Published on: August 27, 2022
ಟೊಮೇಟೊ ಜ್ವರ
ಟೊಮೇಟೊ ಜ್ವರ
ಸುದ್ದಿಯಲ್ಲಿ ಏಕಿದೆ?
ಕೇರಳದಲ್ಲಿ ಟೊಮೇಟೊ ಜ್ವರ ಪ್ರಕರಣಗಳು ವರದಿಯಾಗುತ್ತಿದ್ದು, ಹೈಅಲರ್ಟ್ ಘೋಷಿಸಲಾಗಿದೆ.
ಮುಖ್ಯಾಂಶಗಳು
- ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿಗಳು, ನಾಗರಿಕರು ಕೂಡ ಜಾಗರೂಕರಾಗಿರಬೇಕು ಮತ್ತು ಯಾವುದೇ ರೀತಿಯ ಚರ್ಮದ ದದ್ದುಗಳು ಕಂಡುಬಂದರೆ ತಕ್ಷಣವೇ ವರದಿ ಮಾಡುವಂತೆ ಸೂಚಿಸಲಾಗಿದೆ. ದೇಹದಲ್ಲಿ ಕೆಂಪು ಬಣ್ಣದ ನೋವಿರುವ ಗುಳ್ಳೆಗಳು ಕೈ, ಕಾಲು ಮತ್ತು ಬಾಯಿ ನೋವು ಟೊಮೋಟೊ ಜ್ವರದ ಲಕ್ಷಣಗಳಾಗಿದ್ದು, ಇದು ಹೆಚ್ಚು ಸಾಂಕ್ರಾಮಿಕವಾಗಿದೆ.
ಏನಿದು ಟೊಮೆಟೊ ಜ್ವರ?
- ಟೊಮೆಟೊ ಜ್ವರ ವೈರಲ್ ಜ್ವರವಾಗಿದ್ದು, ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಟೊಮೆಟೊ ಜ್ವರ ಬಾಧಿಸಿದವರಲ್ಲಿ ಜ್ವರದ ಲಕ್ಷಣಗಳು ಅಧಿಕವಾಗಿ ಅನುಭವಕ್ಕೆ ಬರುವುದಿಲ್ಲ. ಜ್ವರ ಬಾಧಿಸಿದ ಮಕ್ಕಳಲ್ಲಿ ತುರಿಕೆ, ಚರ್ಮದ ಅಸ್ವಸ್ಥತೆ, ಉಬ್ಬುವುದು, ಡಿಹೈಡ್ರೇಶನ್ ಜತೆಗೆ ದೇಹದ ಹಲವು ಭಾಗಗಳಲ್ಲಿ ಗುಳ್ಳೆಗಳು ಉಂಟಾಗುತ್ತದೆ. ಈ ಗುಳ್ಳೆಗಳ ಬಣ್ಣ ಸಾಮಾನ್ಯವಾಗಿ ಕೆಂಪು ಬಣ್ಣದ್ದಾಗಿರುತ್ತದೆ. ಅದಕ್ಕಾಗಿಯೇ ಇದನ್ನು ಟೊಮೆಟೊ ಜ್ವರ ಎಂದು ಕರೆಯಲಾಗುತ್ತದೆ.
ಲಕ್ಷಣಗಳು
- ಜ್ವರ
- ಕೈ, ಅಂಗೈ, ಮೊಣಕೈ, ಮೊಣಕಾಲುಗಳ ಮೇಲೆ ದದ್ದು
- ಮೊಣಕೈ, ಅಂಗೈ, ಬಾಯಿಯಲ್ಲಿ ಗುಳ್ಳೆಗಳು
- ಹಸಿದಿದ್ದರೂ ತಿನ್ನಲು ತೊಂದರೆ
- ದೇಹದಲ್ಲಿ ಎದ್ದುಕಾಣುವ ಕೆಂಪು ಗುಳ್ಳೆಗಳು
ಚಿಕಿತ್ಸೆ
- ಟೊಮೆಟೊ ಜ್ವರದ ಚಿಕಿತ್ಸೆಯು ಚಿಕೂನ್‍ಗುನ್ಯಾ, ಡೆಂಗ್ಯೂ ಮತ್ತು ಕೈ, ಕಾಲು ಮತ್ತು ಬಾಯಿ ಕಾಯಿಲೆಯ ಚಿಕಿತ್ಸೆಯಂತೆಯೇ ಇರುತ್ತದೆ.
- ಕಿರಿಕಿರಿ ಮತ್ತು ಗುಳ್ಳೆಗಳ ಪರಿಹಾರಕ್ಕಾಗಿ ಶುಚಿತ್ವ ಮತ್ತು ನೈರ್ಮಲ್ಯತೆಯನ್ನು ಕಾಪಾಡಿಕೊಳ್ಳಬೇಕು. ಸೋಂಕಿತ ಮಕ್ಕಳಿಗೆ ಹೆಚ್ಚು ಕುದಿಸಿ ಆರಿಸಿದ ನೀರನ್ನು ಕುಡಿಸುವ ಮೂಲಕ ನೀರಿನಂಶವನ್ನು ಕಾಪಾಡಿಕೊಳ್ಳಬೇಕು.
-
ಗುಳ್ಳೆಗಳು ತುರಿಸುವುದು ಅಥವಾ ಒಡೆದುಕೊಳ್ಳದಂತೆ ನೋಡಿಕೊಳ್ಳಬೇಕು. ಬಿಸಿ ನೀರಿನಲ್ಲಿಯೇ ಸ್ನಾನ ಮಾಡುವುದು, ಜ್ವರದ ದೀರ್ಘಕಾಲೀನ ಪರಿಣಾಮಗಳನ್ನು ತಪ್ಪಿಸಲು ಸರಿಯಾಗಿ ವಿಶ್ರಾಂತಿ ತೆಗೆದುಕೊಳ್ಳಬೇಕಾಗುತ್ತದೆ.