Published on: August 20, 2022

ಪಂಜಾಬ್ನಲ್ಲಿ 75 ಆಮ್ ಆದ್ಮಿ ಕ್ಲಿನಿಕ್:

ಪಂಜಾಬ್ನಲ್ಲಿ 75 ಆಮ್ ಆದ್ಮಿ ಕ್ಲಿನಿಕ್:

ಸುದ್ದಿಯಲ್ಲಿ ಏಕಿದೆ?

ಸ್ವಾತಂತ್ರ್ಯದ 75 ನೇ ವರ್ಷಾಚರಣೆ ಅಂಗವಾಗಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಆ ರಾಜ್ಯದ ಜನತೆಗಾಗಿ 75 ಆಮ್ ಆದ್ಮಿ ಕ್ಲಿನಿಕ್‌ಗಳನ್ನು (ಜನತಾ ಆಸ್ಪತ್ರೆಗಳು) ತೆರೆಯಲು ನಿರ್ಧರಿಸಿದ್ದಾರೆ.

ಮುಖ್ಯಾಂಶಗಳು

  • ಉದ್ದೇಶಿತ 75 ಆಮ್ ಆದ್ಮಿ ಕ್ಲಿನಿಕ್‌ಗಳಲ್ಲಿ ನೂರಕ್ಕೂ ಹೆಚ್ಚು ಬಗೆಯ ವೈದ್ಯಕೀಯ ತಪಾಸಣೆಗಳನ್ನು ಉಚಿತವಾಗಿ ನೆರವೇರಿಸಲಾಗುವುದು.
  • ಎಂಬಿಬಿಎಸ್ ವೈದ್ಯರನ್ನು ಒಳಗೊಳ್ಳುವ ಈ ಆಸ್ಪತ್ರೆಗಳಲ್ಲಿ ಔಷಧಿಗಳನ್ನು ಉಚಿತವಾಗಿ ನೀಡಲಾಗುತ್ತದೆ. ಈ 75 ಆಸ್ಪತ್ರೆಗಳನ್ನು ಅತ್ಯಂತ ಮಾದರಿ ಎನ್ನುವಂತೆ ನಡೆಸಲಾಗುತ್ತದೆ. ಪರಿಣಾಮ ನೋಡಿಕೊಂಡು ರಾಜ್ಯದಲ್ಲಿ ಇದೇ ರೀತಿಯ ಮತ್ತಷ್ಟು ಆಸ್ಪತ್ರೆಗಳನ್ನು ತೆರೆಯ ಲಾಗುವುದು