Published on: December 5, 2022
ನೌಕಾಪಡೆ ದಿನಾಚರಣೆ
ನೌಕಾಪಡೆ ದಿನಾಚರಣೆ
ಸುದ್ದಿಯಲ್ಲಿ ಏಕಿದೆ?
ನೌಕಾಪಡೆ ದಿನ ಅಂಗವಾಗಿ ಡಿಸೆಂಬರ್4 ರಂದು ಭಾರತೀಯ ನೌಕಾಪಡೆಯು ತನ್ನ ಕಾರ್ಯಾಚರಣೆ ಪ್ರಾತ್ಯಕ್ಷಿಕೆ ಮೂಲಕ ಪ್ರಬಲ ಯುದ್ಧ ಸಾಮರ್ಥ್ಯ ಪ್ರದರ್ಶಿಸಿತು.
ಮುಖ್ಯಾಂಶಗಳು
- ವಿಶಾಖಪಟ್ಟಣದ ರಾಮಕೃಷ್ಣ ಬೀಚ್ ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಮತ್ತು ಸಶಸ್ತ್ರ ಪಡೆಗಳ ಮುಖಸ್ಥರೂ ಆದ ದ್ರೌಪದಿ ಮುರ್ಮು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
- ಮೊದಲ ಬಾರಿಗೆ ನೌಕಾಪಡೆ ದಿನವನ್ನು ನವದೆಹಲಿಯ ಹೊರಗೆ ಆಚರಿಸಲಾಯಿತು.
- ಜಲಾಂತರ್ಗಾಮಿ ನೌಕೆ ಐಎನ್ಎಸ್ ಸಿಂಧುಕೀರ್ತಿ ಮತ್ತು ಐಎನ್ಎಸ್ ತರಂಗಿಣಿ ನಾವಿಕರು ರಾಷ್ಟ್ರಪತಿ ಅವರನ್ನು ಸ್ವಾಗತಿಸಿದರು.
- ನೌಕಾಪಡೆ ಕಮಾಂಡೋಗಳು ಸೀ ಕಿಂಗ್ ಹೆಲಿಕಾಪ್ಟರ್‌ನಿಂದ ಸಾಹಸ ಪ್ರದರ್ಶಿಸಿದರು. ನಂತರ ಮಾರ್ಕೋಸ್ (ಮರೈನ್ ಕಮಾಂಡೋಗಳು) ಅವರ ಯುದ್ಧ ಕೌಶಲ ಪ್ರಾತ್ಯಕ್ಷಿಕೆ ನಡೆಸಿದರು. ರಕ್ಷಣಾ ಕಾರ್ಯಾಚರಣೆ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು.
- ಹಾಕ್ ವಿಮಾನ ಮತ್ತು ಮಿಗ್ 29 ಕೆ ವಿಮಾನವೂ ಪ್ರದರ್ಶನದಲ್ಲಿತ್ತು. ನೌಕಾಪಡೆ ಯುದ್ಧನೌಕೆಗಳಾದ ಕಾರ್ವೆಟ್ ಐಎನ್ಎಸ್ ಖಂಜರ್, ಐಎನ್ಎಸ್ ಕಡ್ಮತ್ ಮತ್ತು ಐಎನ್ಎಸ್ ಕಿರ್ಚ್, ಐಎನ್ಎಸ್ ದೆಹಲಿ, ಯುದ್ಧನೌಕೆ ಐಎನ್ಎಸ್ ಸಹ್ಯಾದ್ರಿ ಮತ್ತು ಐಎನ್ಎಸ್ ಕೊಚ್ಚಿಯನ್ನು ಪ್ರದರ್ಶಿಸಲಾಯಿತು.
- ಯುದ್ಧನೌಕೆಗಳಿಂದ ರಾಕೆಟ್ ಗಳನ್ನು ಹಾರಿಸುವುದು ಕಾರ್ಯಕ್ರಮದ ಮತ್ತೊಂದು ಆಕರ್ಷಣೆಯಾಗಿತ್ತು.
- 2022 ರ ಥೀಮ್ ಸ್ವರ್ಣಿಮ್ ವಿಜಯ್ ವರ್ಷ್ ಅಂದರೆ 50 ನೇ ವಿಜಯೋತ್ಸವ .
ಭಾರತೀಯ ನೌಕಾಪಡೆಯ ದಿನದ ಇತಿಹಾಸ:
- ಭಾರತೀಯ ನೌಕಾಪಡೆಯನ್ನು 1612 ರಲ್ಲಿ ಈಸ್ಟ್ ಇಂಡಿಯಾ ಕಂಪನಿ ಸ್ಥಾಪಿಸಿತು. 1971 ರಲ್ಲಿ ಭಾರತ-ಪಾಕ್ ಯುದ್ಧದ ಸಮಯದಲ್ಲಿ, ಪಾಕಿಸ್ತಾನವು ಡಿಸೆಂಬರ್ 3 ರಂದು ಭಾರತೀಯ ವಾಯು ನೆಲೆಗಳ ಮೇಲೆ ದಾಳಿ ನಡೆಸಿತು. ಅವರ ಆಕ್ರಮಣಕಾರಿ ದಾಳಿಗಳಿಗೆ ಪ್ರತಿಕ್ರಿಯೆಯಾಗಿ, ಭಾರತೀಯ ನೌಕಾಪಡೆಯು ಡಿಸೆಂಬರ್ 4 ಮತ್ತು 5 ರ ರಾತ್ರಿ ದಾಳಿಯನ್ನು ಯೋಜಿಸಿತು. ಆ ಸಮಯದಲ್ಲಿ ಬಾಂಬ್ ಸ್ಫೋಟಗಳನ್ನು ನಡೆಸಲು ಪಾಕಿಸ್ತಾನವು ವಿಮಾನವನ್ನು ಹೊಂದಿರಲ್ಲಿಲ್ಲ.
- ಆಪರೇಷನ್ ಟ್ರೈಡೆಂಟ್ ಸಮಯದಲ್ಲಿ ಭಾರತೀಯ ನೌಕಾಪಡೆಯು ಕರಾಚಿಯ ಪಾಕಿಸ್ತಾನ ನೌಕಾಪಡೆಯ ಪ್ರಧಾನ ಕಛೇರಿಯನ್ನು ಗುರಿಯಾಗಿಸಿಕೊಂಡಿತು. ಆಪರೇಷನ್ ಟ್ರೈಡೆಂಟ್ ಕಾರ್ಯಾಚರಣೆಯ ಸಂಪೂರ್ಣ ನೇತೃತ್ವವನ್ನು ಕಮಾಂಡರ್ ಕಾಸರಗೋಡು ಪಟ್ಟಣಶೆಟ್ಟಿ ಗೋಪಾಲ್ ರಾವ್ ವಹಿಸಿದ್ದರು.ಈ ವಿಜಯದ ಸಂಭ್ರಮವನ್ನು ಇಡೀ ದೇಶದಲ್ಲಿ ಭಾರತೀಯ ನೌಕಾಪಡೆಯ ದಿನವನ್ನಾಗಿ ಆಚರಿಸಲಾಗುತ್ತದೆ.
ಉದ್ದೇಶ
- ಈ ದಿನದಂದು ನೌಕಾಪಡೆಗೆ ಗೌರವವನ್ನು ಸೂಚಿಸಲಾಗುತ್ತದೆ. ಜೊತೆಗೆ ನೌಕಾ ಪಡೆಯ ಸೈನಿಕರು ತಮ್ಮ ಜೀವದ ಹಂಗನ್ನು ತೊರೆದು, ದೇಶಕ್ಕಾಗಿ ಅವರು ಪಡುವ ಕಷ್ಟಗಳ ಕುರಿತು ಪ್ರತಿಯೊಬ್ಬರಲ್ಲಿಯೂ ಜಾಗೃತಿ ಮೂಡಿಸುವುದು ಈ ದಿನದ ಪ್ರಮುಖ ಉದ್ದೇಶವಾಗಿದೆ.
ಭಾರತೀಯ ನೌಕಾಪಡೆಯ ದಿನದ ಮಹತ್ವ:
-
ಮೇ 1972 ರಲ್ಲಿ ನಡೆದ ಹಿರಿಯ ನೌಕಾ ಅಧಿಕಾರಿಗಳ ಸಮ್ಮೇಳನದಲ್ಲಿ, 1971 ರ ಇಂಡೋ-ಪಾಕ್ ಯುದ್ಧದ ಸಮಯದಲ್ಲಿ ಭಾರತೀಯ ನೌಕಾಪಡೆಯ ಪ್ರಯತ್ನಗಳು ಮತ್ತು ಸಾಧನೆಗಳನ್ನು ಗುರುತಿಸಲು ಡಿಸೆಂಬರ್ 4 ರಂದು ಭಾರತೀಯ ನೌಕಾಪಡೆಯ ದಿನವನ್ನುಆಚರಿಸಲು ನಿರ್ಧರಿಸಲಾಯಿತು. ಭಾರತದ ಮಹತ್ವ ಮತ್ತು ವಿಜಯದ ಬಗ್ಗೆ ಯುವ ಪೀಳಿಗೆಗೆ ಮತ್ತು ಭಾರತದ ನಾಗರಿಕರಿಗೆ ಅರಿವು ಮೂಡಿಸುವ ಮಹತ್ವವನ್ನು ಹೊಂದಿದೆ.