Published on: December 17, 2022

ನಿರ್ಬಂಧಗಳಿಂದ ಮಾನವೀಯ ನೆರವುಗಳಿಗೆ ವಿನಾಯಿತಿ

ನಿರ್ಬಂಧಗಳಿಂದ ಮಾನವೀಯ ನೆರವುಗಳಿಗೆ ವಿನಾಯಿತಿ

ಸುದ್ದಿಯಲ್ಲಿ ಏಕಿದೆ? ನಿರ್ಬಂಧ ಎದುರಿಸುತ್ತಿರುವ ರಾಷ್ಟ್ರಗಳಿಗೆ ಮಾನವೀಯ ನೆರವುಗಳಿಗೆ ವಿನಾಯಿತಿ ನೀಡುವ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯದಿಂದ ಭಾರತ ಮತಚಲಾವಣೆ ಮಾಡದೇ ತಟಸ್ಥವಾಗಿ ಉಳಿದಿದೆ.

ಮುಖ್ಯಾಂಶಗಳು

  • 15 ರಾಷ್ಟ್ರಗಳ ಮಂಡಳಿಯಲ್ಲಿ ಭಾರತ ಅಧ್ಯಕ್ಷತೆ ವಹಿಸಿದೆ.
  • ನಿರ್ಣಯವನ್ನು ಅಮೇರಿಕ ಹಾಗೂ ಐರ್ಲೇಂಡ್ ರಾಷ್ಟ್ರಗಳು ಮಂಡಿಸಿದ್ದವು.
  • ಈ ನಿರ್ಣಯವನ್ನು ಅಂಗೀಕರಿಸಿದ ಬಳಿಕ ಹಲವು ಜೀವಗಳು ಉಳಿಯಲಿದೆ ಎಂದು ನಿರ್ಣಯ ಮಂಡಿಸಿದ ಅಮೇರಿಕ, ಐರ್ಲೆಂಡ್ ಹೇಳಿವೆ.
  • 14 ಸದಸ್ಯ ರಾಷ್ಟ್ರಗಳು ನಿರ್ಣಯದ ಪರವಾಗಿ ಮತ ಚಲಾಯಿಸಿದರೆ, ಭಾರತ ಒಂದೇ ತಟಸ್ಥವಾಗಿ ಉಳಿದ ರಾಷ್ಟ್ರವಾಗಿತ್ತು

ಭಾರತ ತಟಸ್ಥವಾಗಿರಲು ಕಾರಣ

  • ತನ್ನ ನೆರೆ ರಾಷ್ಟ್ರದಲ್ಲಿರುವ ಭಯೋತ್ಪಾದಕ ಗುಂಪು ಸೇರಿದಂತೆ ನಿರ್ಬಂಧ ಎದುರಿಸುತ್ತಿರುವ ಹಲವು ಭಯೋತ್ಪಾದಕ ಸಂಘಟನೆಗಳು ಇಂತಹ ವಿನಾಯಿತಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ ಹಾಗೂ ಈ ಮೂಲಕ ದೇಣಿಗೆ ಗಳಿಸಿ, ತನಗೆ ಬೇಕಾದವರನ್ನು ನೇಮಕ ಮಾಡಿಕೊಳ್ಳುತ್ತಿದೆ ಎಂದು ಭಾರತ ಅಭಿಪ್ರಾಯ ವ್ಯಕ್ತಪಡಿಸಿದೆ.