ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆ
ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆ
ಸುದ್ದಿಯಲ್ಲಿ ಏಕಿದೆ? ಕರ್ನಾಟಕದಲ್ಲಿ ಕೊರೊನಾ ನಂತರ ಹೃದಯಘಾತದ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಈ ನಿಮಿತ್ತ ಕರ್ನಾಟಕ ರಾಜ್ಯ ಸರ್ಕಾರ ಜನರ ಜೀವ ಉಳಿಸಲು ‘ಹೃದಯಜ್ಯೋತಿ’ ಯೋಜನೆ ಜಾರಿಗೊಳಿಸಲು ನಿರ್ಧರಿಸಿದೆ. ಈ ಯೋಜನೆಯನ್ನು ಸಿಎಂ ಸಿದ್ದರಾಮಯ್ಯ ನವರು 2023ರ ಬಜೆಟ್ ನಲ್ಲಿ ಘೋಷಣೆ ಮಾಡಿದ್ದರು.
ಮುಖ್ಯಾಂಶಗಳು
- ಸದರಿ ಉದ್ದೇಶಿತ ಯೋಜನೆಯಲ್ಲಿ ಒಟ್ಟು 16 ಜಿಲ್ಲೆಗಳ ಆಸ್ಪತ್ರೆಗಳನ್ನು ಸರ್ಕಾರ ಗುರುತಿಸಿದೆ. ಯೋಜನೆಯಲ್ಲಿ 50 ಖಾಸಗಿ ಆಸ್ಪತ್ರೆಗಳು ಸೇರಿವೆ.
- ಈ ಯೋಜನೆಯನ್ನು ಸ್ಯಾಂಡಲ್‌ವುಡ್ ಪವರ್ ಸ್ಟಾರ್ ದಿ.ಪುನೀತ್ ರಾಜಕುಮಾರ್ ಸ್ಮರಣಾರ್ಥ ಜಾರಿ ಮಾಡಲಾಗುತ್ತಿದೆ. ಹೀಗಾಗಿ ಯೋಜನೆಗೆ ಅವರ ಹೆಸರನ್ನೇ ‘ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ’ ಎಂದು ಇಡಲು ಸರ್ಕಾರ ನಿರ್ಧರಿಸಿದೆ.
- ಇನ್ನೂ ಯೋಜನೆ ಜಾರಿಗೆ ಗುರುತಿಸಲಾಗಿರುವ ಆಸ್ಪತ್ರೆಗಳಲ್ಲಿ ಎಐ ಆಧಾರಿತ ಚಿಕಿತ್ಸೆಯನ್ನು ಒದಗಿಸಲಾಗುತ್ತದೆ.
ಉದ್ದೇಶ
ಕೋವಿಡ್ ನಂತರ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿದ್ದು, ಇದೊಂದು ಪಿಡುಗಿನಂತೆ ಕಾಡುತ್ತಿದೆ. ಹೃದಯಾಘಾತಕ್ಕೆ ಒಳಗಾದವರಿಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ಕೊಡುವುದು ಬಹಳ ಮುಖ್ಯ. ಇತ್ತಿಚೆಗೆ ಅಧ್ಯಯನದ ಪ್ರಕಾರ ಹೃದಯಾಘಾತಕ್ಕೆ ಒಳಗಾಗುವರಲ್ಲಿ ಶೇ.35 ರಷ್ಟು ಮಂದಿ 40ರ ಆಸುಪಾಸಿನ ಯುವಕರಾಗಿದ್ದಾರೆ. ಹೃದಯ ಸಂಬಂಧಿ ಕಾಯಿಲೆಗಳಿಗೆ ಎಲ್ಲಾ ಬಗೆಯ ಉಚಿತ ಚಿಕಿತ್ಸೆ ನೀಡುವ ಮೂಲಕ ಹೃದಯಾಘಾತದಿಂದ ಜನರನ್ನು ರಕ್ಷಿಸಲು ಪ್ರಯತ್ನ ಮಾಡಲಾಗುವುದು
ಯೋಜನೆಯ ವಿವರ
- ಯೋಜನೆಯನ್ನು ಎರಡು ರೀತಿಯಲ್ಲಿ ಜಾರಿಗೆ ತರಲಾಗ್ತಿದೆ. Hub ಅಂಡ್ spoke ಮಾದರಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ AED ಸಾಧನಗಳಗಳನ್ನ ಅಳವಡಿಸುವುದು. Hub ಮತ್ತು spoke ಕೇಂದ್ರಗಳ ಮಾದರಿ, ಹಠಾತ್ ಹೃದಯಾಘಾತಗಳನ್ನ ತಡೆಯುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ.
- ಬಿ.ಪಿ.ಎಲ್ ಕಾರ್ಡುದಾರರಿಗೆ ಉಚಿತ ಚಿಕಿತ್ಸೆ ದೊರೆಯಲಿದೆ. APL ಕಾರ್ಡುದಾರರು ನಮ್ಮ ಆರೋಗ್ಯ ಕರ್ನಾಟಕ ಆಯುಷ್ಮಾನ್ ಭಾರತ್ ಹೆಲ್ತ್ ಕಾರ್ಡ್ ಅಡಿಯಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದು.
SPOKE ಕೇಂದ್ರ
ಯಾರಿಗೇ ಎದೆನೋವು ಕಾಣಿಸಿಕೊಂಡ್ರೂ, ಅವರು SPOKE ಕೇಂದ್ರಗಳಿಗೆ ಭೇಟಿ ನೀಡಿದರೆ ತಕ್ಷಣ ECG ಮಾಡಲಾಗುತ್ತದೆ. ಕ್ರಿಟಿಕಲ್ ಹಂತದಲ್ಲಿರುವವರಿಗೆ, SPOKE ಕೇಂದ್ರಗಳಲ್ಲೇ ಅಂದ್ರೆ ತಾಲೂಕು ಆಸ್ಪತ್ರೆಗಳಲ್ಲೇ ಉಚಿತವಾಗಿ Tenecteplase ಇಂಜೆಕ್ಷನ್ ಕೊಡಲಾಗುತ್ತೆ. ಈ ಇಂಜೆಕ್ಷನ್ ಹಠಾತ್ ಹೃದಯಾಘಾತ ಆಗುವುದನ್ನ ತಡೆಯುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿದೆ.
Hub ಕೇಂದ್ರ
ತಾಲೂಕು ಅಥವಾ ಜಿಲ್ಲಾಸ್ಪತ್ರೆಯ Spoke ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದ ನಂತರ ಹೆಚ್ಚಿನ ಚಿಕಿತ್ಸೆಗೆ ಸೂಪರ್ ಸ್ಪಾಷಾಲಿಟಿ ಆಸ್ಪತ್ರೆಯ Hub ಕೇಂದ್ರಗಳಿಗೆ ಅಂಬ್ಯುಲೆನ್ಸ್ ಸಹಾಯದೊಂದಿಗೆ ಕಳಿಸಿಕೊಡಲಾಗುವುದು. ಆಂಜಿಯೋಗ್ರಾಮ್ ಅಥವಾ ಆ್ಯಂಜಿಯೋಪ್ಲ್ಯಾಸ್ಟಿ, ಸೇರಿದಂತೆ ಉನ್ನತ ಮಟ್ಟದ ಹೃದಯ ಚಿಕಿತ್ಸೆಯನ್ನ ಈ hub ಕೇಂದ್ರಗಳಲ್ಲಿ ಪಡೆಯಬಹುದು.