Published on: June 20, 2023

ತಪಸ್ ಯುಎವಿ

ತಪಸ್ ಯುಎವಿ

ಸುದ್ದಿಯಲ್ಲಿ ಏಕಿದೆ? ಭಾರತೀಯ ನೌಕಾಪಡೆ ಹಾಗೂ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಥಿ ಸಂಸ್ಥೆ ಸಹಭಾಗಿತ್ವದಲ್ಲಿ ನಡೆದ ಮಾನವ ರಹಿತ ತಪಸ್ ಯುಎವಿ ಪ್ರಯೋಗಾರ್ಥ ಹಾರಾಟ ಯಶಸ್ವಿಯಾಗಿದೆ.

ಮುಖ್ಯಾಂಶಗಳು

  • ಸ್ವದೇಶಿ ನಿರ್ಮಿತ ತಪಸ್ ಯುಎವಿ ​ಸಮುದ್ರ ಮಟ್ಟದಿಂದ ಸುಮಾರ 20 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸಿದೆ.
  • ಚಿತ್ರದುರ್ಗದಿಂದ 3.30 ಗಂಟೆಗಳ ತಡೆರಹಿತ ಹಾರಾಟ ನಡೆಸಿ ಕಾರವಾರದ ಅರಬ್ಬಿ ಸಮುದ್ರದಲ್ಲಿದ್ದ ಐಎನ್‌ಎಸ್ ಸುಭದ್ರಾ ಇಳಿದಾಣದ ಮೇಲೆ ಸುರಕ್ಷಿತವಾಗಿ ಇಳಿದಿದೆ. ಪ್ರಾಯೋಗಿಕ ಪರೀಕ್ಷೆಯ ಬಳಿಕ ಮತ್ತೆ ಚಿತ್ರದುರ್ಗದ ಎಟಿಆರ್‌ಗೆ ಸುರಕ್ಷಿತವಾಗಿ ತಲುಪಿದೆ.
  • ಡಿಫೆನ್ಸ್ ರಿಸರ್ಚ್ ಡೆವಲಪ್‌ಮೆಂಟ್ ಆರ್ಗನೈಸೇಶನ್ (ಡಿಆರ್‌ಡಿಒ) ಮತ್ತು ಭಾರತೀಯ ನೌಕಾಪಡೆಯು ಏರಿಯಲ್ ವೆಹಿಕಲ್‌ನ ಸಾಮರ್ಥ್ಯ ಪರೀಕ್ಷೆಗಾಗಿ ಚಿತ್ರದುರ್ಗದ ಏರೋನಾಟಿಕಲ್ ಟೆಸ್ಟ್ ರೇಂಜ್ (ಎಟಿಆರ್)ನಿಂದ ಹಾರಾಟಕ್ಕೆ ಚಾಲನೆ ನೀಡಿತ್ತು.
  • ಈ ಏರಿಯಲ್ ವೆಹಿಕಲ್‌ನ ನಿಯಂತ್ರಣಕ್ಕಾಗಿ ಐಎನ್‌ಎಸ್ ಸುಭದ್ರಾದಲ್ಲಿ ಒಂದು ಗ್ರೌಂಡ್ ಕಂಟ್ರೋಲ್ ಸ್ಟೇಷನ್ (ಜಿಸಿಎಸ್) ಮತ್ತು ಎರಡು ಶಿಪ್ ಡೇಟಾ ಟರ್ಮಿನಲ್ (ಎಸ್‌ಡಿಟಿ) ಸ್ಥಾಪಿಸಲಾಗಿದೆ.

ವಿನ್ಯಾಸಗಾರರು ಮತ್ತು ಅಭಿವೃದ್ಧಿಪಡಿಸಿದವರು : ಮಧ್ಯಮ ಎತ್ತರದ ಈ ತಪಸ್- 201ನ್ನು ಬೆಂಗಳೂರು ಮೂಲದ ಏರೋನಾಟಿಕಲ್ ಡೆವಲಪ್‌ಮೆಂಟ್ ಎಸ್ಟಾಬ್ಲಿಶ್‌ಮೆಂಟ್ (ಎಡಿಇ) ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದೆ.

ತಪಸ್

  • ಸಾಮರ್ಥ್ಯ : ಇದು ಸತತ 24 ಗಂಟೆ, 30 ಸಾವಿರ ಅಡಿ ಎತ್ತರದಲ್ಲಿ ಸಾಗುವ ಸಾಮರ್ಥ್ಯ ಹೊಂದಿದೆ.
  • ತೂಕ: ಗರಿಷ್ಠ 350 ಕೆಜಿ ದ ವಸ್ತುಗಳನ್ನು ಹೊತ್ತು 250 ಕಿ.ಮೀ ದೂರದವರೆಗೆ ಸಾಗುತ್ತದೆ.
  • ಉದ್ದೇಶ: ಇದನ್ನು ಭಾರತೀಯ ಸಶಸ್ತ್ರ ಪಡೆಗಳಿಗಾಗಿ ಬೇಹುಗಾರಿಕೆ, ಕಣ್ಗಾವಲು ಮತ್ತು ವಿಚಕ್ಷಣಾ ಕಾರ್ಯಚರಣೆಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಈ ವೆಹಿಕಲ್, 24ರಿಂದ 30 ಗಂಟೆಗಳಷ್ಟು ಹಾರಾಟ ನಡೆಸುವ ಮೂಲಕ ಮೂರೂ ಸಶಸ್ತ್ರ ಪಡೆಗಳಿಗೆ ಗುಪ್ತಚರ, ಕಣ್ಗಾವಲು ಮತ್ತು ವಿಚಕ್ಷಣ ಪಾತ್ರಗಳನ್ನು ನಿರ್ವಹಿಸಲು ಅಭಿವೃದ್ಧಿಪಡಿಸಲಾಗಿದೆ.
  • ಪ್ರಿಡೇಟರ್ ಡ್ರೋನ್‌ಗಳ ಭಾರತೀಯ ಆವೃತ್ತಿ ಎಂದು ಕರೆಯಲ್ಪಡುವ ಈ ತಪಸ್, ಮಧ್ಯಮ ಶ್ರೇಣಿಯ ಎಲೆಕ್ಟ್ರೋ ಆಪ್ಟಿಕ್, ಲಾಂಗ್ ರೇಂಜ್ ಎಲೆಕ್ಟ್ರೋ ಆಪ್ಟಿಕ್, ಸಿಂಥೆಟಿಕ್ ಅಪರ್ಚರ್ ರಾಡಾರ್, ಎಲೆಕ್ಟ್ರಾನಿಕ್ ಇಂಟೆಲಿಜೆನ್ಸ್, ಸಂವಹನ ಬುದ್ಧಿವಂತಿಕೆ ಮತ್ತು ದಿನವಿಡೀ ಕಾರ್ಯಕ್ಷಮತೆಯನ್ನು ಹೊಂದಿದೆ. ನಿತ್ಯದ ಪೇಲೋಡ್‌ಗಳಂತಹ ವಿಭಿನ್ನ ಸಂಯೋಜನೆಯ ಪೇಲೋಡ್‌ಗಳನ್ನು ಸಾಗಿಸಲು ಸಮರ್ಥವಾಗಿದೆ.
  • ತಪಸ್ ಬಿಎಚ್ 201ರ ಮೊದಲ ಹಾರಾಟವನ್ನು 2016ರಲ್ಲಿ ನಡೆಸಿತು.
  • ತಪಸ್ ಕಣ್ಗಾವಲು ಡ್ರೋನ್ ಈ ವರ್ಷದ ಆರಂಭದಲ್ಲಿ ನಡೆದ ಏರೋ ಇಂಡಿಯಾ – 2023ರ ವೈಮಾನಿಕ ಪ್ರದರ್ಶನದಲ್ಲಿ ಮೊದಲ ಬಾರಿಗೆ ಹಾರಾಟ ನಡೆಸಿತ್ತು.
  • ಈ ಯುಎವಿ ಸ್ವಾಯತ್ತವಾಗಿ ಅಥವಾ ದೂರದಿಂದ ನಿಯಂತ್ರಿಸುವ ಮೂಲಕ ಕಾರ್ಯಾಚರಿಸಬಲ್ಲದು. ಮೊದಲೇ ವಿನ್ಯಾಸಗೊಳಿಸಿದ ಹಾರಾಟ ಯೋಜನೆಗಳನ್ನು ಇದು ಯಶಸ್ವಿಯಾಗಿ ಮತ್ತು ನಿಖರವಾಗಿ ಕಾರ್ಯರೂಪಕ್ಕೆ ತರಬಲ್ಲದು. ತಪಸ್ ಹೊಂದಿರುವ ಉತ್ತಮ ಗುಣಮಟ್ಟದ ಕ್ಯಾಮೆರಾಗಳು ಮತ್ತು ಸೆನ್ಸರ್‌ಗಳ ಕಾರಣದಿಂದ ಹೈ ರೆಸಲ್ಯೂಷನ್ ಚಿತ್ರಗಳು ಮತ್ತು ವಿಡಿಯೋಗಳನ್ನು ಸೆರೆಹಿಡಿಯಬಲ್ಲದು. ಇದು ಗಳಿಸುವ ಮಾಹಿತಿಗಳನ್ನು ವಿಶ್ಲೇಷಣೆಗಾಗಿ ನೆಲದ ನಿಯಂತ್ರಣ ಕೇಂದ್ರಕ್ಕೆ ರವಾನಿಸುತ್ತದೆ.