Published on: October 6, 2021
ನೊಬೆಲ್ ಪ್ರಶಸ್ತಿ
ನೊಬೆಲ್ ಪ್ರಶಸ್ತಿ
ಸುದ್ಧಿಯಲ್ಲಿ ಏಕಿದೆ? 2021ನೇ ಸಾಲಿನ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಗೆ ವಿಜ್ಞಾನಿಗಳಾದ ಸೈಕುರೊ ಮನಾಬೆ, ಕ್ಲಾಸ್ ಹ್ಯಾಸೆಲ್ಮನ್, ಪ್ಯಾರಿಸಿಯವರು ಭಾಜನರಾಗಿದ್ದಾರೆ.
- ಸೈಕುರೊ ಮನಾಬೆ ಮತ್ತು ಕ್ಲಾಸ್ ಹ್ಯಾಸೆಲ್ಮನ್ ಅವರಿಗೆ ಭೂಮಿಯ ಹವಾಮಾನದ ಭೌತಿಕ ಮಾದರಿಗಾಗಿ, ವ್ಯತ್ಯಾಸವನ್ನು ಪರಿಮಾಣಿಸಲು ಮತ್ತು ಜಾಗತಿಕ ತಾಪಮಾನ ಅಂದಾಜು ಸಂಶೋಧನೆಗೆ ಹಾಗೂ ಜಾರ್ಜಿಯೊ ಪ್ಯಾರಿಸಿ ಅವರಿಗೆ ಪರಮಾಣುಗಳಿಂದ ಗ್ರಹಗಳ ಮಾಪಕಗಳವರೆಗೆ ಭೌತಿಕ ವ್ಯವಸ್ಥೆಯಲ್ಲಿನ ಅಸ್ವಸ್ಥತೆ ಮತ್ತು ಏರಿಳಿತಗಳ ಪರಸ್ಪರ ಪತ್ತೆಗಾಗಿ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಪ್ರಶಸ್ತಿ ಘೋಷಿಸಿದೆ.
- ಈ ಪ್ರತಿಷ್ಠಿತ ಪ್ರಶಸ್ತಿಯ ಬಹುಮಾನದ ಮೊತ್ತ ₹56 ಕೋಟಿ (1.15 ಮಿಲಿಯನ್ ಡಾಲರ್).
ವೈದ್ಯಕೀಯ ನೊಬೆಲ್
- ಅಮೆರಿಕದ ಸಂಶೋಧಕರಾದ ಡೇವಿಡ್ ಜೂಲಿಯಸ್ ಮತ್ತು ಆರ್ಡೆಮ್ ಪಟಪೂಟಿಯನ್ ಅವರಿಗೆ ಜಂಟಿಯಾಗಿ 2021ರ ವೈದ್ಯಕೀಯ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ.
- ಚರ್ಮದಲ್ಲಿನ ಸ್ಪರ್ಶ ಮತ್ತು ತಾಪಮಾನ ಗ್ರಾಹಕ ವ್ಯವಸ್ಥೆಯ ಕುರಿತ ಸಂಶೋಧನೆಗಳಿಗಾಗಿ ಇಬ್ಬರಿಗೂ ಬಹುಮಾನವನ್ನು ನೀಡಲಾಗಿದೆ.
- ನರ ಪ್ರಚೋದನೆಗಳ ಮೂಲಕ ಮಾನವರು ತಾಪಮಾನ ಮತ್ತು ಒತ್ತಡವನ್ನು ಹೇಗೆ ಗ್ರಹಿಸುತ್ತಾರೆ ಎಂಬ ಯಾಂತ್ರಿಕತೆಯನ್ನು ಈ ಜೋಡಿ ನಿರೂಪಿಸಿದೆ.
- ದೀರ್ಘಕಾಲೀನ ನೋವುಗಳನ್ನೂ ಒಳಗೊಂಡಂತೆ ಹಲವು ರೋಗಗಳಿಗೆ ಚಿಕಿತ್ಸೆ ನೀಡಲು ಈ ಜ್ಞಾನವನ್ನು ಬಳಸಲಾಗುತ್ತಿದೆ.
- ಪ್ರತಿಷ್ಠಿತ ಪ್ರಶಸ್ತಿಯು ಚಿನ್ನದ ಪದಕ ಮತ್ತು 10 ಮಿಲಿಯನ್ ಸ್ವೀಡಿಷ್ ಕ್ರೋನರ್ (₹50 ಕೋಟಿ) ಒಳಗೊಂಡಿರಲಿದೆ.
ನೊಬೆಲ್ ಪಾರಿತೋಷಕ
- ವಿಶ್ವದ ಬೌದ್ಧಿಕ ಸಾಧನೆಗಾಗಿ ನೀಡಲಾಗುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳೆಂದು ಪರಿಗಣಿಸಲ್ಪಟ್ಟ ನೊಬೆಲ್ ಪ್ರಶಸ್ತಿಗಳನ್ನು ಸ್ವೀಡಿಷ್ ಸಂಶೋಧಕ ಮತ್ತು ಕೈಗಾರಿಕೋದ್ಯಮಿ ಆಲ್ಫ್ರೆಡ್ ನೊಬೆಲ್ ನಿಧಿಯಿಂದ ವಾರ್ಷಿಕವಾಗಿ ನೀಡಲಾಗುತ್ತದೆ.
- ಭೌತಶಾಸ್ತ್ರ, ರಸಾಯನಶಾಸ್ತ್ರ, ವೈದ್ಯಕೀಯ, ಸಾಹಿತ್ಯ, ಅರ್ಥಶಾಸ್ತ್ರ, ಮತ್ತು ಮಾನವೀಯತೆಗಾಗಿ ವಿಶಿಷ್ಟ ಸಾಧನೆಗಾಗಿ ಪ್ರತಿವರ್ಷ ಇದನ್ನು ಘೋಷಿಸಲಾಗುತ್ತದೆ – ಇದನ್ನು ಸಾಮಾನ್ಯವಾಗಿ ನೊಬೆಲ್ ಶಾಂತಿ ಪ್ರಶಸ್ತಿ ಎಂದು ಕರೆಯಲಾಗುತ್ತದೆ.