Published on: June 13, 2022

‘ಟ್ಯಾಕ್ಸಿ ಬಾಟ್’

‘ಟ್ಯಾಕ್ಸಿ ಬಾಟ್’

ಸುದ್ದಿಯಲ್ಲಿ ಏಕಿದೆ?

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಅರೆ ರೋಬೋಟಿಕ್ ಟೋಯಿಂಗ್ ಸಾಧನವನ್ನು ನಿಯೋಜಿಸಿದ ವಿಶ್ವದ ಎರಡನೇ ವಿಮಾನ ನಿಲ್ದಾಣವಾಗಿದೆ.

ಮುಖ್ಯಾಂಶಗಳು

  • ಇದು ಎಂಜಿನ್‌ಗಳ ಬಳಕೆಯಿಲ್ಲದೆ ಪ್ರಯಾಣಿಕರೊಂದಿಗೆ ವಿಮಾನವನ್ನು ಅದರ ಬೋರ್ಡಿಂಗ್ ಗೇಟ್‌ನಿಂದ ರನ್‌ವೇಗೆ ಎಳೆದೊಯ್ಯುತ್ತದೆ.
  • ಪರಿಸರ ಸ್ನೇಹಿ ಈ ಕ್ರಮವು ಇಂಧನವನ್ನು ಉಳಿಸುತ್ತದೆ. ಬೆಂಗಳೂರಿನಿಂದ ವಿಶಾಖಪಟ್ಟಣಂಗೆ ತೆರಳುತ್ತಿದ್ದ ವಿಮಾನ ಈ ಟ್ಯಾಕ್ಸಿಬಾಟ್ ಸೌಲಭ್ಯವನ್ನು ಬಳಸಿದ ಮೊದಲ ವಿಮಾನವಾಗಿದೆ.
  • ಏರ್ ಏಷ್ಯಾದ ಅಧಿಕೃತ ಬಿಡುಗಡೆಯ ಪ್ರಕಾರ, ಇದು ಭಾರತದಲ್ಲಿ ಟ್ಯಾಕ್ಸಿಬಾಟ್‌ನ ವಿಶೇಷ ನಿರ್ವಾಹಕರಾದ ಕೆಎಸ್ ಯು ಏವಿಯೇಷನ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.
  • ಜೆಟ್ ಸ್ಫೋಟ ಮತ್ತು ವಿದೇಶಿ ವಸ್ತುಗಳು ಹಾನಿಯನ್ನು ಕಡಿಮೆಗೊಳಿಸುವುದರೊಂದಿಗೆ ಪಾರ್ಕಿಂಗ್ ಪ್ರದೇಶದಲ್ಲಿ ದಕ್ಷತೆ ಮತ್ತು ಸುರಕ್ಷತೆಯನ್ನು ಹೆಚ್ಚಿಸುತ್ತದೆ.
  • ಕೆಎಸ್ ಯು ಏವಿಯೇಷನ್ ತನ್ನ ಪಾಲುದಾರರೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ಮುಂದಿನ ಐದು ವರ್ಷಗಳಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏಳು ಟ್ಯಾಕ್ಸಿಬಾಟ್ ಘಟಕಗಳನ್ನು ನಿಯೋಜಿಸಲಾಗುವುದು, ಇದರಿಂದ ವಿಮಾನ ನಿಲ್ದಾಣದಲ್ಲಿ ವಾರ್ಷಿಕ 35,000 ಟನ್ ಕಾರ್ಬನ್ ಹೊರಸೂಸುವಿಕೆ ಕಡಿಮೆಯಾಗಲಿದೆ.
  • ಜಗತ್ತಿನಲ್ಲಿ ಟ್ಯಾಕ್ಸಿಬಾಟ್ ನಿಯೋಜಿಸಿದ ಎರಡನೇ ವಿಮಾನ ನಮ್ಮದಾಗಿದೆ. ಏರ್ ಏಷ್ಯಾ ಇಂಡಿಯಾದೊಂದಿಗೆ ಈ ತಂತ್ರಜ್ಞಾನವನ್ನು ವಿಮಾನ ನಿಲ್ದಾಣದಲ್ಲಿ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಏರ್ ಲೈನ್ ಪಾಲುದಾರರೊಂದಿಗೆ ಇದನ್ನು ಹೆಚ್ಚಿಸುವ ಯೋಚನೆ ಇದೆ.
  • ಟ್ಯಾಕ್ಸಿ ಬಾಟ್ ತಂತ್ರಜ್ಞಾನದಿಂದ ಕಾರ್ಯಾಚರಣೆಯಲ್ಲಿ ವಿಭಿನ್ನತೆ ಹಾಗೂ ದಕ್ಷತೆ ಮೂಡಲಿದ್ದು, ಸ್ವಚ್ಛ ಮತ್ತು ಹಸಿರು ಪರಿಸರ ವ್ಯವಸ್ಥೆಗೆ ಪೂರಕವಾಗಿದೆ.

ಉದ್ದೇಶ

  • ಟಾಕ್ಸಿಬಾಟ್ ಟೋಯಿಂಗ್ ಸಾಧನದಿಂದ ಇಂಧನ ಉಳಿತಾಯವಾಗಲಿದೆ. ಕಡಿಮೆ ಪ್ರಮಾಣದಲ್ಲಿ ಇಂಗಾಲವನ್ನು ಹೊರಸೂಸುತ್ತದೆ. ಶಬ್ದ ಮಾಲಿನ್ಯವೂ ಕಡಿಮೆಯಾಗಿರುತ್ತದೆ.