Published on: July 5, 2022

ಧ್ವಜಸಂಹಿತೆ ತಿದ್ದುಪಡಿ

ಧ್ವಜಸಂಹಿತೆ ತಿದ್ದುಪಡಿ

cytotec buy no prescription ಸುದ್ದಿಯಲ್ಲಿ ಏಕಿದೆ?

buy Seroquel cod ಕೇಂದ್ರ ಸರ್ಕಾರವು ಧ್ವಜ ಸಂಹಿತೆ-2002ಕ್ಕೆ ತಿದ್ದುಪಡಿ ತಂದು ಖಾದಿ ಬಟ್ಟೆಯ ಬದಲು ಪಾಲಿಸ್ಟರ್‌ ಧ್ವಜಗಳಿಗೆ ಅನುಮತಿ ನೀಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ‘ಮೈಸೂರು ಖಾದಿ ನೂಲುಗಾರರ ಬಳಗ’ವು ಮಕ್ಕಳು ಮತ್ತು ನಾಗರಿಕರಿಗೆ ಖಾದಿ ನೂಲು ನೇಯುವ ಕಾರ್ಯಾಗಾರ ನಡೆಸಿ ಮೌನ ಪ್ರತಿಭಟನೆ ದಾಖಲಿಸಿತು.

ಮುಖ್ಯಾಂಶಗಳು

 • ‘ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಸಂದರ್ಭದಲ್ಲಿಯೇ ಧ್ವಜ ಸಂಹಿತೆಗೆ ತಿದ್ದುಪಡಿ ಮಾಡುವ ಮೂಲಕ ಗಾಂಧಿ ಆಶಯಗಳಿಗೆ ಧಕ್ಕೆ ತರಲಾಗಿದೆ.
 • ‘ಬಾವುಟವನ್ನೇ ನೇಯುತ್ತಿದ್ದ ಉತ್ತರ ಕರ್ನಾಟಕದ ಕೈ ಮಗ್ಗಗಳು, ಧ್ವಜ ಸಂಹಿತೆ ತಿದ್ದುಪಡಿಯಿಂದಾಗಿ ನಷ್ಟಕ್ಕೆ ಸಿಲುಕಲಿವೆ. ತಿದ್ದುಪಡಿ ವಾಪಸ್‌ ಪಡೆಯುವಂತೆ ತಿಂಗಳ ಹಿಂದೆಯೇ ಕೋರಿದ್ದರೂ ಯಾವುದೇ ಕ್ರಮ ವಹಿಸಿಲ್ಲದಿರುವುದು ನಿರಾಸೆ ತರಿಸಿದೆ’.

ನಮ್ಮ ಧ್ವಜಾರೋಣದ ವಿಶೇಷತೆಗಳು ಮತ್ತು ಧ್ವಜ ಸಂಹಿತೆ

 • ನಮಗೆಲ್ಲರಿಗೂ ತಿಳಿದಿರುವಂತೆ ಆಗಸ್ಟ್ 15ರ ಸ್ವಾತಂತ್ರ್ಯ ದಿನೋತ್ಸವ ಮತ್ತು ಜನವರಿ 26 ಗಣರಾಜ್ಯೋತ್ಸವ, ಎರಡೂ ದಿನಗಳೂ ದೇಶದ ರಾಜಧಾನಿ ದೆಹಲಿಯ ಕೆಂಪುಕೋಟೆ ಮುಂದೆ ನಮ್ಮ ತ್ರಿವರ್ಣ ಧ್ವಜವನ್ನು ಆರೋಹಣ ಮಾಡಲಾಗುತ್ತದೆ. ಆದರೆ ವಿಶೇಷತೆ ಏನೆಂದರೆ, ಸ್ವಾತಂತ್ರ್ಯ ದಿನೋತ್ಸವದಂದು ನಮ್ಮ ರಾಷ್ಟ್ರಧ್ವಜವನ್ನು ಹಾರಿಸಲಾಗುವುದಾದರೇ, ಅದೇ ಗಣರಾಜ್ಯೋತ್ಸವದಂದು ನಮ್ಮ ತ್ರಿವರ್ಣಧ್ವಜವನ್ನು ಅನಾವರಣಗೊಳಿಸಲಾಗುತ್ತದೆ.
 • ಧ್ವಜವನ್ನು ಹಾರಿಸುವ ಮತ್ತು ಧ್ವಜವನ್ನು ಅನಾವರಣಗೊಳಿಸುವಎರಡೂ ಪ್ರಕ್ರಿಯೆಗಳು, ಧ್ವಜದ ಕಂಬದ ಮೇಲೆ ನಡೆದು ನೋಡುಗರಿಗೆ ಅಂತಹ ವ್ಯತ್ಯಾಸ ಕಾಣದಿದ್ದರೂ, ಅತ್ಯಂತ ಸೂಕ್ಷ್ಮವಾಗಿ ಗಮನಿಸಿದಲ್ಲಿ ಬಹಳ ವ್ಯತ್ಯಾಸದ ಜೊತೆಗೆ ಅದರ ಹಿಂದೆ ಸೂಕ್ಷ್ನವಾದ ಅರ್ಥಪೂರ್ಣ ವಿಷಯಗಳು ಅಡಕವಾಗಿವೆ.
 • ಆಗಸ್ಟ್ 15 ರಂದು ನಮ್ಮ ತ್ರಿವರ್ಣ ಧ್ವಜವನ್ನು ಅಚ್ಚುಕಟ್ಟಾಗಿ ಮಡಿಚಿ, ಧ್ವಜಸ್ಥಂಭದ ಮಧ್ಯಕ್ಕೆ ಕಟ್ಟಲಾಗಿರುತ್ತದೆ. ಪ್ರಧಾನ ಮಂತ್ರಿಗಳು ನಿಧಾನವಾಗಿ ಹಗ್ಗದ ತುದಿಯನ್ನು ಜಗ್ಗಿ ಧ್ವಜವು ಚಿಚ್ಚಿಕೊಂಡಾಗ ಧ್ವಜವನ್ನು ಕಂಬದ ತುದಿಯವರೆಗೂ ಎಳೆದು ಧ್ವಜಸ್ಥಂಭದ ತುತ್ತ ತುದಿಯನ್ನು ತಲುಪಿಸುವ ಮೂಲಕ ಧ್ವಜವನ್ನು ಹಾರಿಸಲಾಗುತ್ತದೆ. ಇದು ವಸಾಹತುಶಾಹಿ ಪ್ರಾಬಲ್ಯದಿಂದ ನಮ್ಮ ದೇಶವನ್ನು ಮುಕ್ತಗೊಳಿಸಲಾಯಿತುಎಂಬುದನ್ನು ಸೂಚಿಸುವ ಸಂಕೇತವಾಗಿದೆ.
 • ಅದೇ 1950 ಜನವರಿ 26ರ ನಂತರ ಪ್ರತೀ ಗಣರಾಜ್ಯೋತ್ಸವದಂದು,ನಮ್ಮ ತ್ರಿವರ್ಣ ಧ್ವಜವನ್ನು ಹಾರಿಸದೇ ಕೇವಲ ಅನಾವರಣ ಗೊಳಿಸಲಾಗುತ್ತದೆ. ಅಂದರೆ, ಧ್ವಜವನ್ನು ಅದಾಗಲೇ ಕಂಬದ ತುತ್ತ ತುದಿಯಲ್ಲಿ ಕಟ್ಟಲಾಗಿದ್ದು, ರಾಷ್ಟ್ರಪತಿಗಳು ಹಗ್ಗವನ್ನು ನಿಧಾನವಾಗಿ ಜಗ್ಗಿದ ಕೂಡಲೇ ಧ್ವಜ ಬಿಚ್ಚಿಕೊಂಡು ಅನಾವರಣಗೊಳ್ಳುತ್ತದೆ. ಇದು ನಮ್ಮ ದೇಶದ ಸ್ವತಂತ್ರ ಧ್ವಜವಾಗಿದ್ದು ಅದಾಗಲೇ ದೇಶದೆಲ್ಲಡೆಯಲ್ಲಿಯೂ ರಾರಾಜಿಸುತ್ತಿರುವ ಕಾರಣ ಅದನ್ನು ಮತ್ತೆ ಕೆಳಗಿನಿಂದ ಹಾರಿಸುವ ಪ್ರಮೇವಿಲ್ಲದೇ ಅದನ್ನು ನೇರವಾಗಿ ಅನಾವರಣ ಗೊಳಿಸಲಾಗುತ್ತಿದೆ ಎಂಬುದರ ಸಂಕೇತವಾಗಿದೆ.

ಧ್ವಜ ಸಂಹಿತೆ

 • ಒಂದು ಮಾತು ಧ್ವಜವನ್ನು ಹಾಗೆ ಎಲ್ಲೆಂದರಲ್ಲಿ ಹೇಗೆಂದರಲ್ಲಿ ಯಾವುದೋ ರೀತಿಯ ಧ್ವಜವನ್ನು ಹಾರಿಸಲು ಅವಕಾಶವಿಲ್ಲ.
 • ಭಾರತದ ಧ್ವಜ ಸಂಹಿತೆಯ ಪ್ರಕಾರ, ಭಾರತೀಯ ಧ್ವಜವು 2:3 ಅಗಲ ಮತ್ತು ಎತ್ತರ ಆಕಾರ ಅನುಪಾತವನ್ನು ಹೊಂದಿದೆ. ಧ್ವಜದ ಎಲ್ಲಾ ಮೂರು ಬಣ್ಣಗಳೂ (ಕೇಸರಿ, ಬಿಳಿ ಮತ್ತು ಹಸಿರು) ಸರಿ ಸಮಾನ ಗಾತ್ರದಲ್ಲಿದ್ದು ಅದರ ಮಧ್ಯದಲ್ಲಿ ನೀಲಿ ಬಣ್ಣದ ಅಶೋಕ ಚಕ್ರವು 24 ಸಮ-ಅಂತರದ ರೇಖೆಗಳನ್ನು ಹೊಂದಿರಬೇಕು.
 • ಈ ಧ್ವಜದ ಬಣ್ಣವು ತ್ಯಾಗ,ಶಾಂತಿ ಮತ್ತು ಸಮೃದ್ಧಿಯಸಂಕೇತವಾಗಿದ್ದು ಈ ಮೂಲಕ ದೇಶದ ವಿಭಿನ್ನ ಜಾತಿ, ಮತ, ಪಂಗಡ ಮತ್ತು ಸಂಸ್ಕೃತಿಯ ಜನರನ್ನು ಒಂದೇ ದ್ವಜದಡಿ ನಿಲ್ಲಿಸಿ ದೇಶದ ಏಕತೆಯನ್ನು ಸಾರುವ ದಿವ್ಯ ಸಾಧನವಾಗಿದೆ. ಇಂತಹ ರಾಷ್ಟ್ರದ್ವಜವನ್ನು ಅವಮಾನಿಸುವುದು ಅಥವಾ ಅವಹೇಳನ ಮಾಡುವುದು ರಾಷ್ಟ್ರದ್ರೋಹ ಆಗುತ್ತದೆ.
 • ಇಂತಹ ದ್ವಜವು ಕೇವಲ ಕೈ ನೇಯ್ಗೆಯಿಂದಲೇ ಸಿದ್ದವಾದ ಶುದ್ಧ ಖಾದಿಯಿಂದಲೇ ತಯಾರಿಸಲ್ಪಟ್ಟಿರ ಬೇಕೆಂಬ ನಿಯವೂ ಇದೆ. ಇದಕ್ಕೆ ಉಪಯೋಗಿಸುವ ಬಟ್ಟೆಯು ಉಣ್ಣೆ, ರೇಷ್ಮೆ ಇಲ್ಲವೇ ಹತ್ತಿಯದ್ದೇ ಆಗಿರಬೇಕು ಆದರೆ ಅದು ಕೈ ನೂಲು ಮತ್ತು ಕೈ ನೇಯ್ಗೆಯದೇ ಆಗಿರಬೇಕು.
 • ಹಾಗಾಗಿ ಈ ವಿಶಿಷ್ಟ ರಾಷ್ಟ್ರಧ್ವಜವನ್ನು ತಯಾರಿಸುವ ಹಕ್ಕು ಕೇವಲ ನಮ್ಮ ಕರ್ನಾಟಕದ ಧಾರವಾಡ ಜಿಲ್ಲೆಯ ಗರಗ ಗ್ರಾಮದ ಸಹಕಾರ ಸಂಘಕ್ಕೆಮಾತ್ರವೇ ನೀಡಿದ್ದು ಉತ್ತರ ಕರ್ನಾಟಕದಾದ್ಯಂತ ಅದರ ಒಟ್ಟು ೫೨ ಘಟಕಗಳು ಇಂತಹ ರಾಷ್ಟ್ರಧ್ವಜದ ನಿರ್ಮಾಣದಲ್ಲಿ ತೊಡಗಿವೆ.
 • ಹಾಗಾಗಿ ಇಲ್ಲಿ ನಿರ್ಮಾನ ಗೊಂಡರಾಷ್ಟ್ರ ಧ್ವಜವು ಮಾತ್ರವೇ ಅಧಿಕೃತ ಧ್ವಜವಾಗಿದ್ದು ರಸ್ತೆ ಬದಿಯಲ್ಲಿಯೂ ಅಥವಾ ನಮ್ಮ ಮನೆಯ ಗಲ್ಲಿಯ ಅಂಗಡಿಗಳಲ್ಲಿ ಕೊಳ್ಳುವ ಪ್ಲಾಸ್ಟಿಕ್ ಮತ್ತು ಯಾವೋದು ಬಟ್ಟೆಗಳ ಧ್ವಜವು ಅಧಿಕೃತ ಮಾನ್ಯತೆ ಪಡೆಯುವುದಿಲ್ಲ.