Published on: August 3, 2023

ಪರ್ಕಾ ಚಿಕ್ ನೀರ್ಗಲ್ಲು

ಪರ್ಕಾ ಚಿಕ್ ನೀರ್ಗಲ್ಲು

ಸುದ್ದಿಯಲ್ಲಿ ಏಕಿದೆ?  ಲಡಾಕ್ನ ಹಿಮಾಲಯದಲ್ಲಿರುವ ಪರ್ಕಾ ಚಿಕ್ ನೀರ್ಗಲ್ಲು ಅತಿವೇಗವಾಗಿ ಕರಗುತ್ತಿದ್ದು, ಇದರಿಂದ ಹಿಮಗಡ್ಡೆಗಳಿಂದ ಕೂಡಿರುವ ಮೂರು ಹೊಸ ಸರೋವರಗಳು ರೂಪುಗೊಳ್ಳುವ ಸಾಧ್ಯತೆ ಇದೆ. ಭವಿಷ್ಯದಲ್ಲಿ ಇವು ಭಾರಿ ಹಿಮಪ್ರವಾಹಕ್ಕೂ ಕಾರಣವಾಗುವ ಸಂಭವ ಇದೆ ಎಂದು ಡೆಹ್ರಾಡೂನ್ನ ವಾಡಿಯಾ ಇನ್ಸ್ಟಿಟ್ಯೂಟ್ ಆಫ್ ಹಿಮಾಲಯನ್ ಜಿಯಾಲಜಿ ವಿಜ್ಞಾನಿಗಳು ಕೈಗೊಂಡ ಅಧ್ಯಯನವೊಂದು ತಿಳಿಸಿದೆ. ಮುಖ್ಯಾಂಶಗಳು

  • ಉಪಗ್ರಹ ರವಾನಿಸಿದ ದತ್ತಾಂಶಗಳ ವಿಶ್ಲೇಷಣೆ ಆಧರಿಸಿ ಈ ವಿದ್ಯಮಾನ ಕುರಿತು ಅಧ್ಯಯನ ನಡೆಸಲಾಗಿದೆ.
  • ನೀರ್ಗಲ್ಲು ಕರಗಿದ ನಂತರ ಸರೋವರ ಸೃಷ್ಟಿಯಾಗಬಹುದಾದ ಮೂರು ಪ್ರದೇಶಗಳನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಇವುಗಳ ವಿಸ್ತೀರ್ಣ 43 ರಿಂದ 270 ಹೆಕ್ಟೇ ರ್ನಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ.
  • ಈ ಸರೋವರಗಳ ಆಳ 34ರಿಂದ 84 ಮೀಟರ್ ಇರಲಿದೆ.

ಕಾರಣ:

  • 28 ವರ್ಷಗಳ ಹಿಂದಿನ ಅವಧಿಗೆ (1971ರಿಂದ 1999ರವರೆಗೆ) ಹೋಲಿಸಿದರೆ, 1999ರಿಂದ 2021ರ ನಡುವಿನ ಅವಧಿಯಲ್ಲಿ ಈ ನೀರ್ಗಲ್ಲಿನ ಕರಗುವಿಕೆ ಪ್ರಮಾಣ ಆರು ಪಟ್ಟು ಹೆಚ್ಚಾಗಿದೆ. ನೀರ್ಗಲ್ಲುಗಳು ವೇಗವಾಗಿ ಕರಗುವುದಕ್ಕೆ ಹವಾಮಾನ ಬದಲಾವಣೆ ಪ್ರಮುಖ ಕಾರಣ ಎಂದು ಇದೇ ಅಧ್ಯಯನ ಪ್ರತಿಪಾದಿಸಿದೆ.

ಪರ್ಕಾ ಚಿಕ್ ನೀರ್ಗಲ್ಲು

  • ಸುರು ನದಿ ಕಣಿವೆಯಲ್ಲಿರುವ ಅತಿದೊಡ್ಡ ನೀರ್ಗಲ್ಲು ಆಗಿದೆ. ಇದು ಪಶ್ಚಿಮ ಹಿಮಾಲಯದ ಭಾಗವಾದ ಝನ್ಸ್ಕಾರ್ ಪರ್ವತ ಶ್ರೇಣಿಯಲ್ಲಿದ್ದು, ಲಡಾಖ್‍ನ ಕಾರ್ಗಿಲ್ ಜಿಲ್ಲೆಯಲ್ಲಿನ ಒಂದು ಕಣಿವೆಯಾಗಿದೆ. ಸಿಂಧೂ ನದಿಯ ಪ್ರಬಲ ಉಪನದಿಯಾದ ಸುರೂ ನದಿಯು ಇದರ ಮೂಲಕ ಹರಿಯುತ್ತದೆ. ಕಣಿವೆಯ ಅತ್ಯಂತ ಮಹತ್ವದ ಪಟ್ಟಣವೆಂದರೆ ಸಂಕೂ.