Published on: November 17, 2023

ನಮ್ಮ ಮೆಟ್ರೋ ಯೋಜನೆ

ನಮ್ಮ ಮೆಟ್ರೋ ಯೋಜನೆ

ಸುದ್ದಿಯಲ್ಲಿ ಏಕಿದೆ? ನಮ್ಮ ಮೆಟ್ರೋ ಯೋಜನೆಯನ್ನು ಮತ್ತಷ್ಟು ವಿಸ್ತರಿಸುವ ಸಲುವಾಗಿ ಮೆಟ್ರೊ ಕೋಚ್‌ಗಳ ಪೂರೈಕೆ ಜವಾಬ್ದಾರಿಯನ್ನು ಚೀನಾ ಮೂಲದ ಚೀನಾ ರೈಲ್ವೆ ರೋಲಿಂಗ್‌ ಸ್ಟಾಕ್‌ ಕಾರ್ಪೊರೇಷನ್‌ (ಸಿಆರ್‌ಆರ್‌ಸಿ) ಗೆ ನೀಡಲಾಗಿದೆ.

ಮುಖ್ಯಾಂಶಗಳು

  • ಇದರ ಭಾಗವಾಗಿ ಎರಡು ರೈಲುಗಳನ್ನು (12 ಬೋಗಿ) ಸಿದ್ಧಗೊಳಿಸಿದ್ದು, ಚೆನ್ನೈ ಬಂದರಿಗೆ ಪ್ರಯಾಣ ಬೆಳೆಸುವ ನಿರೀಕ್ಷೆಯಿದೆ.
  • ಸಿಆರ್‌ಆರ್‌ಸಿ, ಕೋಲ್ಕತ್ತಾದ ಬಳಿ ತನ್ನ ಉತ್ಪಾದನಾ ಘಟಕವನ್ನು ಹೊಂದಿರುವ ಟಿಟಾಗರ್‌ ವ್ಯಾಗನ್ಸ್‌ ಮೂಲಕ ಈ ಮಾರ್ಗಕ್ಕಾಗಿ 216 ಕೋಚ್‌ಗಳನ್ನು (36 ರೈಲು ಸೆಟ್‌ಗಳು) ಪೂರೈಸಲು ಒಪ್ಪಂದಕ್ಕೆ ಸಹಿ ಹಾಕಿದೆ. ಚೀನಾದಿಂದ ಎರಡು ರೈಲು ಬಂದರೆ, ಇನ್ನು 34 ರೈಲುಗಳನ್ನು ಟಿಟಾಗರ್‌ ಕಂಪನಿ ಪೂರೈಕೆ ಮಾಡಲಿದೆ.
  • ಕಮ್ಯುನಿಕೇಷನ್‌ ಬೇಸ್ಡ್‌ ಟ್ರೇನ್‌ ಕಂಟ್ರೊಲ್‌ ಸಿಗ್ನಲಿಂಗ್‌ ಸಿಸ್ಟಂ ತಂತ್ರಜ್ಞಾನವನ್ನು ಎರಡನೇ ಹಂತದ ಯೋಜನೆಯಡಿ ಅನುಷ್ಠಾನಗೊಳಿಸಲಾಗುತ್ತದೆ. ರೈಲು ಸಂಚಾರವನ್ನು ನಿಯಂತ್ರಣ ಕೊಠಡಿಯಿಂದಲೇ ನಿರ್ವಹಣೆ ಮಾಡಲಾಗುತ್ತದೆ.

ಚಾಲಕ ರಹಿತ ರೈಲು ಸೇವೆ

ಆರ್‌.ವಿ.ರಸ್ತೆ- ಬೊಮ್ಮಸಂದ್ರ ನಡುವಿನ ರೀಚ್‌ -5 ಮಾರ್ಗದಲ್ಲಿ ತಲಾ ಆರು ಬೋಗಿಗಳ 12 ರೈಲುಗಳು ಸಂಚರಿಸಲಿವೆ. ಈ ಮಾರ್ಗದಲ್ಲಿ ಚಾಲಕ ರಹಿತ ಮೆಟ್ರೊ ಓಡಿಸಲು ಬಿಎಂಆರ್‌ಸಿಎಲ್‌ ಸಿದ್ಧತೆ ನಡೆಸಿದೆ.

ಹಿನ್ನೆಲೆ

2019ರಲ್ಲಿ ಸಿಆರ್‌ಸಿಸಿ 216 ಕೋಚ್‌ಗಳಿಗೆ  ಬಿಡ್‌ ಮಾಡಿತ್ತು. ಭಾರತದಲ್ಲಿ ಉತ್ಪಾದನಾ ಘಟಕ ಸ್ಥಾಪಿಸಲು ಕಂಪನಿಯು ವಿಫಲವಾದ ಹಿನ್ನೆಲೆಯಲ್ಲಿ ರೈಲು ಬೋಗಿಗಳ ವಿತರಣೆ ಸ್ಥಗಿತಗೊಳಿಸಿತು. ಬಳಿಕ ಕಂಪನಿಯು ಕೋಲ್ಕತ್ತಾದ ಟಿಟಾಗರ್‌ ವ್ಯಾಗನ್ಸ್‌ ಲಿಮಿಟೆಡ್‌ (ಟಿಡಬ್ಲ್ಯುಎಲ್‌) ಜತೆ ಒಪ್ಪಂದ ಮಾಡಿಕೊಂಡು ಬೋಗಿಗಳನ್ನು ನಿರ್ಮಿಸುತ್ತಿದೆ.