Published on: February 10, 2023

ದೇಶದ ಅತ್ಯಂತ ಉದ್ದದ ಎಕ್ಸ್ಪ್ರೆಸ್ ವೇ

ದೇಶದ ಅತ್ಯಂತ ಉದ್ದದ ಎಕ್ಸ್ಪ್ರೆಸ್ ವೇ


Cardenas ಸುದ್ಧಿಯಲ್ಲಿ ಏಕಿದೆ? http://yesand.co.uk/172-how-to-make-better-team-decisions/ ದೆಹಲಿ–ಮುಂಬೈ ಎಕ್ಸ್ಪ್ರೆಸ್ವೇನ 270 ಕಿ.ಮೀ. ಉದ್ದದ ಭಾಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ


ಮುಖ್ಯಾಂಶಗಳು

  • ದೆಹಲಿ ಮತ್ತು ಮುಂಬೈ ನಡುವಣ ಪೂರ್ಣ ಹೆದ್ದಾರಿಯು ಸಿದ್ಧವಾದ ನಂತರ ಇದು ದೇಶದ ಅತ್ಯಂತ ಉದ್ದದ ಎಕ್ಸ್ಪ್ರೆಸ್ ಹೆದ್ದಾರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
  • ದೇಶದ ರಾಜಧಾನಿ ದೆಹಲಿ ಮತ್ತು ವಾಣಿಜ್ಯ ರಾಜಧಾನಿ ಎಂದೇ ಖ್ಯಾತವಾಗಿರುವ ಮುಂಬೈ ನಡುವಣ ಈ ಹೆದ್ದಾರಿಯು ಹಲವು ಕೈಗಾರಿಕಾ ಪ್ರದೇಶಗಳು, ವಿಮಾನ ನಿಲ್ದಾಣಗಳು ಮತ್ತು ಬಂದರಿನ ಮಧ್ಯೆ ನೇರ ಸಂಪರ್ಕ ಕಲ್ಪಿಸಲಿದೆ.

ಈ ಎಕ್ಸ್ಪ್ರೆಸ್ವೇನಲ್ಲಿರುವ ಸವಲತ್ತುಗಳು

  • ಇದು ಎಂಟು ಲೇನ್ಗಳ ಹೆದ್ದಾರಿಯಾಗಿದ್ದು, ಭವಿಷ್ಯದಲ್ಲಿ 12 ಲೇನ್ಗಳಿಗೆ ವಿಸ್ತರಿಸಲು ಅಗತ್ಯವಾದಷ್ಟು ಭೂಮಿ ಇದೆ. ಲೇನ್ಗಳ ಸಂಖ್ಯೆಯನ್ನು ತ್ವರಿತವಾಗಿ ಹೆಚ್ಚಿಸಲು ಅನುಕೂಲವಾಗುವಂತೆ ಎಕ್ಸ್ಪ್ರೆಸ್ವೇಯನ್ನು ವಿನ್ಯಾಸ ಮಾಡಲಾಗಿದೆ
  • ಎಕ್ಸ್ಪ್ರೆಸ್ವೇ ಆರಂಭದಿಂದ ಕೊನೆಯವರೆಗೂ ಸಂಪೂರ್ಣವಾಗಿ ಸಿಗ್ನಲ್ಮುಕ್ತವಾಗಿದೆ.
  • ಟೋಲ್ ಘಟಕಗಳ ಮೂಲಕವೇ ಎಕ್ಸ್ಪ್ರೆಸ್ವೇಗೆ ಪ್ರವೇಶ ಇರಲಿದೆ
  • ನೆಲಮಟ್ಟದಿಂದ ಹಲವು ಮೀಟರ್ಗಳಷ್ಟು ಎತ್ತರದಲ್ಲಿ ಹೆದ್ದಾರಿ ನಿರ್ಮಿಸಲಾಗಿದೆ. ಅಗತ್ಯ ಇರುವೆಡೆ ಹೆದ್ದಾರಿ ಕೆಳಗೆ ಜಾನುವಾರು ಪಾಸ್ಗಳನ್ನು ನಿರ್ಮಿಸಲಾಗಿದೆ
  • ಉತ್ತರ ಪ್ರದೇಶದ ಜೆವಾರ್ ವಿಮಾನ ನಿಲ್ದಾಣ, ಮುಂಬೈ ವಿಮಾನ ನಿಲ್ದಾಣಕ್ಕೆ ಈ ಎಕ್ಸ್ಪ್ರೆಸ್ವೇ ಸಂಪರ್ಕ ಕಲ್ಪಿಸುತ್ತದೆ
  • ಮಹಾರಾಷ್ಟ್ರದ ಜವಾಹರ್ ಲಾಲ್ ನೆಹರೂ ಬಂದರಿಗೆ ಸಂಪರ್ಕ ಕಲ್ಪಿಸುತ್ತದೆ
  • ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣ, ಉತ್ತರ ಪ್ರದೇಶವನ್ನು ಈ ಎಕ್ಸ್ಪ್ರೆಸ್ವೇ ಹಾದು ಹೋಗುತ್ತದೆ