Published on: July 28, 2022

ಡ್ರೋನ್ ಪ್ರಯೋಗಾಲಯ

ಡ್ರೋನ್ ಪ್ರಯೋಗಾಲಯ

ಸುದ್ದಿಯಲ್ಲಿ ಏಕಿದೆ?

ಐಐಟಿ ಧಾರವಾಡದ ಕ್ಯಾಂಪಸ್ ನಲ್ಲಿ ಅತ್ಯಾಧುನಿಕ ಡ್ರೋನ್ ಪ್ರಯೋಗಾಲಯವನ್ನು ಸ್ಥಾಪಿಸುವ ಯೋಜನೆ ನಡೆಯುತ್ತಿದೆ.

ಮುಖ್ಯಾಂಶಗಳು

  • ಇತ್ತೀಚಿನ ದಿನಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಡ್ರೋಣ್ ಅಳವಡಿಸಿಕೊಳ್ಳಲಾಗುತ್ತಿದೆ. ಫೋಟೋಗ್ರಾಫ್ ಗಳನ್ನು ಕ್ಲಿಕ್ಕಿಸುವುದರಿಂದ ಮೊದಲುಗೊಂಡು, ವಿಡೀಯೋ, ಬಹುಮಹಡಿ ಕಟ್ಟಡದಲ್ಲಿ ಬೆಂಕಿ ನಂದಿಸುವವರೆಗೂ ಡ್ರೋನ್ ಗಳನ್ನು ಬಳಕೆ ಮಾಡಲಾಗುತ್ತಿದೆ.
  • ಧಾರವಾಡ ಜಿಲ್ಲೆಯಲ್ಲಿ ಕೆಲವು ರೈತರು ಕಳೆದ 3 ವರ್ಷಗಳಿಂದ ತಮ್ಮ ಬೆಳೆಗಳಿಗೆ ಕೀಟನಾಶಕಗಳ ಸಿಂಪಡಿಕೆಗೂ ಡ್ರೋನ್ ಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಇತ್ತೀಚಿನ ದಿನಗಳಲ್ಲಿ ಪಾಕೆಟ್ ಡ್ರೋನ್ ಗಳನ್ನೂ ಬಳಕೆ ಮಾಡಿಕೊಳ್ಳಲಾಗುತ್ತಿದೆ.
  • ಕೆಪಿಟಿಸಿಎಲ್ ಸಂಸ್ಥೆಗೆ ಅನುದಾನ ನೀಡಿದ್ದು, ಐಐಟಿ ಕ್ಯಾಂಪಸ್ ನಲ್ಲಿ ಪ್ರಯೋಗಾಲಯ ಸ್ಥಾಪನೆಗೆ ಈ ಅನುದಾನ ಬಳಕೆಯಾಗುತ್ತಿದೆ.
  • ಡ್ರೋನ್ ತಂತ್ರಜ್ಞಾನ ಅಧ್ಯಯನಕ್ಕೆ ಹಾಗೂ ಅದನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವುದಕ್ಕೆ ಈ ಪ್ರಯೋಗಾಲಯ ಸಹಕಾರಿಯಾಗಲಿದೆ.
  • ಡ್ರೋನ್ ತಂತ್ರಜ್ಞಾನವನ್ನು ಕೃಷಿ ಚಟುವಟಿಕೆಗಳಿಗೆ, ಸರಕುಗಳನ್ನು ಮನೆ ಬಾಗಿಲಿಗೆ ತಲುಪಿಸುವುದಕ್ಕಾಗಿಯೂ ಬಳಕೆ ಮಾಡಬಹುದಾಗಿದ್ದು, ಡ್ರೋನ್ ನ್ನು ಇನ್ನೂ ಬಳಕೆದಾರರ ಸ್ನೇಹಿಯನ್ನಾಗಿಸುವುದಕ್ಕೆ, ಕಡಿಮೆ ವೆಚ್ಚದಲ್ಲಿ ಅಭಿವೃದ್ಧಿಪಡಿಸುವುದಕ್ಕಾಗಿ ಸಂಶೋಧನೆ ನಡೆಯಲಿದೆ
  • ಡ್ರೋನ್ ಯಾವುದೇ ದಿಕ್ಕಿನಲ್ಲಿಯೂ ಹಾರಾಟ ನಡೆಸಬಲ್ಲದು, ಕಿರಿದಾದ ಮತ್ತು ಕಡಿಮೆ ಪ್ರದೇಶಗಳಲ್ಲಿಯೂ ಡ್ರೋನ್ ಹಾರಾಟ ನಡೆಸುವಂತೆ ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ.

ಉದ್ದೇಶ

  • ಮಾನವರಹಿತ ವೈಮಾನಿಕ ವಾಹನ ತಂತ್ರಜ್ಞಾನ ಅಭಿವೃದ್ಧಿ ಅಧ್ಯಯನಕ್ಕಾಗಿ ಈ ಪ್ರಯೋಗಾಲಯ ಕಾರ್ಯನಿರ್ವಹಣೆ ಮಾಡಲಿದೆ.

IIT ಧಾರವಾಡ

  • ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಧಾರವಾಡ (IIT ಧಾರವಾಡ ಅಥವಾ IIT DH) ಕರ್ನಾಟಕದ, ಧಾರವಾಡದಲ್ಲಿರುವ ಸ್ವಾಯತ್ತ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯಾಗಿದೆ.
  • IIT ಧಾರವಾಡ ಜುಲೈ 2016 ರಿಂದ ತಾತ್ಕಾಲಿಕ ಕ್ಯಾಂಪಸ್‌ನಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತು, ಈ ಹಿಂದೆ ಧಾರವಾಡ ನಗರದ ಹೊರವಲಯದಲ್ಲಿರುವ ಬೇಲೂರು ಕೈಗಾರಿಕಾ ಪ್ರದೇಶದಲ್ಲಿನ ನೀರು ಮತ್ತು ಭೂಮಿ ನಿರ್ವಹಣಾ ಸಂಸ್ಥೆ (WALMI). ಇದನ್ನು ಔಪಚಾರಿಕವಾಗಿ 28 ಆಗಸ್ಟ್ 2016 ರಂದು ಉದ್ಘಾಟಿಸಲಾಯಿತು.