Published on: June 6, 2022

ಪಿಎಂ ಶ್ರೀ ಶಾಲೆಗಳ ಸ್ಥಾಪನೆ

ಪಿಎಂ ಶ್ರೀ ಶಾಲೆಗಳ ಸ್ಥಾಪನೆ

can you buy cenforce over the counter ಸುದ್ಧಿಯಲ್ಲಿ ಏಕಿದೆ?

Szarvas ಭವಿಷ್ಯದ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಗುರಿಯನ್ನಿಟ್ಟುಕೊಂಡು’ ಪಿಎಂ ಶ್ರೀ ಶಾಲೆಗಳ ಸ್ಥಾಪನೆಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಮುಖ್ಯಾಂಶಗಳು

  • ರಾಜ್ಯಗಳ ಶಿಕ್ಷಣ ಸಚಿವರು ಹಾಜರಾಗಿದ್ದ ಈ ಸಮ್ಮೇಳನದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಟಾನವನ್ನು ವಿರೋಧಿಸಿ ತಮಿಳುನಾಡು ಭಾಗವಹಿಸದೆ ಬಹಿಷ್ಕರಿಸಿದೆ.
  • 21ನೇ ಶತಮಾನದ ಜ್ಞಾನ ಮತ್ತು ಕೌಶಲ್ಯದಿಂದ ಹೊಸ ಪೀಳಿಗೆ ವಂಚಿತವಾಗಬಾರದು ಎಂದು ಹೇಳಿದ ಸಚಿವರು, ಪಿಎಂ ಶ್ರೀ ಶಾಲೆಗಳ ಮಾದರಿಗಾಗಿ ನೀತಿ ರೂಪಿಸಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಪ್ರೋತ್ಸಾಹ ಮತ್ತು ಸಲಹೆಗಳನ್ನು ಪಡೆಯಲು ಇಚ್ಚಿಸುವುದಾಗಿ ತಿಳಿಸಿದರು.
  • ಭಾರತವನ್ನು ಜ್ಞಾನಧಾರಿತ ಆರ್ಥಿಕತೆ ರಾಷ್ಟ್ರವನ್ನಾಗಿಸುವಲ್ಲಿ ಮುಂದಿನ 25 ವರ್ಷ ಮಹತ್ವದ್ದಾಗಿದೆ. ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕಾಗಿದೆ. ಪರಸ್ಪರ ಅನುಭವಗಳನ್ನು ಯಶಸ್ಸು ಹಂಚಿಕೊಳ್ಳುವ ಮೂಲಕ ಭಾರತವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕಾಗಿದೆ.
  • ಕರ್ನಾಟಕ, ಒಡಿಶಾ, ದೆಹಲಿ, ಮೇಘಾಲಯ, ಬಿಹಾರ್, ಉತ್ತರ ಪ್ರದೇಶ, ಗುಜರಾತ್ ಮತ್ತು ಹರಿಯಾಣದ ಶಿಕ್ಷಣ ಮಾದರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.