Published on: December 3, 2022

‘ಡಿಜಿ ಯಾತ್ರಾ’

‘ಡಿಜಿ ಯಾತ್ರಾ’

http://elkaesthetic.com/wp-content/plugins/wp-automatic/changelog ಸುದ್ದಿಯಲ್ಲಿ ಏಕಿದೆ?

Severn ಪ್ರಯಾಣಿಕರಿಗೆ ವಿಮಾನ ನಿಲ್ದಾಣದೊಳಗೆ ಹೆಚ್ಚು ಅಡೆತಡೆ ಇಲ್ಲದೆ ಪ್ರವೇಶ ಕಲ್ಪಿಸುವ ಹಾಗೂ ವಿಮಾನ ಹತ್ತುವ ಪ್ರಕ್ರಿಯೆಯನ್ನು ಮತ್ತಷ್ಟು ಸುಲಭಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ರೂಪಿಸಿರುವ ‘ಡಿಜಿ ಯಾತ್ರಾ’ ಸೇವೆಗೆ ಚಾಲನೆ ನೀಡಲಾಗಿದೆ. 

ಮುಖ್ಯಾಂಶಗಳು

  • ಮೊದಲ ಹಂತದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ನವದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ವಾರಾಣಸಿಯ ವಿಮಾನ ನಿಲ್ದಾಣದಲ್ಲಿ ಈ ಸೇವೆ ಆರಂಭವಾಗಲಿದೆ.
  • ‘ಮುಂದಿನ ವರ್ಷದ ಮಾರ್ಚ್‌ ವೇಳೆಗೆ ಈ ಸೇವೆಯನ್ನು ಹೈದರಾಬಾದ್‌, ಪುಣೆ, ವಿಜಯವಾಡ ಹಾಗೂ ಕೋಲ್ಕತ್ತದ ವಿಮಾನ ನಿಲ್ದಾಣಗಳಿಗೂ ವಿಸ್ತರಿಸಲಾಗುತ್ತದೆ’.
  • ಡಿಜಿ ಯಾತ್ರಾ ಆ್ಯಪ್ ತಂತ್ರಜ್ಞಾನದ ಮೂಲಕ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ವಿವಿಧ ಚೆಕ್‌ ಪಾಯಿಂಟ್‌ಗಳಲ್ಲಿ ಕಾಗದ ರಹಿತ ಹಾಗೂ ತಡೆರಹಿತವಾಗಿ ತೆರಳಬಹುದಾಗಿದೆ.
  • ಪ್ರಯಾಣ ಪೂರ್ಣಗೊಂಡ 24 ಗಂಟೆಗಳ ಬಳಿಕ ಅದನ್ನು ವಿಮಾನ ನಿಲ್ದಾಣದ ಸರ್ವರ್‌ನಿಂದ ಕಡ್ಡಾಯವಾಗಿ ಅಳಿಸಿಹಾಕಲಾಗುತ್ತದೆ’.

ಉದ್ದೇಶ

  • ‘ಆ್ಯಪ್‌ನಲ್ಲಿ ಪ್ರಯಾಣಿಕರು ದಾಖಲಿಸುವ ಮಾಹಿತಿಯನ್ನು ಗೂಢ ಲಿಪೀಕರಣ ಮಾದರಿಯಲ್ಲಿ ಸಂಗ್ರಹಿಸಿಡಲಾಗಿರುತ್ತದೆ. ಈ ಮಾಹಿತಿಯು ವಿಕೇಂದ್ರೀಕೃತ ಸ್ವರೂಪದಲ್ಲಿರುವುದರಿಂದ ಅದನ್ನು ಕದಿಯಲು ಅವಕಾಶ ಇರುವುದಿಲ್ಲ. ಪ್ರಯಾಣಿಕರ ಗೌಪ್ಯತೆಗೂ ಧಕ್ಕೆ ಉಂಟಾಗುವುದಿಲ್ಲ’.  ‘ಪ್ರಯಾಣಿಕರ ಮಾಹಿತಿಯು ಅವರ ಮೊಬೈಲ್‌ನಲ್ಲಿ ಮಾತ್ರ ಲಭ್ಯವಿರಲಿದೆ.

ಏನಿದು ಡಿಜಿ ಯಾತ್ರಾ?

  • ಇದು ಆ್ಯಪ್‌ ಆಧಾರಿತ ಸೇವೆಯಾಗಿದ್ದು, ಮುಖ ಗುರುತಿಸುವಿಕೆ ತಂತ್ರಜ್ಞಾನ (ಫೇಸಿಯಲ್‌ ರೆಕಗ್ನೈಸೇಷನ್‌) ಒಳಗೊಂಡಿರಲಿದೆ.
  • ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಪರ್ಕರಹಿತ, ತಡೆರಹಿತ ಸಂಸ್ಕರಣೆಯನ್ನು ಸಾಧಿಸಲು ಡಿಜಿ ಯಾತ್ರಾವನ್ನು ಕಲ್ಪಿಸಲಾಗಿದೆ.
  • ಡಿಜಿ ಯಾತ್ರಾದೊಂದಿಗೆ, ಭದ್ರತಾ ತಪಾಸಣೆ ಪ್ರದೇಶಗಳು ಸೇರಿದಂತೆ ವಿವಿಧ ಚೆಕ್‌ಪೋಸ್ಟ್‌ಗಳಲ್ಲಿ ಮುಖ ಗುರುತಿಸುವಿಕೆಯ ವ್ಯವಸ್ಥೆಯನ್ನು ಆಧರಿಸಿ ಪ್ರಯಾಣಿಕರ ಡೇಟಾವನ್ನು ಸ್ವಯಂಚಾಲಿತವಾಗಿ ಪ್ರಕ್ರಿಯೆಗೊಳಿಸಬಹುದು.