Published on: November 19, 2023

ಧರ್ತಿಮಿತ್ರ ಮೊಬೈಲ್ ಆಪ್‌

ಧರ್ತಿಮಿತ್ರ ಮೊಬೈಲ್ ಆಪ್‌

ಸುದ್ದಿಯಲ್ಲಿ ಏಕಿದೆ? ಅಖಿಲ ಭಾರತ, ಸುಸಂಘಟಿತ ಮಣ್ಣು ಪರೀಕ್ಷೆ ಮತ್ತು ಬೆಳೆ ಸ್ಪಂದನ ಸಹಕಾರದೊಂದಿಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಧರ್ತಿಮಿತ್ರ ಎಂಬ ವೆಬ್‌ಸೈಟ್ ಮತ್ತು ಮೊಬೈಲ್ ಆಪ್‌ನ್ನು ಅಭಿವೃದ್ಧಿ ಪಡಿಸಿದೆ. ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಕರ್ನಾಟಕದ ಮುಖ್ಯಮಂತ್ರಿಯವರು ಈ ಆಪ್ ಅನ್ನು ಲೋಕಾರ್ಪಣೆಗೊಳಿಸಿದರು

ಮುಖ್ಯಾಂಶಗಳು

  • ಧರ್ತಿಮಿತ್ರ ಅಪ್ ಅನ್ನು – ಬೆಂಗಳೂರು ಗ್ರಾಮಾಂತರ, ಕೋಲಾರ ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಹಾಸನ, ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಿಗೆ ಅಭಿವೃದ್ಧಿಪಡಿಸಲಾಗಿದೆ.
  • ಆ್ಯಪ್‌ನಲ್ಲಿ ಸ್ಥಳದ ಭೌಗೋಳಿಕ ನಿರ್ದೇಶಾಂಕಗಳು ಅಥವಾ ರೈತರ ಹೊಲದ ಸರ್ವೇ ಸಂಖ್ಯೆಯನ್ನು ನಮೂದಿಸಿದಾಗ ಮಣಿನಲ್ಲಿರುವ ಎಸ್‌ಟಿಪಿಆರ್ ಅಧಾರಿತ ರಸಗೊಬ್ಬರಗಳ ಶಿಫಾರಸ್ಸಿನ ಪ್ರಮಾಣ ಹಾಗೂ ಸಮೀಕರಣಗಳಿಲ್ಲದ ಬೆಳೆಗಳಿಗೆ ಕಡಿಮೆ ಮಧ್ಯಮ ಹೆಚ್ಚು (ಎಲ್‌ಎಂಎಚ್) ವಿಧಾನದಲ್ಲಿ ರಸಗೊಬ್ಬರಗಳ ಶಿಫಾರಸಿನ ಪ್ರಮಾಣದ ವರದಿ ಲಭ್ಯವಾಗುತ್ತದೆ.

ಉದ್ದೇಶ

ಮಣ್ಣು ಪರೀಕ್ಷೆ ಮೂಲಕ ಫಲವತ್ತತೆಗೆ ಅನುಗುಣವಾಗಿ ಅಗತ್ಯ ರಸಗೊಬ್ಬರಗಳನ್ನು ಹಾಕಿದರೆ ಸುಸ್ಥಿತ ಇಳುವರಿ ಪಡೆಯಲು ಸಾಧ್ಯವಾಗುತ್ತದೆ.  ತಂತ್ರಜ್ಞಾನ ಯುಗದಲ್ಲಿ ಮೊಬೈಲ್ ಆಪ್  ಬಳಸಿಕೊಂಡು ಮಣ್ಣಿನ ಫಲವತ್ತತೆ ಹಾಗೂ ಬೆಳೆಗೆ ಅಗತ್ಯವಿರುವ ಪೋಷಕಾಂಶಗಳನ್ನು ತಿಳಿದುಕೊಳ್ಳಬಹುದಾಗಿದೆ

ಪ್ರಯೋಜನ

ಭೌಗೋಳಿಕ ನಿರ್ದೇಶಾಂಕಗಳ ಆಧಾರದ ಮೇಲೆ ಪ್ರತಿ 100 ಮೀ. ಮಣ್ಣು ಪರೀಕ್ಷಾ ವರದಿಯನ್ನು ಆ್ಯಪ್ ಸಹಾಯದಿಂದ ಪಡೆಯಬಹುದು. ಇದರಿಂದಾಗಿ ಹಲವು ಬಾರಿ ಮಣ್ಣಿನ ಮಾದರಿ ಸಂಗ್ರಹಣೆ ಮತ್ತು ವಿಶ್ಲೇಷಣೆ ಮಾಡಬೇಕಾಗುವ ಸಮಯ, ವೆಚ್ಚವನ್ನು ಉಳಿಸಬಹುದು. ಆ್ಯಪ್‌ನ, ತಂತ್ರಾಂಶದಲ್ಲಿ   ಮಣ್ಣು ಪರೀಕ್ಷೆ ಆಧಾರದ ಮೇಲೆ ರಸಗೊಬ್ಬರಗಳ ಶಿಫಾರಸನ್ನು ಮಾಡಲಾಗಿದ್ದು ಸುಸ್ಥಿರ ಕೃಷಿ  ಮತ್ತು ಮಣ್ಣಿನ ಫಲವತ್ತತೆಯ ಮಾಹಿತಿ ಸಿಗುತ್ತದೆ.