Published on: January 23, 2023

ನಕ್ಷತ್ರ ಪುಂಜದ ರೇಡಿಯೊ ಸಂಕೇತ ಪತ್ತೆ

ನಕ್ಷತ್ರ ಪುಂಜದ ರೇಡಿಯೊ ಸಂಕೇತ ಪತ್ತೆ


ಸುದ್ದಿಯ್ಲಲಿ ಏಕಿದೆ? ಕೆನಡಾದ ಮ್ಯಾಕ್‌ಗಿಲ್ ವಿಶ್ವವಿದ್ಯಾನಿಲಯ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ಖಗೋಳ ಶಾಸ್ತ್ರಜ್ಞರು ಪುಣೆಯ ಜೈಂಟ್ ಮೆಟ್ರೆವೇವ್ ರೇಡಿಯೊ ಟೆಲಿಸ್ಕೋಪ್ (ಜಿಎಂಆರ್‌ಟಿ) ದತ್ತಾಂಶದ ಮೂಲಕ ದೂರದ ನಕ್ಷತ್ರಪುಂಜದ ಪರಮಾಣು ಹೈಡ್ರೋಜನ್‌ನಿಂದ ಹೊರಹೊಮ್ಮಿದ ರೇಡಿಯೊ ಸಂಕೇತಗಳನ್ನು ಪತ್ತೆ ಮಾಡಿದ್ದಾರೆ.


ಮುಖ್ಯಾಂಶಗಳು

  • ಈವರೆಗೆ ಅತ್ಯಂತ ದೊಡ್ಡ ಅಂತರದ ಗ್ಯಾಲಕ್ಸಿಯಿಂದ ಬಂದ ರೇಡಿಯೊ ಸಂಕೇತ ಇದಾಗಿದೆ’ಎಂದು ಐಐಎಸ್‌ಸಿ ಹೇಳಿದೆ.
  • ಪರಮಾಣು ಹೈಡ್ರೋಜನ್‌ನಿಂದ ಹೊರಸೂಸಲ್ಪಟ್ಟ ಈ ಸಂಕೇತವು 21 ಸೆಂ.ಮೀ ತರಂಗಾಂತರ ಹೊಂದಿದೆ.
  • ಮೆಕ್‌ಗಿಲ್ ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ಮತ್ತು ಟ್ರಾಟಿಯರ್ ಸ್ಪೇಸ್ ಇನ್‌ಸ್ಟಿಟ್ಯೂಟ್‌ನ ಪೋಸ್ಟ್‌ಡಾಕ್ಟರಲ್ ಸಂಶೋಧಕ ಅರ್ನಾಬ್ ಚಕ್ರವರ್ತಿ ಹಾಗೂ ಐಐಎಸ್‌ಸಿಯ ಭೌತಶಾಸ್ತ್ರ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ನಿರುಪಮ್ ರಾಯ್, ನಕ್ಷತ್ರಪುಂಜದಲ್ಲಿನ ಪರಮಾಣು ಹೈಡ್ರೋಜನ್‌ನಿಂದ ರೇಡಿಯೊ ಸಿಗ್ನಲ್ ಅನ್ನು ಪತ್ತೆಹಚ್ಚಲು ಜಿಎಂಆರ್‌ಟಿಯ ದತ್ತಾಂಶವನ್ನು ಬಳಸಿದ್ದಾರೆ.
  • ಮೂಲ ಇಂಧನ: ಆಟೊಮಿಕ್ ಹೈಡ್ರೋಜನ್ ನಕ್ಷತ್ರಪುಂಜದಲ್ಲಿ ನಕ್ಷತ್ರ ರಚನೆಗೆ ಅಗತ್ಯವಾದ ಮೂಲ ಇಂಧನವಾಗಿದೆ.
  • ನಕ್ಷತ್ರಗಳ ರಚನೆ: ಗ್ಯಾಲಕ್ಸಿಯ ಸುತ್ತಮುತ್ತಲಿನಿಂದ ಬಿಸಿ ಅಯಾನೀಕೃತ ಅನಿಲವು ನಕ್ಷತ್ರಪುಂಜದ ಮೇಲೆ ಬಿದ್ದಾಗ, ಅನಿಲವು ತಣ್ಣಗಾಗುತ್ತದೆ ಮತ್ತು ಪರಮಾಣು ಹೈಡ್ರೋಜನ್ ರೂಪುಗೊಳ್ಳುತ್ತದೆ. ಕ್ರಮೇಣ ಅದು ಆಣ್ವಿಕ ಹೈಡ್ರೋಜನ್ ಆಗುತ್ತದೆ ಮತ್ತು ಅಂತಿಮವಾಗಿ ನಕ್ಷತ್ರಗಳ ರಚನೆಗೆ ಕಾರಣವಾಗುತ್ತದೆ.