Published on: April 23, 2024
ದೀರ್ಘಾಯು ಭಾರತ ಯೋಜನೆ
ದೀರ್ಘಾಯು ಭಾರತ ಯೋಜನೆ
ಸುದ್ದಿಯಲ್ಲಿ ಏಕಿದೆ? ಭಾರತೀಯ ವಿಜ್ಞಾನ ಸಂಸ್ಥೆ(IISC)ಯು ‘ದೀರ್ಘಾಯು ಭಾರತ ಉಪಕ್ರಮ’ ಯೋಜನೆಯನ್ನು ಘೋಷಿಸಿದೆ.
ಮುಖ್ಯಾಂಶಗಳು
- ಈ ಯೋಜನೆಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ವಿವಿಧ ವಿಭಾಗಗಳು, ಉದ್ಯಮಗಳು, ವೈದ್ಯರು, ದಾನಿಗಳು ಮತ್ತು ನಾಗರಿಕ ಸಮಾಜದ ಪ್ರತಿನಿಧಿಗಳೂ ಇರಲಿದ್ದಾರೆ.
- ಇದರಡಿ ಬೃಹತ್ ಪ್ರಮಾಣದಲ್ಲಿ ಕ್ಲಿನಿಕಲ್ ಅಧ್ಯಯನ ಕೈಗೊಳ್ಳಲಾಗುತ್ತದೆ.
- ಮೂಲಭೂತ ಮತ್ತು ಅನ್ವಯಿಕ ಸಂಶೋಧನೆಯ ಮೂಲಕ ವಯಸ್ಸಾಗುವಿಕೆಯನ್ನು ಅರ್ಥೈಸಿಕೊಳ್ಳಲಾಗುವುದು. ವ್ಯಕ್ತಿಯ ಜೀವನದ ಗುಣಮಟ್ಟ ಹೆಚ್ಚಿಸಲು ಪರಿಹಾರಗಳನ್ನು ಅಭಿವೃದ್ಧಿಪಡಿಸಲಾಗುವುದು.
- ಈ ಯೋಜನೆಗೆ ಪ್ರಶಾಂತ್ ಪ್ರಕಾಶ್ ಸಹ ಸ್ಥಾಪಕತ್ವದ ಏಸೆಲ್ ಇಂಡಿಯಾ ಆರಂಭಿಕ ದೇಣಿಗೆ ನೀಡಿದೆ.
ಉದ್ದೇಶ
ಈ ಯೋಜನೆಯಡಿ ಮಾನವನ ದೀರ್ಘಾವಧಿ ಆರೋಗ್ಯವನ್ನು ವೃದ್ಧಿಸುವುದು ಮತ್ತು ವಯಸ್ಸಿಗೆ ಸಂಬಂಧಿಸಿದ ಆರೋಗ್ಯ ಸವಾಲುಗಳನ್ನು ಬಗೆಹರಿಸುವ ಸಂಬಂಧ ಬೃಹತ್ ಪ್ರಮಾಣದಲ್ಲಿ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲಾಗುವುದು. ಈ ಮೂಲಕ ಭಾರತೀಯರ ಆರೋಗ್ಯ ಪೂರ್ಣ ದೀರ್ಘಾಯು ಆಗಿಸುವ ನಿಟ್ಟಿನಲ್ಲಿ ಈ ಯೋಜನೆಯಡಿ ಕಾರ್ಯ ನಿರ್ವಹಿಸಲಾಗುವುದು.
ವಿಶೇಷವಾಗಿ ಜೀವನಶೈಲಿ, ಸಂಸ್ಕೃತಿ, ವಂಶವಾಹಿ ಮತ್ತು ಪರಿಸರಗಳು ಕಾರಣವಾಗುತ್ತವೆ.