Published on: September 8, 2021

ಪೆರಿಯಾರ್ ಜನ್ಮದಿನ

ಪೆರಿಯಾರ್ ಜನ್ಮದಿನ

ಸುದ್ಧಿಯಲ್ಲಿ ಏಕಿದೆ?  ಸಮಾಜ ಸುಧಾರಕ ಇ.ವಿ.ರಾಮಸ್ವಾಮಿ ಪೆರಿಯಾರ್ ಅವರ ಜನ್ಮದಿನವಾದ ಸೆ.17 ಅನ್ನು ಪ್ರತಿ ವರ್ಷ ರಾಜ್ಯದಾದ್ಯಂತ ‘ಸಾಮಾಜಿಕ ನ್ಯಾಯದಿನ‘ವನ್ನಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಘೋಷಿಸಿದರು.

ಏಕೆ ಈ ನಿರ್ಧಾರ ?

  • ಸಾಮಾಜಿಕ ನ್ಯಾಯ, ಸ್ವಾಭಿಮಾನ, ವೈಚಾರಿಕತೆ ಮತ್ತು ಸಮಾನತೆಯ ಅಂಶಗಳನ್ನೊಳಗೊಂಡ ಪೆರಿಯಾರ್‌ ಸಿದ್ದಾಂತವು, ಕಳೆದ ಶತಮಾನದಲ್ಲಿ ತಮಿಳು ಸಮಾಜದ ಬೆಳವಣಿಗೆಗೆ ಅಡಿಪಾಯ ಹಾಕಿತು. ಹಾಗೆಯೇ, ಭವಿಷ್ಯದ ಸಾಮಾಜಿಕ ಬೆಳವಣಿಗೆಯ ಹಾದಿಯನ್ನೂ ಸುಗಮಗೊಳಿಸುತ್ತದೆ.
  • ಅವರು ಪ್ರತಿಪಾದಿಸಿದ ಸಮಾನತೆಯ ತತ್ವಗಳನ್ನು ಬಲವರ್ಧನೆಗೊಳಿಸುವುದಕ್ಕಾಗಿ ಸರ್ಕಾರ ಪ್ರತಿ ವರ್ಷ ಅವರ ಜನ್ಮ ದಿನವನ್ನು ‘ಸಾಮಾಜಿಕ ನ್ಯಾಯ‘ ದಿನವನ್ನಾಗಿ ಆಚರಿಸಲು ನಿರ್ಧರಿಸಿದೆ.

‘ಸಾಮಾಜಿಕ ನ್ಯಾಯ ದಿನದಂದು ಏನು ಮಾಡಲಾಗುತ್ತದೆ ?

  • ಪ್ರತಿ ವರ್ಷ ಪೆರಿಯಾರ್ ಜನ್ಮ ದಿನದಂದು ಮುಖ್ಯ ಕಾರ್ಯದರ್ಶಿಯವರ ಕಚೇರಿಯೂ ಸೇರಿದಂತೆ ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿನ ಉದ್ಯೋಗಿಗಳು, ಸಮಾನತೆ, ಸ್ವಾಭಿಮಾನ ಮತ್ತು ವೈಚಾರಿಕತೆ ಒಳಗೊಂಡಂತಹ ಉನ್ನತ ಆದರ್ಶಗಳ ಮೌಲ್ಯಗಳನ್ನು ಅನುಸರಿಸುವುದಾಗಿ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ.

ಇ.ವಿ.ರಾಮಸ್ವಾಮಿ ಪೆರಿಯಾರ್

  • ಇ.ವಿ.ಆರ್, ಇ.ವಿ. ರಾಮಸ್ವಾಮಿ ನಾಯ್ಕರ್, ತಂತೈ ಪೆರಿಯಾರ್, ಅಥವಾ ಪೆರಿಯಾರ್ ಎಂದು ಹಲವಾರು ಹೆಸರುಗಳಿಂದ ಪ್ರಖ್ಯಾತರಾಗಿದ್ದ “ಪೆರಿಯಾರ್ ರಾಮಸ್ವಾಮಿ” ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂನ ಸ್ಥಾಪಕ ಮತ್ತು “ತಮಿಳು ಸ್ವಾಭಿಮಾನ ಚಳುವಳಿ” ಯ ನಾಯಕರಾಗಿದ್ದರಲ್ಲದೇ, ಸ್ವಾತಂತ್ರ ಹೋರಾಟಗಾರರಾಗಿದ್ದರೂ ನಂತರ ಬ್ರಿಟಿಷರ ವಸಾಹತು ಆಡಳಿತವನ್ನು ಒಪ್ಪಿಕೊಂಡಿದ್ದರು. ತಮಿಳು ಭಾಷೆಯಲ್ಲಿ ‘ಪೆರಿಯಾರ್’ ಅಂದ್ರೆ ಗೌರವಾನ್ವಿತ, ಅಥವಾ ದೊಡ್ಡವರು ಎಂಬರ್ಥವಿದೆ.
  • ಪೆರಿಯಾರ್ ಹಲವು ರೀತಿಯ ಚಳವಳಿಗಳ ಮೂಲಕ ಸಮಾಜದ ನಿರ್ಗತಿಕರಿಗೆ ದಾರಿ ದೀಪವಾದವರು. ಅವರ ಚಳುವಳಿಗಳಲ್ಲಿ ಪ್ರಮುಖವಾದವುಗಳೆಂದರೆ ದ್ರಾವಿಡ ಚಳುವಳಿ, ಹಿಂದಿ ಹೇರಿಕೆಯ ವಿರುದ್ದದ ಚಳುವಳಿ, ಬ್ರಾಹ್ಮಣೆತರ ಸಮುದಾಯಗಳ ಚಳುವಳಿ, ಇಂತಹ ಹಲವು ಚಳುವಳಿಗಳೊಂದಿಗೆ ಕೈಜೋಡಿಸಿವುದರ ಮೂಲಕ ಈರೋಡ್ ವೆಂಕಟಪ್ಪ ರಾಮಾಸ್ವಾಮಿ ಜನರ ಮಧ್ಯದಲ್ಲಿ ‘ಪೆರಿಯಾರ್’ ಎಂದು ಖ್ಯಾತಿ ಗಳಿಸಿದವರು.