Published on: July 5, 2022

‘ಪರಿಸರ ರಾಯಭಾರಿ’ ಗೌರವ

‘ಪರಿಸರ ರಾಯಭಾರಿ’ ಗೌರವ

ಸುದ್ದಿಯಲ್ಲಿ ಏಕಿದೆ?

ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರಿಗೆ ಪರಿಸರ ರಾಯಭಾರಿ ಗೌರವ ನೀಡಿ, ಜೊತೆಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಲಾಗುವುದು ಎಂದು‌ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಏಕೆ ಈ ಸ್ಥಾನ?

  • ‘ರಾಜ್ಯದ ಉದ್ದಕ್ಕೂ ಪರಿಸರ ರಕ್ಷಣೆಯ ಪ್ರಚಾರ ಮಾಡಲು ಈ ಸ್ಥಾನಮಾನ ನೀಡಲಾಗಿದೆ.

ನೀಡಲಾಗುವ ಸೌಲಭ್ಯಗಳು

  • ಹೊರ ರಾಜ್ಯಕ್ಕೆ ತೆರಳಿದರೆ ಸರ್ಕಾರದಿಂದಲೇ ಖರ್ಚು ಭರಿಸಲಾಗುವುದು.
  • ವಾರ್ತಾ ಇಲಾಖೆಯಿಂದ ಸಾಲುಮರದ ತಿಮ್ಮಕ್ಕ ಅವರ ವೆಬ್‌ಸೀರಿಸ್ ಮಾಡಲಾಗುವುದು.
  • ಅವರಿಗೆ ಬೇಲೂರು ತಾಲ್ಲೂಕಿನಲ್ಲಿ ಹತ್ತು ಎಕರೆ ಭೂಮಿ ಮಂಜೂರು ಮಾಡಲಾಗುವುದು.
  • ಬೆಂಗಳೂರಿನಲ್ಲಿ ಬಿಡಿಎ‌ ನಿವೇಶನ ನೀಡಲಾಗಿದೆ. ಆ ನಿವೇಶನದಲ್ಲಿ ಮನೆ ನಿರ್ಮಿಸಿ ಕೊಡಲಾಗುವುದು.