Published on: January 14, 2023
ನ್ಯೂಯಾರ್ಕ್ ಟೈಮ್ಸ್ ಪ್ರವಾಸಿ ತಾಣಗಳ ಪಟ್ಟಿ
ನ್ಯೂಯಾರ್ಕ್ ಟೈಮ್ಸ್ ಪ್ರವಾಸಿ ತಾಣಗಳ ಪಟ್ಟಿ
ಸುದ್ದಿಯಲ್ಲಿ ಏಕಿದೆ? ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿರುವ 2023ರಲ್ಲಿ ಭೇಟಿ ನೀಡಬೇಕಾದ 52 ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಭಾರತದಿಂದ ಕೇರಳ ಸ್ಥಾನ ಪಡೆದುಕೊಂಡಿದೆ. ವಾರ್ಷಿಕ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಕೇರಳವು 13ನೇ ಸ್ಥಾನದಲ್ಲಿದೆ ಮತ್ತು ಭಾರತದಿಂದ ಜಾಗ ಪಡೆದ ಏಕೈಕ ಪ್ರವಾಸಿ ತಾಣವಾಗಿದೆ.
ಮುಖ್ಯಾಂಶಗಳು
- ಕೇರಳವು ತನ್ನ ಕಡಲತೀರಗಳು, ಹಿನ್ನೀರಿನ ಸೊಬಗು, ಪಾಕಪದ್ಧತಿ ಮತ್ತು ಶ್ರೀಮಂತ ಸಾಂಸ್ಕೃತಿಕ ಸಂಪ್ರದಾಯಗಳಿಗೆ ಹೆಸರುವಾಸಿಯಾದ ದಕ್ಷಿಣ ಭಾರತದ ರಾಜ್ಯ ಎಂದು ವರದಿ ವಿವರಿಸಿದೆ.
- ಕುಮಾರಕೊಮ್ ಮತ್ತು ಮರವಂತುರುತ್ತು ಸೇರಿದಂತೆ ರಾಜ್ಯದ ಅತ್ಯುತ್ತಮ ಪ್ರವಾಸೋದ್ಯಮ ತಾಣಗಳ ಬಗ್ಗೆಯೂ ಪಟ್ಟಿಯಲ್ಲಿ ಪ್ರಸ್ತಾಪಿಸಲಾಗಿದೆ.
- ತಾಳೆ ಮರದ ಆಕರ್ಷಣೆ, ವಾರ್ಷಿಕ ಉತ್ಸವದ ಸಮಯದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡುವಿಕೆ ಮತ್ತು ಹಳ್ಳಿಯ ಜೀವನದ ಸುಸ್ಥಿರ ರುಚಿಯನ್ನು ಪಡೆಯಲು ಕೇರಳ ಅತ್ಯುತ್ತಮ ತಾಣ ಎಂದು ಪತ್ರಿಕೆ ಬಣ್ಣಿಸಿದೆ.
- ‘ದಕ್ಷಿಣ ಭಾರತದ ರಾಜ್ಯವಾದ ಕೇರಳದ ಕಡಲ ತೀರಗಳು, ಹಿನ್ನೀರಿನ ನಯನ ಮನೋಹರ ದೃಶ್ಯಗಳು, ಇಲ್ಲಿನ ಆಹಾರ ಪದ್ಧತಿ, ವೈಕಥಾಷ್ಟಮಿ ಹಬ್ಬಗಳ ಸಿರಿಯು ಅದ್ಭುತವಾಗಿದೆ’ ಎಂದು ನ್ಯೂಯಾರ್ಕ್ ಟೈಮ್ಸ್ ತಿಳಿಸಿದೆ.
ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಇತರೆ ಸ್ಥಳಗಳು
- ಪಟ್ಟಿಯಲ್ಲಿ ಲಂಡನ್ ಮೊದಲ ಸ್ಥಾನದಲ್ಲಿದೆ, ನಂತರ ಜಪಾನ್ನ ಮೊರಿಯೊಕಾ, ಅಮೆರಿಕದ ಸ್ಮಾರಕ ಕಣಿವೆ ನವಾಜೊ ಟ್ರೈಬಲ್ ಪಾರ್ಕ್, ಸ್ಕಾಟ್ಲ್ಯಾಂ ಡ್ನ ಕಿಲ್ಮಾರ್ಟಿನ್ ಗ್ಲೆನ್ ಮತ್ತು ನ್ಯೂಜಿಲೆಂಡ್ನ ಆಕ್ಲೆಂಡ್ಗಳು ಅಗ್ರಸ್ಥಾನದಲ್ಲಿವೆ. ಕ್ಲಿಫೋರ್ನಿಯಾದ ಪಾಮ್ ಸ್ಪ್ರಿಂಗ್ಸ್, ಆಸ್ಟ್ರೇ ಲಿಯಾದ ಕಾಂಗರೂ ದ್ವೀ ಪ, ಅಲ್ಬೇ ನಿಯಾದ ವ್ಜೋ ಸಾ ನದಿ, ಘಾನಾದ ಅಕ್ರಾ, ನಾರ್ವೆಯ ಟ್ರೊಮ್ಸೊ, ಬ್ರೆಜಿಲ್ನ ಲೆನೋಯಿಸ್ ಮರನ್ಹೆನ್ಸ್ ರಾಷ್ಟ್ರೀ ಯ ಉದ್ಯಾನವನ, ಭೂತಾನ್, ದಕ್ಷಿಣ ಕೆರೊಲಿನಾದ ಗ್ರೀ ನ್ವಿಲ್ಲೆ ಮತ್ತು ಟಕ್ಸನ್ (ಅರಿಜೋನಾ) ಸಹ ಪಟ್ಟಿಯಲ್ಲಿ ಜಾಗ ಪಡೆದಿವೆ.
- ಟೈಮ್ ಮ್ಯಾಗಝಿನ್ 2022ರಲ್ಲಿ ತಯಾರಿಸಿದ ಜಗತ್ತಿನ ಅಗ್ರ 50 ತಾಣಗಳ ಪೈಕಿಯೂ ಕೇರಳ ಸ್ಥಾನ ಪಡೆದಿತ್ತು.