Published on: November 12, 2023
ಪಾಲಿ ಲ್ಯಾಕ್ಟಿಕ್ ಆಸಿಡ್ ಪಾಲಿಮರ್ (ಪಿಎಲ್ಎ) ಚೀಲ
ಪಾಲಿ ಲ್ಯಾಕ್ಟಿಕ್ ಆಸಿಡ್ ಪಾಲಿಮರ್ (ಪಿಎಲ್ಎ) ಚೀಲ
ಸುದ್ದಿಯಲ್ಲಿ ಏಕಿದೆ? ರಕ್ಷಣಾ ಇಲಾಖೆ ಅಧೀನದಲ್ಲಿರುವ ಡಿಆರ್ಡಿಒ ಸಂಸ್ಥೆ ಪ್ಲಾಸ್ಟಿಕ್ಗೆ ಪರ್ಯಾಯವಾಗಿ ಅಭಿವೃದ್ಧಿಪಡಿಸಿರುವ ಜೈವಿಕವಾಗಿ ಕೊಳೆಯುವ ಸಸ್ಯಜನ್ಯ ಪಾಲಿ ಲ್ಯಾಕ್ಟಿಕ್ ಆಸಿಡ್ ಪಾಲಿಮರ್ (ಪಿಎಲ್ಎ) ಚೀಲಗಳ ಬಳಕೆಗೆ ಅನುಮತಿ ನೀಡಲು ಕರ್ನಾಟಕ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಮುಖ್ಯಾಂಶಗಳು
- ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮಾವಳಿ 2016ರಡಿ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಬಳಕೆ ನಿಷೇಧಿಸಲಾಗಿದೆ.
- ಸಿಐಪಿಇಟಿ (ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಪ್ಲಾಸ್ಟಿಕ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ) ಪ್ರಯೋಗಾಲಯ ಈ ಕೈಚೀಲ ಜೈವಿಕವಾಗಿ ಕೊಳೆಯುತ್ತದೆ ಎಂದು ವರದಿ ನೀಡಿದೆ. ಆದ್ದರಿಂದ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ಪಿಎಲ್ಎ ಚೀಲಗಳಿಗೆ ಅನುಮತಿ ನೀಡಿದೆ.
- ಈಗಾಗಲೇ ಗುಜರಾತ್ ಮತ್ತು ತೆಲಂಗಾಣದಲ್ಲಿ ಅನೇಕ ಉತ್ಪಾದಕರು ಡಿಆರ್ಡಿಒನಿಂದ ತಾಂತ್ರಿಕ ಅನುಮತಿ ಪಡೆದು ಪಿಎಲ್ಎ ಚೀಲಗಳನ್ನು ಉತ್ಪಾದಿಸುತ್ತಿದ್ದಾರೆ.
ಉದ್ದೇಶ
ಪಿಎಲ್ಎ ಬಳಸಿ ತಯಾರಿಸಿದ ಕೈಚೀಲ, ದಿನಸಿ ಚೀಲಗಳಿಂದ ಪರಿಸರಕ್ಕೆ ಹಾನಿ ಇಲ್ಲ ಎನ್ನುವುದು ಇದಕ್ಕೆ ಕಾರಣವಾಗಿದೆ. ಪಿಎಲ್ಎ ಚೀಲಗಳು ಮೇಲ್ನೋಟಕ್ಕೆ ಪ್ಲಾಸ್ಟಿಕ್ ಕವರ್ನಂತೆಯೇ ಕಾಣುವುದರಿಂದ ಸ್ಥಳೀಯ ಆಡಳಿತ ಸಂಸ್ಥೆಗಳ ಅಧಿಕಾರಿಗಳು ಈ ಚೀಲಗಳ ಮಾರಾಟಕ್ಕೂ ಅನುಮತಿ ನಿರಾಕರಿಸುತ್ತಿದ್ದಾರೆ. ಅಂಗಡಿಗಳಲ್ಲಿದ್ದರೆ ದಂಡವನ್ನೂ ಹಾಕುತ್ತಿದ್ದಾರೆ. ಈ ಸಮಸ್ಯೆ ನಿವಾರಣೆಗೆ ಪರಿಸರ ಇಲಾಖೆ ಮುಂದಾಗಿದೆ.
ಪಿಎಲ್ಎ ಚೀಲ:
- ಪಾಲಿ ಲ್ಯಾಕ್ಟಿಕ್ ಆಸಿಡ್ ಚೀಲ 6 ತಿಂಗಳು ಬಾಳಿಕೆ ಬರಲಿದೆ.
- ಇದು ಇಟ್ಟಲ್ಲೇ ಕರಗುತ್ತದೆ.
- ಮೆಕ್ಕೆಜೋಳದ ಸಾರದಿಂದ ತಯಾರಿಸುವ ಈ ಕೈಚೀಲವನ್ನು ದನಗಳು ತಿಂದರೂ, ಸಮಸ್ಯೆಯಾಗುವುದಿಲ್ಲ. ಇದರಲ್ಲಿರುವ ಪೆಟ್ರೋ ಕೆಮಿಕಲ್ ದೇಹಕ್ಕೆ ಹಾನಿಕಾರಕ ಅಲ್ಲ. ಹೀಗಾಗಿ ಹೋಟೆಲ್ಗಳಲ್ಲಿ ಈ ಚೀಲಗಳಲ್ಲಿ ತಿಂಡಿ ಕಟ್ಟಿಕೊಡುವುದರಿಂದ ಆರೋಗ್ಯಕ್ಕೆ ತೊಂದರೆಯಾಗುವುದಿಲ್ಲ.
- ಮಿಥಿಲೀನ್ ಡೈಕ್ಲೋರೈಡ್ ದ್ರಾವಣಕ್ಕೆ ಈ ಚೀಲಗಳನ್ನು ಹಾಕಿದರೆ 5 ನಿಮಿಷದಲ್ಲಿ ಹಾಲಿನಂತಾಗುತ್ತದೆ. ಇದೇ ದ್ರಾವಣಕ್ಕೆ ಪ್ಲಾಸ್ಟಿಕ್ ಚೀಲ ಹಾಕಿದರೆ ಕರಗದೆ ಉಳಿದುಕೊಳ್ಳುತ್ತದೆ.