‘ಡಿಜಿಟಲ್ ಸಾಕ್ಷರತೆ ತರಬೇತಿ ಕಾರ್ಯಕ್ರಮ’
‘ಡಿಜಿಟಲ್ ಸಾಕ್ಷರತೆ ತರಬೇತಿ ಕಾರ್ಯಕ್ರಮ’
ಸುದ್ದಿಯಲ್ಲಿ ಏಕಿದೆ? ಕರ್ನಾಟಕ ರಾಜ್ಯ ಸರ್ಕಾರ ಆಯ್ದ 35 ಗ್ರಾಮ ಪಂಚಾಯಿತಿಗಳಲ್ಲಿ ‘ಡಿಜಿಟಲ್ ಸಾಕ್ಷರತೆ ತರಬೇತಿ ಕಾರ್ಯಕ್ರಮ’ವನ್ನು ಅನುಷ್ಠಾನಗೊಳಿಸಿದೆ.
ಮುಖ್ಯಾಂಶಗಳು
- 16ರಿಂ ದ 60 ವರ್ಷದ ಎಲ್ಲ ಗ್ರಾಮಸ್ಥರು ಡಿಜಿಟಲ್ ಸಾಕ್ಷರರಾದರೆ ಅಂತಹ ಗ್ರಾಮವನ್ನು ‘ಸಂಪೂರ್ಣ ಡಿಜಿಟಲ್ ಸಾಕ್ಷರತಾ ಗ್ರಾಮ’ ಎಂದು ಘೋಷಿಸಲಾಗುತ್ತದೆ.
- ಕೇರಳದ ಕೆಲ ಗ್ರಾಮ ಪಂಚಾಯಿತಿಗಳಲ್ಲಿ ಸಂಪೂರ್ಣ ತಂತ್ರಜ್ಞಾನ ಸಾಕ್ಷರತೆ ಘೋಷಣೆಯಾಗಿದೆ. ಇದೇ ಮಾದರಿ ಇಲ್ಲಿ ಅನುಸರಿಸಿ ಈ ವರ್ಷದ ಡಿಸೆಂಬರ್ ಅಂತ್ಯದೊಳಗೆ 35 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ‘ಸಂಪೂರ್ಣ ಡಿಜಿಟಲ್ ಸಾಕ್ಷರತೆ’ ಸಾಧಿಸಲು ರಾಜ್ಯ ಸರ್ಕಾರ ಗುರಿ ಹೊಂದಿದೆ.
- ರೈತರು, ಕೂಲಿ ಕಾರ್ಮಿಕರು, ಅಂಗವಿಕಲರು, ಮಹಿಳೆಯರು ಸೇರಿ ಅಕ್ಷರಸ್ಥರು ಮತ್ತು ಅನಕ್ಷರಸ್ಥರು ಈ ಎರಡೂ ವರ್ಗದವರಿಗೂ ಗ್ರಾಮ ಪಂಚಾಯಿತಿಯ ಗ್ರಂಥಾಲಯದಲ್ಲಿ ತರಬೇತಿ ನೀಡಲಾಗುತ್ತದೆ.
ಸಹಯೋಗ :ಗ್ರಾಮೀಣ ಅಭಿವೃದ್ದಿ ಪಂಚಾಯತ್ ರಾಜ್ ಇಲಾಖೆಯು ಡೆಲ್ ಸಂಸ್ಥೆ ಮತ್ತು ಶಿಕ್ಷಣ ಫೌಂಡೇಷನ್ ಸಹಯೋಗದಲ್ಲಿ ‘ಗ್ರಾಮ ಡಿಜಿ ವಿಕಸನ’ ಕಾರ್ಯ ಕ್ರಮದಡಿ, ಗ್ರಾಮಸ್ಥರಿಗೆ ಡಿಜಿಟಲ್ ಸಾಧನ ಬಳಸುವ ಕುರಿತು ಉಚಿತ ತರಬೇತಿ ನೀಡಲಾಗುತ್ತದೆ.
ಉದ್ದೇಶ: ಗ್ರಾಮಗಳು ಅಭಿವೃದ್ಧಿ ಆಗುವುದರ ಜೊತೆಗೆ ಗ್ರಾಮಸ್ಥರು ನಿತ್ಯದ ಚಟುವಟಿಕೆಗಳಿಗೆ ಡಿಜಿಟಲ್ ಜ್ಞಾನ ಹೊಂದಬೇಕು. ಸ್ಮಾರ್ಟ್ ಫೋನ್ ಬಳಕೆ, ಸರ್ಚ್ , ಅಂತರ್ಜಾಲ ಸುರಕ್ಷತೆ, ವಾಟ್ಸ್ಆ್ಯಪ್, ಬ್ಯಾಂಕಿಂಗ್ ಆ್ಯಪ್ಗಳ ಬಳಕೆ, ಆನ್ಲೈನ್ ಸೇವೆ ಪಡೆಯುವಿಕೆ ಮತ್ತು ಡಿಜಿಟಲ್ ಪೇಮೆಂಟ್ಸ್ ಕುರಿತು ಅರಿವು ಮೂಡಿಸಲಾಗುತ್ತಿದೆ.
ಸ್ವಯಂ ಸೇವಕರ ಆಯ್ಕೆ: ‘ಗ್ರಾಮದ ಪದವೀಧರರನ್ನು ಗುರುತಿಸಿ, ವಾರ್ಡ್ ಹಂತದಲ್ಲಿ ಸ್ವಯಂ ಸೇವಕರನ್ನಾಗಿ ನೇಮಿಸಿಕೊಂಡು, ಕಾರ್ಯಕ್ರಮದ ಕುರಿತು ಮಾಹಿತಿ ನೀಡಲಾಗುತ್ತದೆ. ಸ್ವಯಂ ಸೇವಕರು ತಮ್ಮ ಗ್ರಾಮಸ್ಥರಿಗೆ ಪ್ರಾಯೋಗಿಕ ತರಬೇತಿ ನೀಡುತ್ತಾರೆ.