Published on: August 2, 2021
ಪಿವಿ ಸಿಂಧೂ
ಪಿವಿ ಸಿಂಧೂ
ಸುದ್ಧಿಯಲ್ಲಿ ಏಕಿದೆ ? ರಿಯೊ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಗೆದ್ದ ಸಾಧನೆ ಮಾಡಿದ್ದ ಭಾರತದ ಚಾಂಪಿಯನ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧೂ, ಇದೀಗ ಟೋಕಿಯೋ ಅಂಗಣದಲ್ಲಿ ಸ್ವರ್ಣ ಗೆಲ್ಲುವ ಪ್ರಯತ್ನದಲ್ಲಿ ವಿಫಲರದಾರೂ ಕೂಡ ಕಂಚಿನ ಪದಕ ಗೆದ್ದುಕೊಟ್ಟಿದ್ದಾರೆ.
- ಕಂಚಿನ ಪದಕ ಸಲುವಾಗಿ ನಡೆದ ಪಂದ್ಯದಲ್ಲಿ ತಮ್ಮ ಶ್ರೇಷ್ಠ ಆಟ ಹೊರತಂದ ಸಿಂಧೂ, ವಿಶ್ವದ ಮಾಜಿ 3ನೇ ಶ್ರೇಯಾಂಕಿತ ಆಟಗಾರ್ತಿ ಚೀನಾದ ಹಿ ಬಿಂಗ್ ಜಿಯಾವ್ ಅವರ ಸವಾಲನ್ನು ಮೆಟ್ಟಿನಿಂತರು.
- ಸಿಂಧೂ ಈ ಜಯದೊಂದಿಗೆ ಒಲಿಂಪಿಕ್ಸ್ನಲ್ಲಿ ಬ್ಯಾಕ್ ಟು ಬ್ಯಾಕ್ ಪದಕ ಗೆದ್ದ ಭಾರತದ ಮೊದಲ ಬ್ಯಾಡ್ಮಿಂಟನ್ ಆಟಗಾರ್ತಿ ಎನಿಸಿಕೊಂಡಿದ್ದಾರೆ. 2012ರ ಲಂಡನ್ ಒಲಿಂಪಿಕ್ಸ್ನಲ್ಲಿ ಸೈನಾ ನೆಹ್ವಾಲ್ ಕಂಚು ಗೆದ್ದು ಬ್ಯಾಡ್ಮಿಂಟನ್ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟ ಸಾಧನೆ ಮಾಡಿದ್ದರು