ದೇಶದ ಮೊದಲ ರಾಪಿಡ್ ಎಕ್ಸ್ ರೈಲು
ದೇಶದ ಮೊದಲ ರಾಪಿಡ್ ಎಕ್ಸ್ ರೈಲು
ಸುದ್ದಿಯಲ್ಲಿ ಏಕಿದೆ? ಭಾರತದಲ್ಲಿ ಪ್ರಾದೇಶಿಕ ತ್ವರಿತ ಪ್ರಯಾಣ ವ್ಯವಸ್ಥೆಯ(ಆರ್ ಆರ್ ಟಿ ಎಸ್) ಪ್ರಾರಂಭವನ್ನು ಗುರುತಿಸುವ ಮೂಲಕ ಸಾಹಿಬಾಬಾದ್ ನಿಂದ ದುಹೈ ಡಿಪೋಗೆ ಸಂಪರ್ಕ ಕಲ್ಪಿಸುವ ಭಾರತದ ಮೊದಲ ರಾಪಿಡ್ಎಕ್ಸ್ ರೈಲಿಗೆ ಪ್ರಧಾನ ಮಂತ್ರಿ ಚಾಲನೆ ನೀಡಿದರು.
ಮುಖ್ಯಾಂಶಗಳು
- ಇದನ್ನು “ನಮೋ ಭಾರತ್” ಎಂದು ಕರೆಯಲಾಗುತ್ತದೆ.
- ಒಟ್ಟು ಎಂಟು RRTS ಕಾರಿಡಾರ್‌ಗಳನ್ನು ಗುರುತಿಸಲಾಗಿದೆ ಅದರಲ್ಲಿ ಮುಖ್ಯವಾಗಿ ಮೂರು ಕಾರಿಡಾರ್‌ಗಳಲ್ಲಿ ಆದ್ಯತೆಯ ಮೇಲೆ RRTS ಅನ್ನು ಕಾರ್ಯಗತಗೊಳಿಸಲು ನಿರ್ಧರಿಸಿದೆ. ದೆಹಲಿ-ಗಾಜಿಯಾಬಾದ್-ಮೀರತ್ RRTS ಭಾರತದಲ್ಲಿ ಮೊದಲ ಹಂತದಲ್ಲಿ ಅನುಷ್ಠಾನಕ್ಕೆ ಯೋಜಿಸಲಾದ 3 ಕಾರಿಡಾರ್‌ಗಳಲ್ಲಿ ಮೊದಲನೆಯದು. ಇದರ ನಂತರ ದೆಹಲಿ-ಗುರುಗ್ರಾಮ-ಎಸ್ಎನ್ಬಿ-ಅಲ್ವಾರ್ ಮತ್ತು ದೆಹಲಿ-ಪಾಣಿಪತ್ ಕಾರಿಡಾರ್‌ಗಳು ಸಿದ್ಧವಾಗಲಿವೆ.
- ಮೊದಲ ಹಂತದಲ್ಲಿ ಈ ರಾಪಿಡ್ ರೈಲು ಸಹಿಬಾಬಾದ್ ಮತ್ತು ದುಹೈ ಡಿಪೋ(17km) ನಡುವೆ ಇದ್ದು, ಇದು ಸಹಿಬಾಬಾದ್, ಗಾಜಿಯಾಬಾದ್, ಗುಲ್ದಾರ್, ದುಹೈ ಮತ್ತು ದುಹೈ ಡಿಪೋ ಎಂಬ ಐದು ನಿಲ್ದಾಣಗಳನ್ನು ಒಳಗೊಂಡಿದೆ.
- ದೆಹಲಿ-ಗಾಜಿಯಾಬಾದ್-ಮೀರತ್ ಕಾರಿಡಾರ್ಗೆ ಪ್ರಧಾನ ಮಂತ್ರಿ ಮೋದಿ 2019ರ ಮಾರ್ಚ್ 8ರಂದು ಶಂಕು ಸ್ಥಾಪನೆ ನೆರವೇರಿಸಿದ್ದರು.
- ವೆಚ್ಚ : 30,274 ಕೋಟಿ ರೂ.
- ಈ ಯೋಜನೆಗೆ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್, ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್ ಮತ್ತು ಏಷ್ಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್ ಹಣವನ್ನು ನೀಡಿದೆ.
- ಅಭಿವೃದ್ಧಿಪಡಿಸಿದವರು: ಈ ಯೋಜನೆಯನ್ನು ಭಾರತ ಸರ್ಕಾರ ಮತ್ತು ದೆಹಲಿ, ಹರಿಯಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ಸರ್ಕಾರಗಳ ಜಂಟಿ ಉದ್ಯಮವಾದ ರಾಷ್ಟ್ರೀಯ ರಾಜಧಾನಿ ಪ್ರದೇಶ ಸಾರಿಗೆ ಸಂಸ್ಥೆ (NCRTC).
- ವಿನ್ಯಾಸ ಮತ್ತು ತಯಾರಿಕೆ: ತೆಲಂಗಾಣದ ಹೈದರಾಬಾದ್‌ನಲ್ಲಿರುವ ಇಂಜಿನಿಯರಿಂಗ್ ಸೆಂಟರ್‌ನಲ್ಲಿ ಫ್ರೆಂಚ್ ರೋಲಿಂಗ್ ಸ್ಟಾಕ್ ತಯಾರಕ ಆಲ್‌ಸ್ಟೋಮ್ ಈ ರೈಲನ್ನು ವಿನ್ಯಾಸಗೊಳಿಸಿದೆ ಮತ್ತು ಗುಜರಾತ್‌ನ ಸಾವ್ಲಿಯಲ್ಲಿ ತಯಾರಿಸಲಾಗಿದೆ.
ವಿಶೇಷತೆಗಳು
- ದೆಹಲಿ-ಮೀರತ್ ಕಾರಿಡಾರ್‌ನ ಒಟ್ಟು ಉದ್ದ 82 ಕಿಲೋಮೀಟರ್ ಆಗಿದ್ದು, ರ್ಯಾಪಿಡ್ಎಕ್ಸ್ ರೈಲು 1 ಗಂಟೆಯಲ್ಲಿ ದೆಹಲಿಯಿಂದ ಮೀರತ್ಗೆ ಸಂಚರಿಸುತ್ತದೆ.
- ಓವರ್ ಹೆಡ್ ಸ್ಟೋರೇಜ್, ವೈಫೈ, ಪ್ರತಿ ಸೀಟಿನಲ್ಲಿಯೂ ಚಾರ್ಜಿಂಗ್ ಆಯ್ಕೆಗಳಂತಹ ವಿಶಿಷ್ಟ ಸೌಲಭ್ಯಗಳನ್ನು ಇವು ಪ್ರಯಾಣಿಕರಿಗೆ ಒದಗಿಸಲಿವೆ. ಮುಖ್ಯವಾಗಿ ಇದು ಪ್ರೀಮಿಯಂ ದರ್ಜೆಯ ಬೋಗಿಗಳನ್ನು ಹೊಂದಿದ್ದು, ವಿಶಾಲ ಆಸನಗಳು ಹಾಗೂ ಕೋಟ್ ಹ್ಯಾಂಗರ್‌ಗಳನ್ನು ಒಳಗೊಂಡಿದೆ.
- ಸಂಪೂರ್ಣ ಹವಾ ನಿಯಂತ್ರಿತವಾದ ಈ ರೈಲಿನಲ್ಲಿ ಸುರಕ್ಷತೆಗಾಗಿ ಸಿಸಿಟಿವಿ ಕ್ಯಾಮೆರಾಗಳು, ತುರ್ತು ಬಾಗಿಲು ತೆರೆಯುವ ಯಾಂತ್ರಿಕತೆ ಮತ್ತು ರೈಲು ಕಾರ್ಯ ನಿರ್ವಾಹಕರ ಜತೆ ಸಂವಹಿಸಲು ಬಟನ್ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.
- ಅಧಿಕ ಆವರ್ತನದ ಪ್ರಯಾಣ ವ್ಯವಸ್ಥೆಯಾಗಿದ್ದು, 180 ಕಿಮೀ ವೇಗದಲ್ಲಿ ಚಲಿಸುವಂತೆ ವಿನ್ಯಾಸಗೊಳಿಸಲಾಗಿದೆ.
ನಿಮಗಿದು ತಿಳಿದಿರಲಿ
NCRTC ಕಂಪನಿಯು ರ್ಯಾಪಿಡ್ ರೈಲು ನಿಲ್ದಾಣಗಳು ಮತ್ತು ಡಿಪೋಗಳಲ್ಲಿ ಸೋಲರ್ ಪ್ಯಾನಲ್ಗಳನ್ನು ಅಳವಡಿಸುವುದು, ಬ್ಲೆಂಡೆಡ್ ಪವರ್ ಉಪಯೋಗವನ್ನು ಕ್ರಮೇಣ ಹೆಚ್ಚಿಸುವ ಮೂಲಕ ಗ್ರೀನ್ ಎನರ್ಜಿಯನ್ನು ಬಳಸಲು ಯೋಜಿಸಲಾಗಿದೆ.ಡಿಕಾರ್ಬೊನೈಸೇಶನ್‌ಗೆ ಬ್ರ್ಯಾಂಡ್‌ನ ಬದ್ಧತೆಯನ್ನು ಸೂಚಿಸಲು ಬ್ರ್ಯಾಂಡ್ ಲೋಗೋಗೆ ಎಲೆಯ ಚಿಹ್ನೆಯನ್ನು ಬಳಸಲಾಗಿದೆ.
RRTS : ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿನ ನಗರಗಳು ಮತ್ತು ಪಟ್ಟಣಗಳನ್ನು ಸಂಪರ್ಕಿಸುವ ಹೆಚ್ಚಿನ ವೇಗದ, ಹೆಚ್ಚಿನ ಆವರ್ತನದ ರೈಲು ಆಧಾರಿತ ಸಾರಿಗೆ ವ್ಯವಸ್ಥೆಯಾಗಿದೆ. NCR (ರಾಷ್ಟ್ರೀಯ ರಾಜಧಾನಿ ಪ್ರದೇಶ)ನಾದ್ಯಂತ ಉತ್ತಮ ಸಂಪರ್ಕ ಮತ್ತು ಪ್ರವೇಶದ ಮೂಲಕ “ಸಮತೋಲಿತ ಮತ್ತು ಸುಸ್ಥಿರ ನಗರ ಅಭಿವೃದ್ಧಿ” ಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ.
NCR : ‘ರಾಷ್ಟ್ರೀಯ ರಾಜಧಾನಿ ಪ್ರದೇಶ(NCR) ವು ಭಾರತದಲ್ಲಿ ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶವನ್ನು ಕೇಂದ್ರೀಕರಿಸಿದ ಯೋಜನಾ ಪ್ರದೇಶವಾಗಿದೆ. ಇದು ದೆಹಲಿ ಮತ್ತು ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳಿಂದ ಸುತ್ತಮುತ್ತಲಿನ ಹಲವಾರು ಜಿಲ್ಲೆಗಳನ್ನು ಒಳಗೊಂಡಿದೆ
NCRTC
- NCRTC ಕೇಂದ್ರ ಸರ್ಕಾರ ಮತ್ತು ಉತ್ತರ ಪ್ರದೇಶ, ಹರಿಯಾಣ, ರಾಜಸ್ಥಾನ ಮತ್ತು ದೆಹಲಿ ರಾಜ್ಯಗಳ ನಡುವಿನ ಜಂಟಿ ಪಾಲುದಾರಿಕೆ ಸಂಸ್ಥೆಯಾಗಿದೆ.
- ಇದು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತದೆ.