Published on: April 27, 2023
ಪಿಎಸ್ಎಲ್ವಿ ಸಿ55 ರಾಕೆಟ್ : ವಾಣಿಜ್ಯ ಮಿಷನ್
ಪಿಎಸ್ಎಲ್ವಿ ಸಿ55 ರಾಕೆಟ್ : ವಾಣಿಜ್ಯ ಮಿಷನ್
ಸುದ್ದಿಯಲ್ಲಿ ಏಕಿದೆ? ಸಿಂಗಪುರದ ಎರಡು ಉಪಗ್ರಹಗಳನ್ನು ಕಕ್ಷೆ ಸೇರಿಸಿದ ಇಸ್ರೊದ ಪಿಎಸ್ಎಲ್ವಿ ಸಿ55 ಭಾರತೀಯ ಬಾಹ್ಯಾಕಾಶ ಸಂಸ್ಥೆಗೆ ಇದು ವರ್ಷದ ಮೂರನೇ ದೊಡ್ಡ ಉಡಾವಣೆಯಾಗಿದೆ. ಚಂದ್ರಯಾನ-3, ಚೊಚ್ಚಲ ಸೌರ ಮಿಷನ್, ಆದಿತ್ಯ ಎಲ್-1 ಸೇರಿದಂತೆ ಮುಂಬರುವ ದೊಡ್ಡ ಕಾರ್ಯಾಚರಣೆಗಳಿಗೆ ಇದು ಪೂರ್ವಸಿದ್ಧತೆಯಾಗಲಿದೆ.
ಮುಖ್ಯಾಂಶಗಳು
- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮೊದಲ ಬಾರಿಗೆ ತನ್ನ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್‌ನ ನಾಲ್ಕನೇ ಹಂತವನ್ನು ಕಕ್ಷೆಯ ವೇದಿಕೆಯಾಗಿ ನಿಯೋಜಿಸಿದ ಸೌರ ಫಲಕಗಳೊಂದಿಗೆ ಅದರಲ್ಲಿ ಅಳವಡಿಸಲಾಗಿರುವ ಏಳು ಭಾರತೀಯ ಪೇಲೋಡ್‌ಗಳನ್ನು ಬಳಸಿಕೊಂಡು ಪ್ರಯೋಗಗಳನ್ನು ಕೈಗೊಳ್ಳಲು ಬಳಸಿತು.
- PSLV-C55 ನ ನಾಲ್ಕನೇ ಹಂತದಲ್ಲಿರುವ ನಾಲ್ಕು ಎಂಬೆಡೆಡ್ ಅಥವಾ ಬೇರ್ಪಡಿಸದ ಪೇಲೋಡ್‌ಗಳು ISRO, ಬೆಲ್ಲಟ್ರಿಕ್ಸ್, ಧ್ರುವ ಸ್ಪೇಸ್ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (IIA) ಗೆ ಸೇರಿವೆ.
- ಎಲ್ಲಿಂದ ಉಡಾವಣೆ ಮಾಡಲಾಯಿತು? ಆಂಧ್ರಪ್ರದೇಶದ ಶ್ರೀಹರಿಕೋಟಾ.
- ಇದು ಪೋಲಾರ್ ಸ್ಯಾಟಲೈಟ್ ಲಾಂಚಿಂಗ್ ವೆಹಿಕ್ನ (ಪಿಎಸ್ಎಲ್ವಿ) 57ನೇ ಉಡಾವಣೆವಾಗಿದೆ.
ಕೊಂಡೊಯ್ದ ಉಪಗ್ರಹಗಳು ಯಾವುವು?
- TeLEOS-2, ಸಿಂಥೆಟಿಕ್ ಅಪರ್ಚರ್ ರಾಡಾರ್ (ಎಸ್ಎಆರ್) ಭೂ ವೀಕ್ಷಣಾ ಉಪಗ್ರಹ ಇದರಲ್ಲಿಮೊದಲಿನದು. ಇದು ಎಲ್ಲಾ ಹವಾಮಾನದಲ್ಲೂ ಹಗಲು, ರಾತ್ರಿ ಕವರೇಜ್ ಒದಗಿಸುತ್ತದೆ. 1mನ ಪೂರ್ಣ-ಪೋಲಾರಿಮೆಟ್ರಿಕ್ ರೆಸಲ್ಯೂಶನ್ ಇಮೇಜಿಂಗ್ ಸಾಮರ್ಥ್ಯವನ್ನು ಹೊಂದಿದೆ. 741 ಕೆಜಿ ತೂಕದ ಭೂ ವೀಕ್ಷಣಾ ಉಪಗ್ರಹವನ್ನು ಸಿಂಗಪುರ ಸರ್ಕಾರದ ಅಡಿಯಲ್ಲಿಕಾರ್ಯನಿರ್ವಹಿಸುತ್ತಿರುವ ವಿವಿಧ ಏಜೆನ್ಸಿಗಳ ಉಪಗ್ರಹ ಚಿತ್ರಣ ಅಗತ್ಯತೆಗಳನ್ನು ಪೂರೈಸಲು ಎಲ್ಲಾಹವಾಮಾನದ ಸಾಮರ್ಥ್ಯಗಳೊಂದಿಗೆ ನಿರ್ಮಾಣ ಮಾಡಲಾಗಿದೆ.
- 16-ಕಿಲೋ ಗ್ರಾಂನ LUMELITE-4 2 ನೇ ಉಪಗ್ರಹವಾಗಿದೆ. A*STARನ ಇನ್ಫೋಕಾಮ್ ರಿಸರ್ಚ್ (I2R) ಮತ್ತು ನ್ಯಾಷನಲ್ ಯೂನಿವರ್ಸಿಟಿ ಆಫ್ ಸಿಂಗಾಪುರದ ಉಪಗ್ರಹ ತಂತ್ರಜ್ಞಾನ ಮತ್ತುಸಂಶೋಧನಾ ಕೇಂದ್ರ (ಎಸ್ಟಿಎಆರ್) ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದನ್ನು, ಹೈ-ಪರ್ಫಾರ್ಮೆನ್ಸ್ ಸ್ಪೇಸ್-ಬೋರ್ನ್ ವಿಎಫ್ಎಚ್ ಡೇಟಾ ಎಕ್ಸ್ಚೇಂಜ್ ಸಿಸ್ಟಮ್ (ವಿಡಿಇಎಸ್), ತಂತ್ರಜ್ಞಾನ ಪ್ರಾತ್ಯಕ್ಷಿಕೆಗಾಗಿ ಕಳುಹಿಸಲಾಗಿದೆ.