Published on: May 5, 2024

ದೇಶದ ಮೊದಲ ಸ್ವದೇಶಿ ಮಾನವರಹಿತ ಬಾಂಬರ್ ಡ್ರೋನ್

ದೇಶದ ಮೊದಲ ಸ್ವದೇಶಿ ಮಾನವರಹಿತ ಬಾಂಬರ್ ಡ್ರೋನ್

    ಸುದ್ದಿಯಲ್ಲಿ ಏಕಿದೆ? ದೇಶದ ಮೊದಲ ಸ್ವದೇಶಿ ಮಾನವರಹಿತ FWD-200B ಏರ್ಕ್ರಾಫ್ಟ್ ಯುದ್ಧ ಬಾಂಬರ್  ಡ್ರೋನ್ ಅನ್ನು ಬೆಂಗಳೂರಿನಲ್ಲಿ ಅನಾವರಣಗೊಳಿಸಲಾಗಿದೆ.

    ಮುಖ್ಯಾಂಶಗಳು 

  • ವಿನ್ಯಾಸ: ಫ್ಲೈಯಿಂಗ್ ವೆಡ್ಜ್ ಕಂಪನಿ
  • FWD-200B ಮೀಡಿಯಂ ಅಲ್ಟಿಟ್ಯೂಡ್ ಲಾಂಗ್ ಎಂಡ್ಯೂರೆನ್ಸ್ (MALE) ಮಾನವರಹಿತ ಯುದ್ಧ ವೈಮಾನಿಕ ವಾಹನವಾಗಿದ್ದು, ಸಂಪೂರ್ಣವಾಗಿ ಭಾರತದಲ್ಲಿ ವಿನ್ಯಾಸಗೊಳಿಸಲಾಗಿದೆ ಮತ್ತು ತಯಾರಿಸಲಾಗುತ್ತದೆ.
  • ಬಾಂಬರ್ ಡ್ರೋನ್ ಅನಾವರಣದೊಂದಿಗೆ ಭಾರತವು ಸುಧಾರಿತ ಬಾಂಬರ್ಗಳ ಸಾಮರ್ಥ್ಯವುಳ್ಳ ದೇಶಗಳ ಸಾಲಿಗೆ ಸೇರಿದೆ.
  • ಇದು ಭಾರತವನ್ನು ಆತ್ಮನಿರ್ಭರ ಶಕ್ತಿಯನ್ನಾಗಿ ಹೊರಹೊಮ್ಮುವಂತೆ ಮಾಡುವುದರ ಜೊತೆಗೆ, ದೇಶದ ರಕ್ಷಣಾ ವೆಚ್ಚವನ್ನು ತಗ್ಗಿಸುವಲ್ಲಿ ಮಹತ್ವದ ಪಾತ್ರವಹಿಸಲಿದೆ’.
  • ಅಮೆರಿಕದ ‘ಪ್ರಿಡೇಟರ್’ಗೆ ₹250 ಕೋಟಿ ವೆಚ್ಚವಾದರೆ, ಅತ್ಯಾಧುನಿಕ ತಂತ್ರಜ್ಞಾನವುಳ್ಳ ಹಾಗೂ ಭಾರತದಲ್ಲೇ ತಯಾರಾದ FWD-200B ಏರ್ಕ್ರಾಫ್ಟ್ಗೆ ಕೇವಲ ₹25 ಕೋಟಿ ವೆಚ್ಚವಾಗಲಿದೆ.

    ಉದ್ದೇಶ

ಮೇಕ್ ಇನ್ ಇಂಡಿಯಾ ಯೋಜನೆಗೆ ಬಲ ತುಂಬುವ ಹಾಗೂ ದುಬಾರಿ ಮಾನವರಹಿತ ಬಾಂಬರ್ ವಿಮಾನಗಳಿಗಾಗಿ ಭಾರತವು ವಿದೇಶಗಳ ಮೇಲೆ ಅವಲಂಬಿತವಾಗುವುದನ್ನು ತಗ್ಗಿಸುವ ಉದ್ದೇಶ ಹಾಗೂ ಭಾರತವನ್ನು ಜಾಗತಿಕ ಮಟ್ಟದ ಡ್ರೋನ್ ಉತ್ಪಾದನಾ ಕೇಂದ್ರವನ್ನಾಗಿಸುವುದು.

   ವಿಶೇಷತೆಗಳು

  • ಸಾಮರ್ಥ್ಯ: 100 ಕೆ.ಜಿ. ಪೇಲೋಡ್ ತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ
  • ಇದರಲ್ಲಿ ಆಫ್ಟಿಕಲ್ ಸರ್ವೇಲೆನ್ಸ್ ಪೇಲೋಡ್ ಳನ್ನು ಹಾಗೂ ಕ್ಷಿಪಣಿ ರೀತಿಯಲ್ಲಿ ನಿಖರ ವಾಯುದಾಳಿ ನಡೆಸುವ, ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಬಹುದಾಗಿದೆ.
  • ವೇಗ: ಗರಿಷ್ಠ 370 ಕಿ.ಮೀ. ಪ್ರತಿ ಗಂಟೆ(200 knots) ವೇಗದಲ್ಲಿ 12ರಿಂದ 20ಗಂಟೆ ಹಾರಾಡಬಲ್ಲದು
  • ಇದು 498 ಕೆ.ಜಿ ತೂಕ ಹೊತ್ತು ಟೇಕಾಫ್ ಮಾಡಬಲ್ಲದು.
  • ಗ್ರೌಂಡ್ ಕಂಟ್ರೋಲ್ ಸ್ಟೇಶನ್ ಜೊತೆಗೆ (ಜಿಸಿಎಸ್) 200 ಕಿ.ಮೀ. ದೂರದವರೆಗೆ ಸಂಪರ್ಕ ಹೊಂದಿರುವ ಸಾಮರ್ಥ್ಯವನ್ನು ಹೊಂದಿದೆ.