Published on: December 23, 2022

ಪಿಲಿಕುಳ ಉದ್ಯಾನ

ಪಿಲಿಕುಳ ಉದ್ಯಾನ

ಸುದ್ದಿಯಲ್ಲಿ  ಏಕಿದೆ? ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನವು ಇದೀಗ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಸಜ್ಜಾಗಿದ್ದು, ಹೊಸ ಜಾತಿಯ ಪಕ್ಷಿಗಳು ಮತ್ತು ಸಸ್ತನಿಗಳನ್ನು ವಿದೇಶಗಳಿಂದ ಪಡೆದುಕೊಂಡಿದೆ.

ಮುಖ್ಯಾಂಶಗಳು

  • ಕೇಂದ್ರ ಮೃಗಾಲಯ ಪ್ರಾಧಿಕಾರದ (ಸಿಝಡ್‌ಎ) ಅನುಮತಿ ಮೇರೆಗೆ ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಗುಜರಾತ್‌ನ ಗ್ರೀನ್ಸ್ ಮೃಗಾಲಯದಿಂದ ಹೊಸ ಪ್ರಭೇದಗಳನ್ನು ಪಿಲಿಕುಳ ಜೈವಿಕ ಉದ್ಯಾನವನಕ್ಕೆ ತರಲಾಗಿದೆ.
  • ಇದಕ್ಕೆ ಪ್ರತಿಯಾಗಿ ಪಿಲಿಕುಳದಲ್ಲಿ ಹೆಚ್ಚುವರಿಯಾಗಿದ್ದ ಹುಲಿಗಳು, ಚಿರತೆಗಳು, ಕಾಡು ನಾಯಿಗಳು ಸೇರಿದಂತೆ ಹೆಚ್ಚಿನ ಪ್ರಮಾಣದಲ್ಲಿದ್ದ ಹಾವುಗಳನ್ನು ಗ್ರೀನ್ಸ್ ಮೃಗಾಲಯಕ್ಕೆ ಹಸ್ತಾಂತರಿಸಲಾಗಿದೆ.
  • ಹೊಸದಾಗಿ ಬಂದ ಪಾಣಿಗಳ ಆರೋಗ್ಯ ಪರಿಶೀಲಿಸಲು ಮತ್ತು ಇಲ್ಲಿಯ ವಾತಾವರಣಕ್ಕೆ ಒಗ್ಗುವ ತನಕ ಪಶುವೈದ್ಯರು, ಜೀವಶಾಸ್ತ್ರಜ್ಞರು ಮತ್ತು ಮೃಗಾಲಯದ ತಂಡವು ಅವುಗಳ ಆರೋಗ್ಯವನ್ನು ಮೇಲ್ವಿಚಾರಣೆ ಮಾಡುತ್ತಿದೆ.
  • ಇತರ ಪ್ರಾಣಿಗಳು ನಿಗಾ ಅವಧಿ ಮುಗಿದ ಕೂಡಲೇ ಜನರ ವೀಕ್ಷಣೆಗೆ ಇಡಲಾಗುವುದು.

ಯಾವ ದೇಶದಿಂದ ಯಾವ ಪಕ್ಷಿಗಳನ್ನು ಮತ್ತು ಸಸ್ತನಿಗಳನ್ನು ತರಿಸಿಕೊಳ್ಳಲಾಗಿದೆ.

  • ದಕ್ಷಿಣ ಅಮೆರಿಕದ ಸ್ಥಳೀಯ ಪಕ್ಷಿಯಾದ ನೀಲಿ ಮತ್ತು ಚಿನ್ನದ ಬಣ್ಣದ ಮಕಾವು,
  • ಮಧ್ಯ ಮತ್ತು ದಕ್ಷಿಣ ಅಮೆರಿಕದ ಮಿಲಿಟರಿ ಮಕಾವು,
  • ಆಸ್ಟ್ರೇಲಿಯಾದ ಗುಲಾಬಿ ಬಣ್ಮದ ಗಾಲಾ ಮತ್ತು ಗ್ರೇ ಬಣ್ಣದ ಕಾಕಟೂ
  • ದಕ್ಷಿಣ ಆಫ್ರಿಕಾದ ಗ್ರೀನ್ ಟುರಾಕೊ ಮತ್ತು ವಿವಿಧ ಜಾತಿಯ ವಿದೇಶಿ ಪಕ್ಷಿಗಳನ್ನು ತರಿಸಲಾಗಿದೆ.
  • ಮಧ್ಯ ಮತ್ತು ದಕ್ಷಿಣ ಅಮೆರಿಕಾದಲ್ಲಿ ಕಂಡುಬರುವ ಅಳಿಲು ಕೋತಿಗಳು,
  • ಉತ್ತರ ಅಮೆಜಾನ್ ನದಿಯ ಸ್ಥಳೀಯ ಕೆಂಪು ಕೈಗಳು,
  • ಬ್ರೆಜಿಲ್‌ನ ಈಶಾನ್ಯ ಕರಾವಳಿಯ ಕಾಮನ್ ಮಾರ್ಮೊಸೆಟ್‌ಗಳು ಮತ್ತು ಪ್ಯಾಟಗೋನಿಯಾ
  • ಅರ್ಜೆಂಟೀನಾದಲ್ಲಿ ಕಂಡುಬರುವ ಪ್ಯಾಟಗೋನಿಯನ್ ಮಾರ ಎಂಬ ಸಸ್ತನಿಗಳನ್ನು ಸಹ ಮೃಗಾಲಯಕ್ಕೆ ತರಲಾಗಿದೆ.

ಪಿಲಿಕುಳ ಜೈವಿಕ ಉದ್ಯಾನವನ 

  • ಪಿಲಿಕುಳ ಎನ್ನುವುದು ತುಳುವಿನ ಪದ (ಪಿಲಿ+ಕುಳ).ಪಿಲಿ ಎಂದರೆ ಕನ್ನಡದಲ್ಲಿ ಹುಲಿ ಎಂದು,ಕುಳ ಎಂದರೆ ಕೊಳ ಎಂಬ ಅರ್ಥವನ್ನು ನೀಡುತ್ತದೆ “ಹುಲಿಗಳ ಕೊಳ”
  • ಮಲೆನಾಡು ಮತ್ತು ಸಹ್ಯಾದ್ರಿ ಬೆಟ್ಟಗಳಲ್ಲಿ ಜೀವಿಸುವ ಹಲವಾರು ಪ್ರಾಣಿಗಳನ್ನು ಇಲ್ಲಿ ಸಂರಕ್ಷಿಸಲಾಗಿದೆ.
  • ಅಪೂರ್ವ ಸಸ್ಯಗಳ ಸಂಗ್ರಹ ಇಲ್ಲಿದೆ.ಇಂಡೊ-ಸ್ಪೇನ್ ಸರಕಾರದ ಜಂಟಿ ಅಶ್ರಯದಲ್ಲಿ ಅಭಿವೃದ್ಧಿ ಮಾಡಲಾಯಿತು.ಪಶ್ಚಿಮ ಘಟ್ಟದಲ್ಲಿ ಅಳಿವನ ಆಂಚಿನಲ್ಲಿ ಇರುವ ಸಸ್ಯಗಳನ್ನು ಬೆಳೆಸಲಾಗುತ್ತದೆ.
  • ಇದನ್ನು ಡಾ. ಶಿವರಾಮ ಕಾರಂತ ನಿಸರ್ಗಧಾಮ ಎಂದೂ ಕರೆಯಲಾಗುತ್ತದೆ.

ಇದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿದೆ.