Published on: January 29, 2022
‘ನೇಕಿ ಕಿ ದೀವಾರ್’
‘ನೇಕಿ ಕಿ ದೀವಾರ್’
ಸುದ್ಧಿಯಲ್ಲಿ ಏಕಿದೆ ? ಧನ್ಬಾದ್ ನಗರದ ಯುವಕರು ‘ನೇಕಿ ಕಿ ದೀವಾರ್’ ಎನ್ನುವ ಪರಿಕಲ್ಪನೆಯಡಿ ಗೋಡೆ ಮೇಲೆ ಸ್ವೆಟರ್ ಗಳನ್ನು ಸಂಗ್ರಹಿಸುವ ಕಾರ್ಯಕ್ಕೆ ಕೈ ಹಾಕಿದ್ದಾರೆ.
ಏನಿದು ನೇಕಿ ಕಿ ದೀವಾರ್ ?
- ನೇಕಿ ಕಿ ದೀವಾರ್ ಎಂದರೆ ‘ಒಳ್ಳೆಯತನದ ಗೋಡೆ’ ಎಂದರ್ಥ. ಈ ಗೋಡೆಯ ಮೇಲೆ ಸಾರ್ವಜನಿಕರು ತಮ್ಮ ಬಳಿ ಇರುವ ಹೆಚ್ಚುವರಿ ಸ್ವೆಟರ್ ಗಳು, ಮಫ್ಲರ್ ಗಳು, ಬಟ್ಟೆಗಳನ್ನು ನೇತು ಹಾಕಬಹುದು. ಅದರ ಅಗತ್ಯ ಇರುವ ಯಾರು ಬೇಕಾದರೂ ಗೋಡೆ ಮೇಲಿಂದ ಬಟ್ಟೆಗಳನ್ನು ತೆಗೆದು ಬಳಸಬಹುದು.
- ಈ ಪರಿಕಲ್ಪನೆಯ ಒಂದೇ ಷರತ್ತು ಎಂದರೆ ಸಾರ್ವಜನಿಕರು ಈ ಗೋಡೆ ಮೇಲೆ ಬಳಸಲು ಯೋಗ್ಯವಾದ ಸ್ವೆಟರ್ ಗಳು, ಬಟ್ಟೆಗಳನ್ನು ನೇತು ಹಾಕಬೇಕು ಎನ್ನುವುದು.