Published on: December 5, 2022
ಪಂಚತಂತ್ರ ಮೊಬೈಲ್ ಆ್ಯಪ್
ಪಂಚತಂತ್ರ ಮೊಬೈಲ್ ಆ್ಯಪ್
ಸುದ್ದಿಯಲ್ಲಿ ಏಕಿದೆ?
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಆಸ್ತಿಗಳ ತೆರಿಗೆ ಪಾವತಿ ಇನ್ನು ಮುಂದೆ ಸುಲಭವಾಗಲಿದೆ. ಇದಕ್ಕಾಗಿ ಪಂಚತಂತ್ರ ಮೊಬೈಲ್ ಆ್ಯಪ್ ಸಿದ್ಧಗೊಳ್ಳುತ್ತಿದ್ದು, ಸಿಬ್ಬಂದಿ ಮನೆ- ಮನೆಗೆ ಭೇಟಿ ನೀಡಿ ತೆರಿಗೆ ಸಂಗ್ರಹಿಸಲಿದ್ದಾರೆ.
ಮುಖ್ಯಾಂಶಗಳು
- ಆಸ್ತಿಯ ಮೌಲ್ಯ ಮತ್ತು ಬಳಕೆಗೆ ತಕ್ಕಂತೆ ವಿಧಿಸಬಹುದಾದ ತೆರಿಗೆ ಎಷ್ಟು ಹೇಗೆ ಎಲ್ಲವನ್ನೂ ವೈಜ್ಞಾನಿಕವಾಗಿ ನಿಗದಿಪಡಿಸಿದ ತೆರಿಗೆ ದರ ಪಟ್ಟಿ ಈ ತಂತ್ರಾಂಶದಲ್ಲಿರಲಿದೆ.
- ಈಗ ಬದಲಾದ ವ್ಯವಸ್ಥೆ ಮತ್ತು ತಂತ್ರಜ್ಞಾನಕ್ಕೆ ತಕ್ಕಂತೆ ಇಲಾಖೆಯ ಅಗತ್ಯತೆಗಳಿಗೆ ಅನುಗುಣವಾಗಿ ಪಂಚತಂತ್ರದ ಎರಡನೇ ಆವತರಣಿಕೆ ಪಂಚತಂತ್ರ 2.0 ಅನ್ನು ಅಭಿವೃದ್ಧಿ ಪಡಿಸಲಾಗಿದೆ
ಉದ್ದೇಶ
- ಗ್ರಾಮ ಪಂಚಾಯಿತಿ ಆಸ್ತಿ ತೆರಿಗೆಯಲ್ಲಿ ಪಾರದರ್ಶಕತೆ ತರುವುದು ಮತ್ತು ಉತ್ತರದಾಯಿತ್ವ ಕಾಪಾಡುವ ಉದ್ದೇಶದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಈ ತಂತ್ರಾಂಶವನ್ನು ಅಭಿವೃದ್ಧಿಪಡಿಸುತ್ತಿದೆ. ಎಲ್ಲಾಬಗೆಯ ಆಸ್ತಿಗಳಿಗೂ ಇದರಲ್ಲಿ ನಿಖರವಾದ ತೆರಿಗೆ ದರದ ಮಾಹಿತಿಯಿರುತ್ತದೆ.
ಏನಿದು ಹೊಸ ತಂತ್ರಾಂಶ?
- ಒಂದು ಗ್ರಾಮದಲ್ಲಿಆ ಪಂಚಾಯಿತಿ ವ್ಯಾಪ್ತಿಗೆ ಬರುವ ಆಸ್ತಿಗಳೆಷ್ಟು? ಯಾವ ಯಾವ ಬಗೆಯ ಆಸ್ತಿಗಳಿವೆ? ಎಂತಹ ಆಸ್ತಿಗೆ ಎಷ್ಟು ತೆರಿಗೆ ವಿಧಿಸಬೇಕು? (ಕಟ್ಟಡ, ಈ ಕಟ್ಟಡದ ನೆಲಹಾಸು, ಮೇಲ್ಚಾವಣಿ ಎಂಥದ್ದು) ಖಾಲಿ ನಿವೇಶನವಿದ್ದರೆ ಎಂತಹ ಆಯಕಟ್ಟಿನ ಜಾಗದಲ್ಲಿದೆ? ಅದರ ಮೌಲ್ಯ ಮತ್ತು ಬಳಕೆಗೆ ತಕ್ಕಂತೆ ವಿಧಿಸಬಹುದಾದ ತೆರಿಗೆ ಎಷ್ಟು ಹೀಗೆ ಎಲ್ಲವನ್ನೂ ವೈಜ್ಞಾನಿಕವಾಗಿ ನಿಗದಿಪಡಿಸಿದ ತೆರಿಗೆ ದರ ಪಟ್ಟಿ ಈ ತಂತ್ರಾಂಶದಲ್ಲಿರಲಿದೆ.
- ಸಿಬ್ಬಂದಿಯಾಗಲಿ ಅಥವಾ ಸಾರ್ವಜನಿಕರಾಗಲಿ ಯಾರಿಗೂ ಗೊಂದಲವಿಲ್ಲದಂತೆ ತೆರಿಗೆ ಪಾವತಿಸಲು ಇದು ಅನುಕೂಲವಾಗಲಿದೆ.
ಪಿಒಎಸ್ ಯಂತ್ರಗಳು
- ಗ್ರಾಹಕರು ಆನ್ಲೈನ್ನಲೇ ತೆರಿಗೆ ಪಾವತಿಸಬಹದು. ಡೆಬಿಟ್ ಕಾರ್ಡ್ ಕೂಡ ಬಳಕೆ ಮಾಡಲು ಅವಕಾಶವಿದೆ. ಇದಕ್ಕಾಗಿ ಪ್ರತಿ ಗ್ರಾಮ ಪಂಚಾಯಿತಿಗೂ ತಲಾ ಒಂದೊಂದು ಪಿಒಎಸ್ ಯಂತ್ರಗಳನ್ನು ನೀಡಲು ಯೋಜನೆ ರೂಪಿಸಲಾಗಿದೆ.
-
ಈ ಯಂತ್ರಗಳಲ್ಲಿ ತೆರಿಗೆ ಪಾವತಿಸಿದ ಗ್ರಾಹಕರಿಗೆ ಆನ್ಲೈನ್ನಲ್ಲಿ ರಸೀದಿ ಕೂಡ ಸಿಗುತ್ತದೆ. ಸಂದೇಶ ಕೂಡ ರವಾನೆಯಾಗುತ್ತದೆ. ಈ ಕುರಿತು ರಾಜ್ಯದಲ್ಲಿ 5,659 ಗ್ರಾಮ ಪಂಚಾಯಿತಿಗಳಲ್ಲಿಅಳವಡಿಸಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಪಟ್ಟಣ ಪಂಚಾಯತ್ ಅಡಿಯಲ್ಲಿ ನಾವು ಮನೆ ಕಟ್ಟುವಾಗ ಪರ್ಮಿಷನ್ ತಾಗೊಂಡಿದ್ದಿವೆ. ಈಗ ಮನೆ ಕಂಪ್ಲೀಟ್ ಆಗಿದೆ ಆದರೆ ಮನೆ ಮುಗಿದಾಗಿದೆ ಎಂದು ನೋಂದಾಯಿಸಲು ಎಸ್ಟ್ ಹಣ ಖರ್ಚ್ ಬರುತ್ತೆ