Published on: December 17, 2022

ನಗರಗಳ ಅಭಿವೃದ್ಧಿಗೆ ಸಮಗ್ರ ಯೋಜನೆ

ನಗರಗಳ ಅಭಿವೃದ್ಧಿಗೆ ಸಮಗ್ರ ಯೋಜನೆ

ಸುದ್ದಿಯಲ್ಲಿ ಏಕಿದೆ? ರಾಜ್ಯದ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿಅಭಿವೃದ್ಧಿಹಾಗೂ ಹೂಡಿಕೆಗೆ ಪೂರಕವಾಗುವ ಪಟ್ಟಣಗಳ ಯದ್ವಾತದ್ವಾ ಬೆಳವಣಿಗೆಗೆ ಕಡಿವಾಣ ಹಾಕಲು ನಗರಗಳ ಅಭಿವೃದ್ಧಿಗೆ ಸಮಗ್ರ ಯೋಜನೆ ಯನ್ನು ರೂಪಿಸಲಾಗುತ್ತಿದೆ

ಉದ್ದೇಶ

  • ರಾಜ್ಯದ ನಗರ ಮತ್ತುಪಟ್ಟಣಗಳನ್ನು ಯೋಜನಾಬದ್ಧವಾಗಿ ಅಭಿವೃದ್ಧಿಪಡಿಸುವ ಹಾಗೂ ನಾಗರಿಕರಿಗೆ ಗುಣಮಟ್ಟದ ಸೇವೆ ನೀಡುವ ಉದ್ದೇಶವನ್ನು ಹೊಂದಲಾಗಿದೆ.

ಮುಖ್ಯಾಂಶಗಳು

  • ಪ್ರತಿ 20 ವರ್ಷಕ್ಕೊಮ್ಮೆ ಪ್ರತಿ ನಗರದ ಸಿಡಿಪಿ ಸಿದ್ಧವಾಗಬೇಕು.
  • ಇದೀಗ ನಗರ ಯೋಜನಾ ಪ್ರಾಧಿಕಾರಗಳ ಮೂಲಕ ಸಿದ್ಧಮಾಡುತ್ತಿದ್ದು 2040ಕ್ಕೆ ಯಾವ ನಗರ ಎಷ್ಟರ ಮಟ್ಟಿಗೆ ಅಭಿವೃದ್ಧಿಯಾಗಬೇಕು ಎಂಬ ಸ್ಪಷ್ಟತೆಯನ್ನಿಟ್ಟುಕೊಳ್ಳಲಾಗಿದೆ.
  • ಮಹಾನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗ ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿ ಸಿಡಿಪಿ ರಚನೆ ಮಾಡಲಾಗುತ್ತದೆ.
  • ರಾಜ್ಯದಲ್ಲಿಒಟ್ಟು 312 ನಗರ ಮತ್ತುಪಟ್ಟಣಗಳಿವೆ. ಅವುಗಳಲ್ಲಿ 190 ರಾಜ್ಯ ಯೋಜನಾ ಕಾಯ್ದೆಯ ವ್ಯಾಪ್ತಿಯಲ್ಲಿದ್ದರೆ, ಉಳಿದ 122 ಯೋಜನಾ ಕಾಯ್ದೆಯ ವ್ಯಾಪ್ತಿಗೆ ಸೇರುವುದು ಬಾಕಿ ಇದೆ.
  • ಕಾಯ್ದೆವ್ಯಾಪ್ತಿಗೆ ಸೇರಿರುವ ಪಟ್ಟಣಗಳಲ್ಲಿಮೊದಲ ಹಂತದಲ್ಲಿಕರ್ನಾಟಕ ಟೌನ್ ಆಂಡ್ ಕಂಟ್ರಿ ಪ್ಲಾ್ಯನಿಂಗ್ ಕಾಯ್ದೆಯಡಿಯಲ್ಲಿಸಿಡಿಪಿ ಸಿದ್ಧವಾಗುತ್ತಿದೆ. ಉಳಿದವು ಎರಡನೇ ಹಂತದಲ್ಲಿ ಮಾಡಲಾಗುತ್ತದೆ.
  • ಯೋಜನಾ ಪ್ರಾಧಿಕಾರಗಳು ಇರುವ ಕಡೆ ಅವುಗಳ ಮೂಲಕ, ಅವು ಇಲ್ಲದ ಕಡೆ ಸ್ಥಳೀಯ ಸಂಸ್ಥೆಗಳ ಮೂಲಕ ಸಿಡಿಪಿ ಮಾಡಲಾಗುತ್ತಿದೆ.

ಸಿಡಿಪಿಯ ಪ್ರಯೋಜನಗಳು

  • ಅಭಿವೃದ್ಧಿಗೆ ಚೌಕಟ್ಟು: ನಗರ ಮತ್ತುಪಟ್ಟಣಗಳಲ್ಲಿಸರ್ಕಾರ ವಿವಿಧ ತೆರಿಗೆಗಳನ್ನು ವಸೂಲಿ ಮಾಡುತ್ತದೆ. ಅದರ ಸದ್ಬಳಕೆಯ ಮೂಲಕ ಶಹರಗಳ ಅಭಿವೃದ್ಧಿಯಾಗಬೇಕು. ಅದಕ್ಕೊಂದು ಚೌಕಟ್ಟು ಇಲ್ಲದಿದ್ದರೆ ದುರುಪಯೋಗಗಳಾಗುತ್ತದೆ.
  • ಹಣ ಉಳಿತಾಯ: ಸಿಡಿಪಿ ಇಲ್ಲದಿದ್ದರೆ ಅನಧಿಕೃತ ಬಡಾವಣೆಗಳ ನಿರ್ಮಾಣ ಸೇರಿ ಕೆಲವೊಂದು ಅಕ್ರಮಗಳಿಗೆ ದಾರಿಯಾಗುತ್ತದೆ. ಅನಧಿಕೃತ ಬಡಾವಣೆಗಳು ರಚನೆಯಾಗಿ ಅವುಗಳಿಗೆ ಮೂಲಸೌಕರ್ಯ ಕಲ್ಪಿಸಬೇಕಾಗುತ್ತದೆ. ಅವು ತೆರಿಗೆ ವ್ಯಾಪ್ತಿಗೆ ಬರುವುದು ತಡವಾಗುತ್ತದೆ. ಸಿಡಿಪಿ ಇದ್ದರೆ ಅದರ ಪ್ರಕಾರವೇ ಅಭಿವೃದ್ಧಿಮಾಡಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿಬೊಕ್ಕಸಕ್ಕೆ ಉಳಿತಾಯವಾಗುತ್ತದೆ.
  • ವಲಯಗಳ ಗುರುತು: ನಗರೀಕರಣದಿಂದಾಗಿ ನಗರ ಮತ್ತುಪಟ್ಟಣಗಳು ನಿರಂತರವಾಗಿ ಬೆಳೆ ಯುತ್ತಿರುತ್ತವೆ. ಬೆಳವಣಿಗೆಯ ಮೇಲೆ ನಿಯಂತ್ರಣ ಹಾಕಿ ಹಸಿರು ವಲಯ, ಕೆಂಪು ವಲಯ, ಆರೆಂಜ್ ವಲಯಗಳನ್ನು ವಿಸ್ತರಿಸುವ, ಭೂಮಿಯ ಅಕ್ರಮ ಬಳಕೆ ತಪ್ಪಿಸುವುದು, ಕೈಗಾರಿಕೆಗಳಿಂದ ಮಾಲಿನ್ಯ ಸೇರಿ ಯಾವುದೇ ರೀತಿಯ ತೊಂದರೆಗಳಾಗದಂತೆ ಎಚ್ಚರವಹಿಸುವುದು, ಹಸಿರು ಮತ್ತು ಕೆಂಪು ವಲಯಗಳಡಿನ್ನು ಕಾಯ್ದುಕೊಂಡು ಸಮಗ್ರ ಅಭಿವೃದ್ದಿಸಾಧಿಸುವುದನ್ನು ಈ ಮಾಸ್ಟರ್ ಪ್ಲಾ್ಯನ್ ಮೂಲಕ ಮಾಡಬಹುದಾಗಿದೆ. ಹಸಿರು ವಲಯದಲ್ಲಿಕೃಷಿ ಭೂಮಿ ಇರುತ್ತದೆ. ಪರಿಸರ ಮಾಲಿನ್ಯವಾಗದಂತೆ ಹಸಿರು ವಲಯ ಉಳಿಸಿಕೊಳ್ಳಲೇಬೇಕು. ಕೆಂಪು ವಲಯದಲ್ಲಿಯಾವುದೇ ಚಟುವಟಿಕೆಗಳನ್ನು ನಡೆಸುವುದಕ್ಕೆ ನಿರ್ಬಂಧವಿರುತ್ತದೆ. ನಗರ ಬೆಳೆದಂತೆ ಈ ವಲಯಗಳನ್ನು ವಿಸ್ತರಣೆ ಮಾಡುವುದು ಅನಿವಾರ್ಯವಾಗುತ್ತದೆ.
  • ಭೂಮಿ ಬಳಕೆಗೆ ನಿಯಂತ್ರಣ: ಸಿಡಿಪಿ ಇದ್ದಲ್ಲಿಭೂಮಿಯ ಬೇಕಾಬಿಟ್ಟಿ ಬಳಕೆಗೆ ನಿಯಂತ್ರಣ ಹಾಕಬಹುದಾಗಿದೆ. ಆದರೆ ಈ ಬಾರಿ ಸಿಡಿಪಿ ವಿಶೇಷವೆಂದರೆ ಭೂಮಿ ಪರಿವರ್ತನೆಗೆ ಅವಕಾಶ ನೀಡಲಾಗಿದೆ. ಅದರಿಂದ ಭೂಮಿಯ ಬಳಕೆಗೆ ಸ್ಪಷ್ಟತೆ ಸಿಗುತ್ತದೆ.

ಸಿಡಿಪಿಯ ಉದ್ದೇಶಗಳು

  • ನಾಗರಿಕರಿಗೆ ಗುಣಮಟ್ಟದ ಸೇವೆ ಒದಗಿಸುವುದು
  • ವಸೂಲಾಗುವ ತೆರಿಗೆ ಹಣ ಬಳಸಿ ಸಮಗ್ರ ಯೋಜಿತ ಅಭಿವೃದ್ಧಿ
  • ಭೂ ಬಳಕೆಯ ಮೇಲೆ ನಿಯಂತ್ರಣ ಪರಿಸರ ಮಾಲಿನ್ಯಗೊ ಳ್ಳದಂತೆ ಎಚ್ಚರ
  • ಹಸಿರು ವಲಯ ಕಾಪಾಡುವುದು
  • ಕೆಂಪು ವಲಯದಲ್ಲಿಕೈಗಾರಿಕೆಗಳು ಸ್ಥಾಪನೆಯಾಗದಂತೆ ಎಚ್ಚರ
  • ವಲಯಗಳ ಉಲ್ಲಂಘನೆಗೆ ಕಡಿವಾಣ
  • ನಗರಗಳಲ್ಲಿರುವ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ
  • ಪ್ರತಿ ನಗರಕ್ಕೂ 247 ನೀರು ಸರಬರಾಜಿಗೆ ಆದ್ಯತೆ
  • ನಗರ ಮಟ್ಟದ ಹೂಡಿಕೆಗೆ ಪ್ರೋತ್ಸಾಹ
  • ಮೂಲಸೌಕರ್ಯಗಳ ಸದ್ಬಳಕೆ
  • ಹೊಸ ನಗರಗಳ ಅಭಿವೃದ್ಧಿ
  • ಬಡವರ ವಸತಿ ಯೋಜನೆಗೆ ಭೂಮಿ
  • ಭೂಮಿ ಪರಿವರ್ತನೆಗೆ ಅವಕಾಶ