಕೆ ತಕ್ಕಂತೆ ಟೆಂಟ್‌ಗಳನ್ನು ನಿರ್ಮಿಸಬಹುದು.
  • ಅಷ್ಟೇ ಅಲ್ಲ ಹೋಟೆಲ್‌ ಕೊಠಡಿಗಳ ಏಕಾತಾನತೆ ಹಾಗೂ ಕಿರಿಕಿರಿಯಿಂದಲೂ ಪ್ರವಾಸಿಗರೂ ಮುಕ್ತಿ ಪಡೆಯಬಹುದು. ತಾವು ಇಚ್ಛಿಸಿದ ತಾಣಗಳ ಸಮೀಪವೇ ಬಯಲಿನಲ್ಲಿ ನಿರ್ಮಿಸುವ ಟೆಂಟ್‌ಗಳಲ್ಲಿ ತಂಗಬಹುದು. ಪ್ರಕೃತಿ ಹಾಗೂ ಆ ತಾಣಗಳ ನಡುವೆ ರಾತ್ರಿಗಳನ್ನು ಕಳೆಯುವುದೇ ಒಂದು ಅವರ್ಣನೀಯ ಅನುಭವವಾಗಿದೆ.

ಉದ್ಯೋಗ ಅವಕಾಶ ಹೆಚ್ಚಳ

  • ಟೆಂಟ್‌ ಟೂರಿಸಂನಿಂದಾಗಿ ಸಾಕಷ್ಟು ಉದ್ಯೋಗ ಅವಕಾಶ ಸೃಷ್ಟಿಯಾಗಲಿದೆ. ಹೊಸಬರು ಈ ಉದ್ಯಮಕ್ಕೆ ಎಂಟ್ರಿ ನೀಡಲಿದ್ದಾರೆ. ಕಡಿಮೆ ಬಂಡವಾಳ ಹಾಕಿ ಹೆಚ್ಚು ಲಾಭ ಪಡೆಯಬಹುದು. ಇಲ್ಲಿ ನಿರ್ವಹಣೆ, ಆಹಾರ ಹಾಗೂ ಇನ್ನಿತರ ಸೇವಾ ಕ್ಷೇತ್ರದಲ್ಲಿ ಯುವ ಜನತೆಗೆ ಉದ್ಯೋಗ ದೊರೆಯಲಿದೆ.
  • ವೃತ್ತಿಗಾಗಿ ಗ್ರಾಮಾಂತರ ಪ್ರದೇಶಗಳಿಂದ ನಗರಕ್ಕೆ ವಲಸೆ ಹೋಗುವುದು ಕೂಡ ತಪ್ಪಲಿದೆ. ಗ್ರಾಮಾಂತರ ಪ್ರದೇಶಗಳು ಹಾಗೂ ಪ್ರವಾಸಿ ತಾಣಗಳಲ್ಲಿಯೇ ದುಡಿಮೆ ಲಭ್ಯವಾಗಲಿದೆ.

ರಾಜ್ಯದ ಇತರೆಡೆಗೂ ವಿಸ್ತರಣೆ

  • ಮೈಸೂರಿನಲ್ಲಿ ಟೆಂಟ್‌ ಟೂರಿಸಂ ಅನ್ನು ಪೈಲೆಟ್‌ ಪ್ರಾಜೆಕ್ಟ್ ಆಗಿ ಪರಿಗಣಿಸಲಿದ್ದು, ಇಲ್ಲಿ ಯಶಸ್ವಿಯಾದ ನಂತರ ಇತರ ಪ್ರಮುಖ ಸ್ಥಳಗಳಿಗೂ ವಿಸ್ತರಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಯೋಜನೆಯ ರೂಪುರೇಷೆ ತಯಾರಿಸುತ್ತಿದ್ದಾರೆ.

ಈ ಟೂರಿಸಂ ನ ವಿಶೇಷತೆಗಳು

  • ಈಗಾಗಲೇ ರಾಜಸ್ಥಾನದ ಅರಮನೆ ಬಳಿ ಯಶಸ್ವಿಯಾಗಿದೆ.
  • ಕೇಂದ್ರ ಸರಕಾರವೂ ಟೆಂಟ್‌ ಟೂರಿಸಂ ಗೈಡ್‌ಲೈನ್ಸ್‌ ತಯಾರಿಸಿದೆ
  • ಅಧಿಕೃತವಾಗಿ ನೋಂದಾಯಿಸಿಕೊಂಡು ಈ ಉದ್ಯಮದಲ್ಲಿ ತೊಡಗಬಹುದು
  • ಸಾಮಾನ್ಯ ಹಾಗೂ ಲಕ್ಸುರಿ ಎಂಬ ಎರಡು ವಿಭಾಗಗಳಿರುತ್ತವೆ
  • ಕಡಿಮೆ ಬಂಡವಾಳದಲ್ಲಿ ಹೆಚ್ಚು ಲಾಭವಾಗಲಿದೆ.

ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಇಲಾಖೆ (ಕೆಎಲ್‌ಸಿಡಿಎ) ಅನುಮೋದನೆ ನೀಡಿದೆ.