Published on: December 20, 2022

ದಕ್ಷಿಣ ಪಿನಾಕಿನಿ ನದಿ ವಿವಾದ

ದಕ್ಷಿಣ ಪಿನಾಕಿನಿ ನದಿ ವಿವಾದ

ಸುದ್ದಿಯಲ್ಲಿ ಏಕಿದೆ? ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಪೆನ್ನಾರ್ (ದಕ್ಷಿಣ ಪಿನಾಕಿನಿ) ನದಿ ನೀರು ಹಂಚಿಕೆಗೆ ಸಂಬಂಧಿಸಿದ ವಿವಾದಗಳನ್ನು ಬಗೆಹರಿಸಲು ‘ದಕ್ಷಿಣ ಪಿನಾಕಿನಿ ಜಲವಿವಾದ ನ್ಯಾಯಮಂಡಳಿ’ ರಚಿಸಲು ಕೇಂದ್ರ ಸರ್ಕಾರಕ್ಕೆ ಸು‍ಪ್ರೀಂ ಕೋರ್ಟ್‌ ಮೂರು ತಿಂಗಳ ಕಾಲಾವಕಾಶ ನೀಡಿದೆ.

ಮುಖ್ಯಾಂಶಗಳು 

  • ‘ನದಿ ನೀರು ಹಂಚಿಕೆಗೆ ನ್ಯಾಯಾ ಧೀಕರಣ ಸ್ಥಾಪಿಸಬೇಕು ಎಂದು ತಮಿಳುನಾಡು ಸರ್ಕಾರವು 2019ರ ನ. 30ರಂದು ಮನವಿ ಮಾಡಿದೆ.
  • ಈ ವಿವಾದವನ್ನು ಮಾತುಕತೆ ಮೂಲಕ ಇತ್ಯರ್ಥಪಡಿಸಲು ಸಂಧಾನ ಸಮಿತಿ ಯನ್ನು ರಚಿಸಲಾಗಿದೆ.
  • ನ್ಯಾಯಾ ಧೀ ಕರಣ ರಚಿಸಲು ಸಮಿತಿಯು ತಾತ್ವಿಕ ಅನುಮೋದನೆ ನೀಡಿದೆ’ ಎಂದು ಕೇಂದ್ರ ಸರ್ಕಾರ ಹೇಳಿತ್ತು.
  • ಈ ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಂ.ಆರ್‌.ಶಾ ಹಾಗೂ ಸಿ.ಟಿ.ರವಿಕುಮಾರ್ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠ ನಡೆಸಿತು. ನ್ಯಾಯಮಂಡಳಿ ಸ್ಥಾಪನೆಯ ಸಂಪೂರ್ಣ ಕಾರ್ಯವಿಧಾನಕ್ಕೆ ಆರು ತಿಂಗಳುಗಳು ಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರದ ವಕೀಲರು ಮನವಿ ಮಾಡಿದರು. ಈ ಮನವಿಯನ್ನು ನ್ಯಾಯ ಪೀಠ ತಿರಸ್ಕರಿಸಿತು.

ಏನಿದು ವಿವಾದ?

  • ದಕ್ಷಿಣ ಪಿನಾಕಿನಿ ನದಿಯ ಕಣಿವೆಯಲ್ಲಿ ಕರ್ನಾಟಕ ಸರ್ಕಾರವು ಮಾರ್ಕಂ ಡೇಯ ನದಿಗೆ ಅಡ್ಡಲಾಗಿ ಚೆಕ್ ಡ್ಯಾಂ (ಕೋಲಾರ, ಬಂಗಾರಪೇಟೆ, ಮಾಲೂರಿನ ಹಲವು ಹಳ್ಳಿಗಳಿಗೆ ಹಾಗೂ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆ), ಎಲೆಮಲ್ಲಪ್ಪ ಚೆಟ್ಟಿ ಕೆರೆಯಿಂದ ಹೊಸಕೋಟೆ ಯವರೆಗೆ ನೀರು ಹರಿಸುವ ಕಾಮಗಾರಿ, ಬ್ಯಾಲಹಳ್ಳಿ ಗ್ರಾಮದ ಹತ್ತಿರ ಪೊನ್ನೆಯಾರ್ ನದಿಯಿಂದ ನೀರು ಹರಿಸುವ ಕಾಮಗಾರಿಗಳನ್ನು ನಡೆಸಿದೆ.
  • ಪೆನ್ನಾರ್ ನದಿಯ ನೀರು ಬಳಸಿಕೊಳ್ಳುವ ಕರ್ನಾಟಕದ ಯೋಜನೆಗೆ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸಿ, ಕರ್ನಾಟಕ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ 2018ರಲ್ಲಿ ದಾವೆ ಹೂಡಿತ್ತು.

ದಕ್ಷಿಣ ಪಿನಾಕಿನಿ ನದಿ

  • ಕರ್ನಾಟಕ ರಾಜ್ಯದ ನದಿಗಳಲ್ಲೊಂದು. ದಕ್ಷಿಣಪೆನ್ನಾರ್, ಪೊನ್ನೈಯಾರ್ ಹಾಗೂ ತಮಿಳಿನಲ್ಲಿ ತೆನ್ ಪೆನ್ನೈ ಎಂದೂ ಕರೆಯಲ್ಪಡುವ ಈ ನದಿಯು ಚಿಕ್ಕಬಳ್ಳಾಪುರದ ನಂದಿಬೆಟ್ಟಗಳಲ್ಲಿ ಹುಟ್ಟುತ್ತದೆ. ಕರ್ನಾಟಕ ಹಾಗೂ ತಮಿಳುನಾಡಿನ ಮೂಲಕ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ.
  • ಕಾವೇರಿಯ ನದಿಯ ನಂತರ ಇದು ತಮಿಳುನಾಡಿನ ಎರಡನೇ ಅತಿ ಉದ್ದದ ನದಿಯಾಗಿದ್ದು, 497 ಕಿಮೀ ಉದ್ದವಿದೆ. ಹೊಸೂರು ಮತ್ತು ಕೃಷ್ಣಗಿರಿ ಬಳಿ ಈ ನದಿಗೆ ಅಡ್ಡಲಾಗಿ ಕೆಲವರಪಲ್ಲಿ ಮತ್ತು ಕೃಷ್ಣಗಿರಿ ಎಂಬ  ಸಣ್ಣ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ.  ಈ ನದಿಯ ಮೇಲೆ ಅತಿ ದೊಡ್ಡ ಅಣೆಕಟ್ಟಾದ, 7.3 Tmcft ಒಟ್ಟು ಸಾಮರ್ಥ್ಯದ ಸಾತನೂರ್ ಅಣೆಕಟ್ಟನ್ನು ತಿರುವಣ್ಣಾಮಲೈ ಬಳಿ ನಿರ್ಮಿಸಲಾಗಿದೆ. ಇದರ ಉಪನದಿ ಪಂಬಾರ್ ನದಿ