Published on: December 20, 2022

‘ಡಿಯರ್ ಮೂನ್’ ಯೋಜನೆ

‘ಡಿಯರ್ ಮೂನ್’ ಯೋಜನೆ

ಸುದ್ದಿಯಲ್ಲಿ ಏಕಿದೆ?  ಜಪಾನಿನ ವಾಣಿಜ್ಯೋದ್ಯಮಿ, ಬಿಲಿಯನೇರ್ ಯುಸಾಕು ಮೇಜಾವಾ ಅವರು ಚಂದ್ರನಿಗೆ ಮೊದಲ ನಾಗರಿಕ ಮಿಷನ್‌ಗಾಗಿ ‘ಡಿಯರ್ ಮೂನ್’ ಯೋಜನೆ ಕಾರ್ಯಾಚರಣೆ ಘೋಷಿಸಿದ್ದರು. ಚಂದ್ರನಲ್ಲಿಗೆ ಪ್ರಯಾಣಿಸುವ ಎಂಟು ಮಂದಿಯಲ್ಲಿ ಬಾಲ್ ವೀರ್ ಮಕ್ಕಳ ಹಿಂದಿ ಧಾರವಾಹಿ ಖ್ಯಾತಿಯ ಭಾರತೀಯ ನಟ ದೇವ್ ಜೋಷಿ ಕೂಡ ಇದ್ದಾರೆ.

ಮುಖ್ಯಾಂಶಗಳು

  • ‘ಡಿಯರ್- ಮೂನ್’ ಎಂದು ಕಾರ್ಯಾಚರಣೆಗೆ ಹೆಸರಿಡಲಾಗಿದೆ
  • ಪಯಣದ ಹೆಸರು :ಡ್ರೀಮ್ ಕ್ರ್ಯೂ
  • 2023 ರ ಕೊನೆಯ ತ್ರೈಮಾಸಿಕದಲ್ಲಿ ಚಂದ್ರನಲ್ಲಿಗೆ ಪಯಣ ಬೆಳೆಸಲಾಗುತ್ತದೆ.
  • 2018 ರಲ್ಲಿ, ಮೇಜಾವಾ ಎಂಟು ಸೀಟುಗಳ ರಾಕೆಟ್ ಖರೀದಿಸಿದ್ದರು.
  • ಇದರ ಆಯ್ಕೆ ಪ್ರಕ್ರಿಯೆಯಲ್ಲಿ, ಸಂಘಟಕರು 249 ದೇಶಗಳು ಮತ್ತು ಪ್ರದೇಶಗಳಿಂದ ಒಂದು ಮಿಲಿಯನ್ ಅರ್ಜಿಗಳನ್ನು ಸ್ವೀಕರಿಸಿದ್ದಾರೆ.