Published on: December 6, 2022

ದೇಶದಲ್ಲಿ ತಾಯಂದಿರ ಮರಣ ಪ್ರಮಾಣ ಇಳಿಕೆ

ದೇಶದಲ್ಲಿ ತಾಯಂದಿರ ಮರಣ ಪ್ರಮಾಣ ಇಳಿಕೆ

ಸುದ್ದಿಯಲ್ಲಿ ಏಕಿದೆ?

2014-16ರಲ್ಲಿ 130 ರಷ್ಟಿದ್ದ ತಾಯಂದಿರ ಮರಣ ಪ್ರಮಾಣವು 2018-20 ರಲ್ಲಿ 97ಕ್ಕೆ ಇಳಿಕೆಯಾಗಿದೆ ಎಂದು  ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಭಾರತೀಯ ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ಬಿಡುಗಡೆ ಮಾಡಿದ ವಿಶೇಷ ವರದಿಯಲ್ಲಿ ತಿಳಿಸಿದೆ.

ಮುಖ್ಯಾಂಶಗಳು

 • ‘ಭಾರತದಲ್ಲಿ ತಾಯಂದಿರ ಮರಣದ ವಿಶೇಷ ವರದಿ 2018-20’ ಪ್ರಕಾರ ದೇಶದಲ್ಲಿ ತಾಯಂದಿರ ಮರಣ ಪ್ರಮಾಣ (MMR) 2018-20 ಗಮನಾರ್ಹವಾಗಿ ಇಳಿಮುಖವಾಗಿದೆ.
 • ಹೆರಿಗೆ ಸಂದರ್ಭದಲ್ಲಿ ತಾಯಿಯ ಮರಣದ ಪ್ರಮಾಣ’ಪ್ರತಿ ಲಕ್ಷ ಜೀವಂತ ಜನನಗಳಿಗೆ 2017-19 ರಲ್ಲಿ 103 ರಷ್ಟಿತ್ತು. 2014-16 ರಲ್ಲಿ 130, 2015-17 ರಲ್ಲಿ 122 ಹಾಗೂ 2016-18 ರಲ್ಲಿ 113 ರಷ್ಟಿತ್ತು. ಇತ್ತೀಚೆಗೆ ಬಿಡುಗಡೆ ಮಾಡಲಾದ ದತ್ತಾಂಶ ಮತ್ತು ಹಿಂದಿನ ದತ್ತಾಂಶಕ್ಕೆ ಹೋಲಿಸಿದರೆ ಕೆಲವು ರಾಜ್ಯಗಳಲ್ಲಿ ಕಡಿಮೆ ಮರಣ ಪ್ರಮಾಣ ಹೊಂದಿರುವ ರಾಜ್ಯಗಳಲ್ಲಿ ಕೇರಳ (19), ಮಹಾರಾಷ್ಟ್ರ (33), ತೆಲಂಗಾಣ (43), ಆಂಧ್ರಪ್ರದೇಶ (45) ಹಾಗೂ ತಮಿಳುನಾಡು (54) ಕ್ರಮವಾಗಿ ಮೊದಲ ಐದು ಸ್ಥಾನದಲ್ಲಿವೆ. ಈ ಪಟ್ಟಿಯಲ್ಲಿಅಸ್ಸಾಂ (195) ಕಡೆಯ ಸ್ಥಾನದಲ್ಲಿದೆ.
 • ‘‘ಕೇಂದ್ರ ಸರಕಾರ 2030ರ ವೇಳೆಗೆ ಎಲ್ಲಾರಾಜ್ಯಗಳು ತಾಯಂದಿರ ಮರಣ ಪ್ರಮಾಣವಧಿನ್ನು 70ಕ್ಕೆ ಇಳಿಸುವ ಗುರಿ ನೀಡಿತ್ತು. ಆದರೆ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಎಲ್ಲಾರಾಜ್ಯಗಳು ಎಂಟು ವರ್ಷ ಮೊದಲೇ ಈ ಗುರಿ ತಲುಪಿವೆ.
 • ವರ್ಷಕ್ಕೆ ಒಂದು ಲಕ್ಷಕ್ಕಿಂತ ಹೆಚ್ಚು ಹೆರಿಗೆಯಾಗುವ ರಾಜ್ಯಗಳನ್ನು ಮಾತ್ರ ಸಮೀಕ್ಷೆಗೆ ಪರಿಗಣಿಸಲಾಗುತ್ತಿದೆ. ಹೀಗಾಗಿ, ದೇಶದ 19 ರಾಜ್ಯಗಳು ಸಮೀಕ್ಷೆಗೆ ಒಳಪಟ್ಟಿದ್ದವು.
 • ವಿಶ್ವಸಂಸ್ಥೆ ನಿಗದಿಪಡಿಸಿರುವ ಸುಸ್ಥಿರ ಅಭಿವೃದ್ಧಿ ಗುರಿ (SDG) 3.1 ಅಡಿಯಲ್ಲಿ ಜಾಗತಿಕ ತಾಯಂದಿರ ಮರಣದ ಅನುಪಾತವನ್ನು 1,00,000 ಜೀವಂತ ಜನನಗಳಿಗೆ 70 ಕ್ಕಿಂ ತ ಕಡಿಮೆ ಮಾಡುವ ಉದ್ದೇ ಶವಿದೆ.
 • ಯಾರು ಬಿಡುಗಡೆ ಮಾಡುತ್ತಾರೆ: ಪ್ರತಿ ಎರಡು ವರ್ಷಕ್ಕೊಮ್ಮೆ ಕೇಂದ್ರ ಆರೋಗ್ಯ ಸಚಿವಾಲಯ

ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಮೂರು ಗುಂಪುಗಳಾಗಿ ವಿಂಘಡನೆ

 • ದೇಶದಲ್ಲಿ ತಾಯಂದಿರ ಮರಣದ ಪರಿಸ್ಥಿತಿಯನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಮತ್ತು ವಿಶೇಷವಾಗಿ ಪ್ರಾದೇಶಿಕ ಮಟ್ಟದಲ್ಲಿ ಉಂಟಾದ ಬದಲಾವಣೆಗಳನ್ನು ಗುರುತಿಸಲು ರಾಜ್ಯಗಳನ್ನು ಮೂರು ಗುಂಪುಗಳಾಗಿ ವರ್ಗೀಕರಿಸಲಾಗಿದೆ. ಅವುಗಳೆಂದರೆ, ಸಶಕ್ತ ಕ್ರಿಯಾ ಗುಂಪು, ದಕ್ಷಿಣ ರಾಜ್ಯಗಳು ಮತ್ತು ಇತರೆ ರಾಜ್ಯಗಳು.
 • ಸಶಕ್ತ ಕ್ರಿಯಾ ಗುಂಪು: ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ, ಛತ್ತೀ ಸ್ಗಢ, ಒಡಿಶಾ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಮತ್ತು ಅಸ್ಸಾಂ ರಾಜ್ಯಗಳಿವೆ.
 • ದಕ್ಷಿಣ ರಾಜ್ಯಗಳು : ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಕೇರಳ ಮತ್ತು ತಮಿಳುನಾಡು
 • ಇತರೆ ರಾಜ್ಯಗಳು: ಉಳಿದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ.

ತಾಯಂದಿರ ಮರಣ ಪ್ರಮಾಣ ಎಂದರೇನು?

 • ತಾಯಂದಿರ ಮರಣ ಅನುಪಾತವನ್ನು (MMR) 100,000 ಜೀವಂತ ಜನನಗಳಿಗೆ ನಿರ್ದಿಷ್ಟ ಅವಧಿಯಲ್ಲಿ ತಾಯಂದಿರ ಸಾವಿನ ಸಂಖ್ಯೆ ಎಂದು ವ್ಯಾಖ್ಯಾನಿಸಲಾಗಿದೆ.

ಕರ್ನಾಟಕದಲ್ಲಿತಾಯಂದಿರ ಮರಣ ಅನುಪಾತ

 • 2016-18ರ ವರದಿಯ ಪ್ರಕಾರ ರಾಜ್ಯದಲ್ಲಿ ಪ್ರತಿ ಒಂದು ಲಕ್ಷ ಹೆರಿಗೆಗೆ 92 ತಾಯಂದಿರು ಮೃತಪಡುತ್ತಿದ್ದರು. 2017-19ರಲ್ಲಿ ಮರಣ ಪ್ರಮಾಣ 83 ರಷ್ಟು ಇಳಿಕೆಯಾಗಿತ್ತು. ಪ್ರಸ್ತುತ 69ಕ್ಕೆ ತಗ್ಗಿದ್ದು, ರಾಜ್ಯ 8ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.
 • ದಕ್ಷಿಣದ ಐದು ರಾಜ್ಯಗಳಿಗೆ ಹೋಲಿಕೆ ಮಾಡಿದಲ್ಲಿ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಾಯಂದಿರ ಮರಣ ವರದಿಯಾಗುತ್ತಿದೆ.
 • ಕರ್ನಾಟಕ ಸರಕಾರ 2025ರ ವೇಳೆಗೆ 50ಕ್ಕೆ ಹಾಗೂ 2030ರ ವೇಳೆಗೆ 10-20ಕ್ಕೆ ಇಳಿಸುವ ಗುರಿ ಹಾಕಿಕೊಂಡಿದೆ’’. ‘ರಾಜ್ಯದಲ್ಲಿ ರಾಯಚೂರು, ಬೀದರ್‌, ಯಾದಗಿರಿ, ಕಲಬುರಗಿ, ಚಾಮರಾಜನಗರ, ಉಡುಪಿ, ಶಿವಮೊಗ್ಗ ಜಿಲ್ಲೆಗಳಲ್ಲಿ ತಾಯಿ ಮರಣ ಪ್ರಮಾಣ ಹೆಚ್ಚಿದೆ. ಮುಂದಿನ ದಿನಗಳಲ್ಲಿಈ ಜಿಲ್ಲೆಗಳಲ್ಲಿ ಹೆಚ್ಚಿನ ಗಮನ ನೀಡಲಾಗುವುದು. ರಾಜ್ಯದಲ್ಲಿನ 85 ಸರಕಾರಿ ಆಸ್ಪತ್ರೆಗಳು ಲಕ್ಷ್ಯ ಪ್ರಮಾಣ ಪತ್ರ ಪಡೆದಿವೆ. ತಾಯಂದಿರ ಮರಣ ತಡೆಯಲು ಸರಕಾರ ಇನ್ನಷ್ಟು ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳನ್ನು ತೆರೆಯವುದಕ್ಕೆ ಚಿಂತನೆ ನಡೆಸಿದೆ