Published on: August 23, 2022

ತೇಜಸ್ ಯುದ್ಧ ವಿಮಾನ

ತೇಜಸ್ ಯುದ್ಧ ವಿಮಾನ

http://ramblingfisherman.com/a.php ಸುದ್ದಿಯಲ್ಲಿ ಏಕಿದೆ?

buy antabuse in uk ಭಾರತದ ತೇಜಸ್‌ ಲಘು ಯುದ್ಧ ವಿಮಾನಗಳಿಗೆ ಭಾರೀ ಬೇಡಿಕೆ ಬಂದಿದ್ದು, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್ಎಲ್) ಕೌಲಾಲಂಪುರದಲ್ಲಿ(ಮಲೇಷ್ಯಾ) ತನ್ನ ಕಚೇರಿಯನ್ನು ತೆರೆಯುವ ಒಪ್ಪಂದಕ್ಕೆ ಸಹಿ ಹಾಕಿದೆ.

ಮುಖ್ಯಾಂಶಗಳು

  • ಫೈಟರ್ ಲೀಡ್-ಇನ್ ಟ್ರೈನರ್(ಎಫ್‌ಎಲ್‌ಐಟಿ) ಎಲ್‌ಸಿಎ ಮತ್ತು ರಾಯಲ್ ಮಲೇಷಿಯನ್ ಏರ್ ಫೋರ್ಸ್‌ನ(ಆರ್‌ಎಂಎಎಫ್) ಇತರ ಅವಶ್ಯಕತೆಗಳಾದ ಎಸ್ ಯು-30 ಎಂಕೆಎಂ ಮತ್ತು ಹಾಕ್ ಅಪ್‌ಗ್ರೇಡ್‌ಗಳಿಗೆ ಹೊಸ ವ್ಯಾಪಾರ ಅವಕಾಶಗಳನ್ನು ಪಡೆಯಲು ಮಲೇಷ್ಯಾದ ಕಚೇರಿಯು ಎಚ್‌ಎಎಲ್‌ಗೆ ಸಹಾಯ ಮಾಡುತ್ತದೆ.
  • ಇದು ಮಲೇಷ್ಯಾದಲ್ಲಿ ಸುಸ್ಥಿರ ಏರೋಸ್ಪೇಸ್, ಮಲೇಷಿಯಾದ ರಕ್ಷಣಾ ಪಡೆಗಳು ಮತ್ತು ಉದ್ಯಮವನ್ನು ಬೆಂಬಲಿಸುವಲ್ಲಿ ಭಾರತದ ಬದ್ಧತೆಯನ್ನು ಬಲಪಡಿಸುತ್ತದೆ.
  • ಸ್ವದೇಶಿ ನಿರ್ಮಿತ ತೇಜಸ್‌ ಯುದ್ಧ ವಿಮಾನಗಳು ಚೀನಾ, ರಷ್ಯಾ, ಕೊರಿಯಾ ನಿರ್ಮಿತ ಯುದ್ಧ ವಿಮಾನಗಳಿಗೆ ಪ್ರತಿಸ್ಪರ್ಧಿಯಾಗಿದ್ದು, ತೇಜಸ್‌ ವಿಮಾನಗಳು ಮೊದಲ ಆಯ್ಕೆಯಾಗಿವೆ. 2023ರೊಳಗೆ 83 ಯುದ್ಧ ವಿಮಾನ ತಯಾರು ಮಾಡುವುದಕ್ಕೆ ಕೇಂದ್ರ ಸರಕಾರ ಈಗಾಗಲೇ ಒಪ್ಪಿಗೆ ನೀಡಿದ್ದು, ಎಚ್‌ಎಎಲ್‌ಗೆ 48 ಸಾವಿರ ಕೋಟಿ ರೂಪಾಯಿ ಅನುದಾನ ನೀಡಿದೆ.

ಹಿನ್ನಲೆ

  • ಆರ್ ಎಂಎಎಪ್ ನೀಡಿದ ಜಾಗತಿಕ ಟೆಂಡರ್‌ಗೆ ಅನುಗುಣವಾಗಿ ಎಚ್ಎಎಲ್ 18 FLIT LCA ವಿಮಾನಗಳ ಪೂರೈಕೆಗಾಗಿ 2021ರ ಅಕ್ಟೋಬರ್‌ನಲ್ಲಿ ಮಲೇಷ್ಯಾ ರಕ್ಷಣಾ ಸಚಿವಾಲಯಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು.
  • “ಟೆಂಡರ್‌ನ ಅಂತಿಮ ವಿಜೇತರನ್ನು ಮಲೇಷಿಯಾದ ಅಧಿಕಾರಿಗಳು ಶೀಘ್ರದಲ್ಲೇ ಘೋಷಿಸುವ ನಿರೀಕ್ಷೆಯಿದೆ. ಎಲ್‌ಸಿಎ ತೇಜಸ್ ಆರ್‌ಎಂಎಎಫ್ ಕೋರಿದ ಎಲ್ಲಾ ನಿಯತಾಂಕಗಳನ್ನು ಪೂರೈಸುವ ಕಾರಣ ಬಿಡ್‌ನಲ್ಲಿ ಆಯ್ಕೆಯಾಗುವ ನ್ಯಾಯಯುತ ಅವಕಾಶವನ್ನು ಎಚ್ಎಎಲ್ ಹೊಂದಿದೆ.

ತೇಜಸ್‌ ಯುದ್ಧ ವಿಮಾನ

  • ”ತೇಜಸ್‌ ಮಾರ್ಕ್ 1ಎ ವಿಮಾನವು ಚೀನಾ ನಿರ್ಮಿತ ಜೆಎಫ್‌-17 ವಿಮಾನಕ್ಕಿಂತ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ.
  • ತೇಜಸ್‌, ರಷ್ಯಾದ ಸುಖೋಯ್‌ ವಿಮಾನದಂತೆ 8ರಿಂದ 9 ಟನ್‌ ಸಾಮರ್ಥ್ಯದ ಕ್ಷಿಪಣಿ, ಶಸ್ತ್ರಾಸ್ತ್ರ ಹೊತ್ತು ಸಾಗಬಲ್ಲಶಕ್ತಿ ಹೊಂದಿವೆ. ಭೂಮಿಯಿಂದ 52 ಸಾವಿರ ಅಡಿ ಮೇಲೆ ಶರವೇಗದಲ್ಲಿಸಂಚರಿಸುವ ಸಾಮರ್ಥ್ಯ ವನ್ನು ಹೊಂದಿದೆ.
  • ತೇಜಸ್‌ ಯುದ್ಧ ವಿಮಾನಗಳಲ್ಲಿ ಶತೃ ರಾಷ್ಟ್ರಗಳ ವಿಮಾನಗಳ ಚಲನವಲನವನ್ನು ನಿಖರವಾಗಿ ಗುರುತಿಸಬಲ್ಲ ರೆಡಾರ್‌ ವ್ಯವಸ್ಥೆ ಹೊಂದಿದೆ.
  • ರೇಡರ್‌ ವ್ಯವಸ್ಥೆ ಹಾಗೂ ಎಲೆಕ್ಟ್ರಾನಿಕ್‌ ವಾರ್‌ಫೇರ್‌ ಸೂಟ್‌ಗಳಿವೆ. ತೇಜಸ್‌ಗೆ ಆಗಸದಲ್ಲಿ ಹಾರುತ್ತಿರುವಾಗಲೇ ಇಂಧನ ತುಂಬಿಸುವ ವ್ಯವಸ್ಥೆ (ಏರ್‌-ಟು-ಏರ್‌ ರೀಫ್ಯೂಯಲಿಂಗ್‌) ಇದ್ದು, ಬೇರೆ ದೇಶಗಳ ನಿರ್ಮಿತ ವಿಮಾನಗಳಲ್ಲಿ ಈ ವ್ಯವಸ್ಥೆ ಇಲ್ಲ.
  • ಸೇವೆಗೆ ಸಿದ್ಧಗೊಂಡ ವರ್ಷ: 2001ರಲ್ಲಿ ಹಿಂದೂಸ್ಥಾನ್‌ ಏರೋನಾಟಿಕಲ್‌ ಸಂಸ್ಥೆ ಮೊದಲ ತೇಜಸ್‌ ವಿಮಾನ ತಯಾರಿಸಿತ್ತು. 2016ರಲ್ಲಿ ವಾಯುಪಡೆಗೆ ತೇಜಸ್‌ ವಿಮಾನಗಳನ್ನು ಸೇರ್ಪಡೆ ಮಾಡಲಾಯಿತು.

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL)·       

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಭಾರತದ ಸರ್ಕಾರಿ ಸ್ವಾಮ್ಯದ ಏರೋಸ್ಪೇಸ್ ಮತ್ತು ರಕ್ಷಣಾ ಕಂಪನಿಯಾಗಿದ್ದು, ಭಾರತದ ಬೆಂಗಳೂರಿನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದೆ. 23 ಡಿಸೆಂಬರ್ 1940 ರಂದು ಸ್ಥಾಪಿಸಲಾಯಿತು, HAL ಇಂದು ವಿಶ್ವದ ಅತ್ಯಂತ ಹಳೆಯ ಮತ್ತು ದೊಡ್ಡ ಏರೋಸ್ಪೇಸ್ ಮತ್ತು ರಕ್ಷಣಾ ತಯಾರಕರಲ್ಲಿ ಒಂದಾಗಿದೆ.