Published on: November 15, 2023
ಡ್ರೋನ್ ಆಧಾರಿತ ಲಾಜಿಸ್ಟಿಕ್ಸ್ ಸೇವೆ
ಡ್ರೋನ್ ಆಧಾರಿತ ಲಾಜಿಸ್ಟಿಕ್ಸ್ ಸೇವೆ
ಸುದ್ದಿಯಲ್ಲಿ ಏಕಿದೆ? ಕಣಿವೆ, ದುರ್ಗಮ ಹಾದಿ, ಯಾವುದೇ ಸಾರಿಗೆ ಸೌಕರ್ಯಗಳಿಲ್ಲದ ಜನವಸತಿ ಪ್ರದೇಶಗಳಿಗೆ ತ್ವರಿತಗತಿಯಲ್ಲಿ ಅಗತ್ಯ ವಸ್ತುಗಳನ್ನು ಪೂರೈಸಲು ಇಂಡೋ ಟಿಬೆಟಿಯನ್ ಗಡಿ ಭದ್ರತಾ ಪಡೆ (ಐಟಿಬಿಪಿ) ಡ್ರೋನ್ ಆಧಾರಿತ ಲಾಜಿಸ್ಟಿಕ್ಸ್ ಸೇವೆ ಆರಂಭಿಸಿದೆ.
ಮುಖ್ಯಾಂಶಗಳು
- 110 ಕೆಜಿ ತೂಕದ ಈ ಮಾನವರಹಿತ ವೈಮಾನಿಕ ವಾಹನ (ಯುಎವಿ) ದೂರದ ಗಡಿ ಪೋಸ್ಟ್‌ಗಳಲ್ಲಿ ನಿಯೋಜಿಸಲಾದ ಐಟಿಬಿಪಿ ಜವಾನರಿಗೆ ಮತ್ತು ಸ್ಥಳೀಯರಿಗೆ ಸುಮಾರು 15-20 ಕೆಜಿ ಅಗತ್ಯ ಔಷಧಗಳು ಮತ್ತು ಪಡಿತರವನ್ನುತಲುಪಿಸಿತು.
- ಡ್ರೋನ್ 14,000 ಅಡಿ ಎತ್ತರದವರೆಗೆ ಭಾರವನ್ನು ಎತ್ತುತ್ತದೆ ಮತ್ತು 28-43 ಕಿಮೀ ವೇಗದಲ್ಲಿ 40 ನಿಮಿಷಗಳ ಕಾಲ ಹಾರಾಟ ನಡೆಸುತ್ತದೆ.
ಉದ್ದೇಶ
ಪ್ರತಿಕೂಲ ಹವಾಮಾನ, ಮೇಘ ಸ್ಫೋಟ, ಪ್ರವಾಹ ಹಾಗೂ ಇನ್ನಿತರ ತುರ್ತು ಸಂದರ್ಭಗಳಲ್ಲಿ ಕಣಿವೆ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಆಹಾರ, ಔಷಧ ಪೂರೈಸಲು ಆರಂಭಿಸಿದೆ.
ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್
- ಇದು ಭಾರತದ ಗಡಿ ಕಾವಲು ಪಡೆಯಾಗಿದ್ದು, ಟಿಬೆಟ್ ಸ್ವಾಯತ್ತ ಪ್ರದೇಶದ ಗಡಿಯಲ್ಲಿ ನಿಯೋಜಿಸಲಾಗಿದೆ.
- ಇದು ಏಳು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಒಂದಾಗಿದೆ,
- ಸ್ಥಾಪನೆ: 1962 ರ ಭಾರತ ಚೀನಾ ಯುದ್ಧದ ನಂತರ 1962 ರಲ್ಲಿ ಸ್ಥಾಪಿಸಲಾಯಿತು.
- ಪ್ರಧಾನ ಕಛೇರಿ: ನವದೆಹಲಿ, ಭಾರತ