Published on: February 13, 2023
ಪಾಲಿಟೆಕ್ನಿಕ್ ಗಳಲ್ಲಿ ಐಒಟಿ ಪ್ರಯೋಗಾಲಯ
ಪಾಲಿಟೆಕ್ನಿಕ್ ಗಳಲ್ಲಿ ಐಒಟಿ ಪ್ರಯೋಗಾಲಯ
ಸುದ್ದಿಯಲ್ಲಿ ಏಕಿದೆ? ಕರ್ನಾಟಕ ರಾಜ್ಯದ 35 ಸರಕಾರಿ ಪಾಲಿಟೆಕ್ನಿಕ್‌ಗಳಲ್ಲಿ ಆಧುನಿಕ ತಂತ್ರಜ್ಞಾನವಾದ ಐಒಟಿ (ಇಂಟರ್ ನೆಟ್ ಆಫ್ ಥಿಂಗ್ಸ್) ಪ್ರಯೋಗಾಲಯ ಸ್ಥಾಪಿಸುವ ಗುರಿಯನ್ನುಳ್ಳ ಮಹತ್ತ್ವದ ಒಡಂಬಡಿಕೆಗೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಸ್ಯಾಮ್ಸಂಗ್ ಸೆಮಿಕಂಡಕ್ಟರ್ ಇಂಡಿಯಾ ರೀಸರ್ಚ್ ಅಂಕಿತ ಹಾಕಿವೆ
ಮುಖ್ಯಾಂಶಗಳು
- ಈ ಒಡಂಬಡಿಕೆಯ ಅಡಿಯಲ್ಲಿ ರಾಜ್ಯದ ಎರಡು ಕಡೆಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ಪ್ರಯೋಗಾಲಯಗಳನ್ನೂ ಸ್ಥಾಪಿಸಲಾಗುವುದು .
ಉದ್ದೇಶ :
- ಅಂತಾರಾಷ್ಟ್ರೀಯ ಗುಣಮಟ್ಟದ ಈ ಪ್ರಯೋಗಾಲಯಗಳಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ಲಾಭವಾಗಲಿದೆ.
- ಸ್ಯಾಮ್ಸಂಗ್ ಕಂಪನಿಯು ದಕ್ಷಿಣ ಕೊರಿಯಾದಿಂದ ಹೊರಗೆ ಆರಂಭಿಸುತ್ತಿರುವ ಬಹುದೊಡ್ಡ ಉಪಕ್ರಮ ಇದಾಗಿದ್ದು, ಕೇಂದ್ರ ಸರಕಾರವು ಸ್ಯಾಮ್ಸಂಗ್ ಇನ್ನೋವೇಶನ್ ಕ್ಯಾಂಪಸ್ ಪರಿಕಲ್ಪನೆಯನ್ನು ಜಾರಿಗೊಳಿಸಿದೆ.
- ಇದರಲ್ಲಿ ಆನ್‌ಲೈನ್ ಕೋರ್ಸುಗಳು ಲಭ್ಯವಿದ್ದು, ಇವುಗಳನ್ನು ಐಒಟಿ ಪಠ್ಯಕ್ರಮಕ್ಕೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ. ಈ ಪ್ರಯೋಗಾಲಯಗಳಲ್ಲಿ ಒಟ್ಟು 1,080 ಸಾಧನ-ಸಲಕರಣೆಗಳು ಇರಲಿದ್ದು, ಸ್ಯಾಮ್ಸಂಗ್ ಇದಕ್ಕಾಗಿ 1.52 ಕೋಟಿ ರೂ. ವಿನಿಯೋಗಿಸುತ್ತಿದೆ.
ಉದ್ದೇಶ
- ಉದ್ಯಮಿಗಳು, ವಿಷಯ ಪರಿಣತರು ಮತ್ತು ಹಿರಿಯ ವಿದ್ಯಾರ್ಥಿಗಳೊಂದಿಗೆ ವಿಸ್ತೃತವಾಗಿ ಚರ್ಚಿಸಿ ಸ್ಥಾಪಿಸುತ್ತಿರುವ ಈ ಸೌಲಭ್ಯದಿಂದ ನಮ್ಮ ಯುವಜನರು ಉದ್ಯೋಗಕ್ಕೆ ಬೇಕಾದ ಕೌಶಲ್ಯಗಳನ್ನು ಕಲಿತುಕೊಂಡು, ಉದ್ಯೋಗಾರ್ಹರಾಗಲಿದ್ದಾರೆ.
- ವಿದ್ಯಾರ್ಥಿಗಳು ಇವುಗಳ ಮೂಲಕ ಸ್ಥಳೀಯ ಮತ್ತು ಜಾಗತಿಕ ಮಟ್ಟದ ಸಮಸ್ಯೆಗಳಿಗೆ ಸಮರ್ಥ ಪರಿಹಾರ ಕಂಡುಹಿಡಿಯಬಹುದು.
ಎಲ್ಲೆಲ್ಲಿ ಬಳಕೆ? ಇಲ್ಲಿರುವ ಸಾಧನಗಳನ್ನು ಡ್ರೋನ್, ಆಟೋಮೊಬೈಲ್, ಬಯೋ ಮೆಡಿಕಲ್, ಕೃಷಿ ತಂತ್ರಜ್ಞಾನ, ಬಯೋಟೆಕ್ ಮತ್ತು ಎಸ್‌ಟಿಇಎಂ ವಲಯದ ಪ್ರಯೋಗಗಳಲ್ಲಿ ಬಳಸಿಕೊಳ್ಳಬಹುದು.
ಐಒಟಿ (ಇಂಟರ್ ನೆಟ್ ಆಫ್ ಥಿಂಗ್ಸ್)ಎಂದರೇನು?
- ವಸ್ತುಗಳ ಅಂತರ್ಜಾಲವು ಪರಸ್ಪರ ಸಂಬಂಧ ಹೊಂದಿರುವ ಕಂಪ್ಯೂಟಿಂಗ್ ಸಾಧನಗಳು, ಯಾಂತ್ರಿಕ ಮತ್ತು ಡಿಜಿಟಲ್ ಯಂತ್ರಗಳನ್ನು ಅನನ್ಯ ಗುರುತಿಸುವಿಕೆಗಳೊಂದಿಗೆ ಒದಗಿಸಲಾಗಿದೆ ಮತ್ತು ಮಾನವನಿಂದ ಮನುಷ್ಯನಿಗೆ ಅಥವಾ ಮಾನವನಿಂದ ಕಂಪ್ಯೂಟರ್‌ಗೆ ಪರಸ್ಪರ ಕ್ರಿಯೆಯ ಅಗತ್ಯವಿಲ್ಲದೇ ನೆಟ್‌ವರ್ಕ್ ಮೂಲಕ ಡೇಟಾವನ್ನು ವರ್ಗಾಯಿಸುವ ಸಾಮರ್ಥ್ಯವನ್ನು ಹೊಂದಿದೆ.
- ಆರೋಗ್ಯ ರಕ್ಷಣೆಯಲ್ಲಿ ಐಒಟಿಯ ಅನ್ವಯವು ದೀರ್ಘಕಾಲದ ಕಾಯಿಲೆಗಳನ್ನು ನಿರ್ವಹಿಸುವಲ್ಲಿ ಮತ್ತು ರೋಗ ತಡೆಗಟ್ಟುವಿಕೆ ಮತ್ತು ನಿಯಂತ್ರಣದಲ್ಲಿ ಮೂಲಭೂತ ಪಾತ್ರವನ್ನು ವಹಿಸುತ್ತದೆ. ಶಕ್ತಿಯುತ ವೈರ್‌ಲೆಸ್ ಪರಿಹಾರಗಳ ಸಂಪರ್ಕದ ಮೂಲಕ ದೂರಸ್ಥ ಮೇಲ್ವಿಚಾರಣೆ ಸಾಧ್ಯವಾಗಿದೆ
- ಐಒಟಿ ಸಾಧನಗಳು ಮನೆ ಯಾಂತ್ರೀಕೃತಗೊಂಡ ದೊಡ್ಡ ಪರಿಕಲ್ಪನೆಯ ಒಂದು ಭಾಗವಾಗಿದೆ, ಇದರಲ್ಲಿ ಬೆಳಕು, ತಾಪನ ಮತ್ತು ಹವಾನಿಯಂತ್ರಣ, ಮಾಧ್ಯಮ ಮತ್ತು ಭದ್ರತಾ ವ್ಯವಸ್ಥೆಗಳು ಸೇರಿವೆ