Published on: February 16, 2023

ಡಿಫೆನ್ಸ್ ಇಂಡಿಯಾ ಸ್ಟಾರ್ಟ್ ಅಪ್ ಚಾಲೆಂಜ್ (ಡಿಐಎಸ್ ಸಿ-9)

ಡಿಫೆನ್ಸ್ ಇಂಡಿಯಾ ಸ್ಟಾರ್ಟ್ ಅಪ್ ಚಾಲೆಂಜ್ (ಡಿಐಎಸ್ ಸಿ-9)


tautologically ಸುದ್ದಿಯಲ್ಲಿ ಏಕಿದೆ? ಸೈಬರ್ ಭದ್ರತೆ ಕುರಿತಂತೆ 28 ಸಮಸ್ಯೆ ಹೇಳಿಕೆಗಳೊಂದಿಗೆ ಡಿಫೆನ್ಸ್ ಇಂಡಿಯಾ ಸ್ಟಾರ್ಟ್ಅಪ್ ಚಾಲೆಂಜಸ್ (ಡಿಐಎಸ್ಸಿ 9) ನ ಒಂಬತ್ತನೇ ಆವೃತ್ತಿಗೆ ಮತ್ತು  ಐಡೆಕ್ಸ್- iDEX ಹೂಡಿಕೆದಾರರ ತಾಣ ಆರಂಭಕ್ಕೆ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಅವರು ಚಾಲನೆ ನೀಡಿದರು.


http://canalsideconferencecentre.co.uk/blog/readme.html  ಮುಖ್ಯಾಂಶಗಳು

 • ಈ ಸವಾಲುಗಳನ್ನು ಸೇವೆಗಳು, ಡಿಪಿಎಸ್ಯು ಗಳು ಮತ್ತು ಗೃಹ ವ್ಯವಹಾರಗಳ ಸಚಿವಾಲಯದಿಂದ ಸಂಗ್ರಹಿಸಲಾಗಿದೆ, ಇದು ನಮ್ಮ ರಕ್ಷಣಾ ಉದ್ಯಮದಲ್ಲಿ ಐಡೆಕ್ಸ್ ಸೃಷ್ಟಿಸಿರುವ ಗಾಢ ಪ್ರಭಾವ ಮತ್ತು ಆಸಕ್ತಿ ಬಹಿರಂಗಪಡಿಸುತ್ತದೆ.
 • ಡಿಐಎಸ್ಸಿ 6,  ಐಡೆಕ್ಸ್ ಪ್ರೈಮ್‌ನ ಮೊದಲ ಮೂರು ಆವೃತ್ತಿಗಳು ಮತ್ತು ಓಪನ್ ಚಾಲೆಂಜ್ 5 ಮತ್ತು 6 ರ ವಿಜೇತರನ್ನು ಗೌರವಿಸಲಾಯಿತು.
 • ರಕ್ಷಣಾ ಬಾಹ್ಯಾಕಾಶ (ಮಿಷನ್ ಡೆಫ್‌ಸ್ಪೇಸ್) ಮಿಷನ್ ಅಡಿಯಲ್ಲಿ ಸ್ಪರ್ಧೆಯ ಒಂದನೇ ಹಂತದ ವಿಜೇತರನ್ನು ಘೋಷಿಸಲಾಯಿತು ಮತ್ತು ಗೌರವಿಸಲಾಯಿತು.
 • ಐಡೆಕ್ಸ್- ಡಿಐಒ ನಿಂದ ಬೆಂಬಲಿತ ಸ್ಟಾರ್ಟ್-ಅಪ್‌ಗಳ  ಪ್ರದರ್ಶನದಲ್ಲಿ ಸ್ವಾಯತ್ತ ವ್ಯವಸ್ಥೆಗಳು, ಅತ್ಯಾಧುನಿಕ ಸೆನ್ಸಾರ್ ಗಳು,  ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಉದ್ಯಮ 4.0 ವಲಯಗಳಲ್ಲಿ ನಾವೀನ್ಯಕಾರರು ಭವ ಇಷ್ಯದ ತಂತ್ರಜ್ಞಾನದ ಬೆಳವಣಿಗೆಗಳನ್ನು ಪ್ರದರ್ಶಿಸಿದರು.
 • ಸ್ಥಳೀಯ ರಕ್ಷಣಾ ಸಂಶೋಧನೆ, ವಿನ್ಯಾಸ, ಅಭಿವೃದ್ಧಿ ಮತ್ತು ಉತ್ಪಾದನಾ ಪೂರಕ ವ್ಯವಸ್ಥೆಗಾಗಿ ಭಾರತೀಯ ಸೇನೆಯ 110 ಸಮಸ್ಯೆಗಳ ಸಂಕಲನವನ್ನು ರಕ್ಷಣಾ ಸಚಿವರು ಬಿಡುಗಡೆ ಮಾಡಿದರು.ಈ ಸಮಸ್ಯೆಗಳ ಹೇಳಿಕೆಗಳಲ್ಲಿ, ಭಾರತೀಯ ಸೇನೆಯ ತಾಂತ್ರಿಕ ಸವಾಲುಗಳು ಮತ್ತು ಶಸ್ತ್ರಾಸ್ತ್ರ, ಕಣ್ಗಾವಲು ಮತ್ತು ಅಗ್ನಿ ನಿಯಂತ್ರಣ ವ್ಯವಸ್ಥೆಗಳಿಂದ ಹಿಡಿದು ಕೃತಕ ಬುದ್ಧಿಮತ್ತೆ, ಬ್ಲಾಕ್‌ಚೈನ್, ಮೆಟಾವರ್ಸ್, ರೊಬೊಟಿಕ್ಸ್, ಕ್ವಾಂಟಮ್ ಟೆಕ್ನಾಲಜಿ, ಸೈಬರ್, ಯುದ್ಧಸಾಮಗ್ರಿಗಳ ಸ್ಮಾರ್ಟ್ ಗೊಳಿಸುವುದು, ಮತ್ತಿತರ ನಿರ್ದಿಷ್ಟ ವಲಯಗಳಿಂದ ಹಿಡಿದು ಹಲವು ವಲಯಗಳಲ್ಲಿನ ಅಗತ್ಯತೆಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಲಾಗಿದೆ.

ಸಹಯೋಗ: ಡಿಐಎಸ್ ಸಿ-9, ಗೃಹ ವ್ಯವಹಾರಗಳ ಸಚಿವಾಲಯದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (i4C) ವಿಭಾಗದೊಂದಿಗೆ ಐಡೆಕ್ಸ್ ನ ಮೊದಲ ಸಹಯೋಗವಾಗಿದೆ.

(ಐಡೆಕ್ಸ್) ಉಪಕ್ರಮ

 • ರಕ್ಷಣಾ ಸಚಿವಾಲಯದಡಿಯಲ್ಲಿ ಬರುವ ರಕ್ಷಣಾ ನಾವೀನ್ಯತಾ ಸಂಸ್ಥೆ (ಡಿಐಒ) ಅಧೀನದಲ್ಲಿ ಆರಂಭಿಸಲಾದ ರಕ್ಷಣಾ ವಲಯದಲ್ಲಿ ಉತ್ಕೃಷ್ಟತೆಗೆ ನಾವೀನ್ಯತೆ (ಐಡೆಕ್ಸ್) ಉಪಕ್ರಮವು ದೇಶಾದ್ಯಂತ ಪ್ರತಿಭೆಗಳು ಮುಂದೆ ಬರಲು ಅನುವು ಮಾಡಿಕೊಟ್ಟಿದೆ.
 • ಐಡೆಕ್ಸ್ ಹಲವು ದೇಶೀಯವಾಗಿ ಕಂಡುಹಿಡಿದ ಹೊಸ ತಂತ್ರಜ್ಞಾನಗಳ ಅಭಿವೃದ್ಧಿಗೆ ಸಹಾಯ ಮಾಡಿದೆ ಮತ್ತು ನಾವೀನ್ಯತೆಗಳು ಮತ್ತು ತಾಂತ್ರಿಕ ಬೆಳವಣಿಗೆಗಳನ್ನು ಪ್ರದರ್ಶಿಸಲು ಪ್ರಮುಖ ವೇದಿಕೆ ಒದಗಿಸಿದೆ.
 • ಐಡೆಕ್ಸ್ ನಿಂದಾಗಿ ಅಭಿವೃದ್ಧಿ ಹೊಂದಿದ ನವೋದ್ಯಮಗಳು ಸಹ ಬೇಡಿಕೆಯನ್ನು ಪಡೆಯುತ್ತಿವೆ, ಇದು ದೇಶದಲ್ಲಿ ನವೋದ್ಯಮ ಪೂರಕ ವ್ಯವಸ್ಥೆಯನ್ನು ಉತ್ತೇಜಿಸಿದೆ.
 • ಐಡೆಕ್ಸ್ ವೃತ್ತಿಪರರಿಗೆ ಕೃತಕ ಬುದ್ಧಿಮತ್ತೆ, ಆಗ್ಯುಮೆಂಟೆಡ್ ರಿಯಾಲಿಟಿ ಮತ್ತು ಬ್ಲಾಕ್-ಚೈನ್‌ನಂತಹ ಭವಿಷ್ಯದ ತಂತ್ರಜ್ಞಾನಗಳನ್ನು ಅರ್ಥಮಾಡಿಕೊಳ್ಳಲು ಅವಕಾಶವನ್ನು ನೀಡಿದೆ.
 • ಐಡೆಕ್ಸ್ ಹಲವು ನವೋದ್ಯಮಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ, ಇದು ನಮ್ಮ ಕೌಶಲ್ಯ ಮತ್ತು ಅರೆ ಕೌಶಲ್ಯ ಹೊಂದಿದ ಕಾರ್ಮಿಕರಿಗೆ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಸೃಷ್ಟಿಗೆ ಕಾರಣವಾಗಿದೆ. ಈ ಪರಿಣಾಮವನ್ನು ಗುರುತಿಸಿ, ವೇದಿಕೆಗೆ ನಾವೀನ್ಯ ವಿಭಾಗದಲ್ಲಿ ಪ್ರಧಾನಮಂತ್ರಿ ಪ್ರಶಸ್ತಿಯನ್ನು ನೀಡಲಾಗಿದೆ.
 • ರಕ್ಷಣಾ ಸಚಿವಾಲಯವು ತಮ್ಮ ಉದ್ಯೋಗ ಸೃಷ್ಟಿ ಸಾಮರ್ಥ್ಯದ ಕಾರಣದಿಂದ ನವೋದ್ಯಮಗಳು ಮತ್ತು ಎಂಎಸ್‌ಎಂಇಗಳಿಂದ ಖರೀದಿಗಾಗಿ ಸರಳೀಕೃತ, ತ್ವರಿತ ವಿಧಾನವನ್ನು ರೂಪಿಸಿದೆ. ರಕ್ಷಣಾ ಪೂರಕ ವ್ಯವಸ್ಥೆಯಲ್ಲಿ ಆತ್ಮನಿರ್ಭರ ಭಾರತಕ್ಕೆ ಐಡೆಕ್ಸ್ ಕೊಡುಗೆ ನೀಡಿದೆ ಮತ್ತು ಹೊಸ ಅವಕಾಶಗಳ ಮೂಲಕ ಉದ್ಯಮಿಗಳನ್ನು ಬೆಂಬಲಿಸಲು ಮತ್ತು ನೀತಿ ಮಧ್ಯಸ್ಥಿಕೆಗಳ ಮೂಲಕ ತಂತ್ರಜ್ಞಾನಗಳ ಅಭಿವೃದ್ಧಿಗೆ ಅನುಕೂಲವಾಗುವಂತೆ ಸರ್ಕಾರದ ಬದ್ಧತೆ ತೋರುತ್ತಿದೆ. ಆ ನಿಟ್ಟಿನಲ್ಲಿ ನಾವೀನ್ಯಕಾರರು ಮತ್ತು ಸ್ಟಾರ್ಟ್‌ಅಪ್‌ಗಳನ್ನು ಪ್ರೋತ್ಸಾಹಿಸಲು ಸರ್ಕಾರ ಹಲವು ಅನುದಾನಗಳನ್ನು ಪರಿಚಯಿಸಿದೆ.
 • ಹೊಸ ಕ್ಷೇತ್ರಗಳಲ್ಲಿ ಆವಿಷ್ಕಾರ ಮಾಡುವುದರಿಂದ ರಾಷ್ಟ್ರಗಳ ನಡುವಿನ ಅಂತರ ತಗ್ಗಿಸಲು ಸಾಧ್ಯವಾಗುತ್ತದೆ. ಉದಾಹರಣೆ ಯುಪಿಐ ಪಾವತಿ ಭಾರತೀಯ ಯುವಕರು ಅದನ್ನು ಅಭಿವೃದ್ಧಿಪಡಿಸಿ ಮತ್ತು ಜಗತ್ತಿಗೆ ಪರಿಚಯಿಸಿದ ನವೀನ ತಂತ್ರಜ್ಞಾನವಾಗಿದೆ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಸಹ ಕಲಿಯಲು ಈ ತಂತ್ರಜ್ಞಾನವನ್ನು ಅಧ್ಯಯನ ಮಾಡುತ್ತಿವೆ.
 • ‘ಐಡೆಕ್ಸ್ ಹೂಡಿಕೆದಾರರ ತಾಣ’ ರಕ್ಷಣಾ ವಲಯದಲ್ಲಿ ಹೂಡಿಕೆಯನ್ನು ವೇಗಗೊಳಿಸಲು ಮತ್ತು ಹೂಡಿಕೆದಾರರಿಗೆ ಅವಕಾಶಗಳು ಮತ್ತು ನಾವೀನ್ಯತೆಗಳ ಸಮಗ್ರ ಚಿತ್ರಣವನ್ನು ನೀಡುವ ಗುರಿ ಹೊಂದಿದೆ. ಚಾಲನೆ ನೀಡಲಾಯಿತು, ಇದು ದೇಶಾದ್ಯಂತ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುತ್ತದೆ.
 • ಐಡೆಕ್ಸ್- ಡಿಐಒ, ಎಸ್ ಪಿಆರ್ ಐಎನ್ ಟಿ (SPRINT) ಉಪಕ್ರಮದಡಿಯಲ್ಲಿ ಆರಂಭಿಸಲಾದ ಭಾರತೀಯ ನೌಕಾಪಡೆಯ ಪ್ರಧಾನ ಸ್ಪರ್ಧೆಯ ವಿಜೇತರೊಂದಿಗೆ ತನ್ನ 200ನೇ ಒಪ್ಪಂದಕ್ಕೆ ಸಹಿ ಹಾಕಿದೆ.