Published on: November 4, 2023

ಪ್ಯಾರಾ ಏಷ್ಯನ್ ಗೇಮ್ಸ್‌ 2023

ಪ್ಯಾರಾ ಏಷ್ಯನ್ ಗೇಮ್ಸ್‌ 2023

ಸುದ್ದಿಯಲ್ಲಿ ಏಕಿದೆ? ಭಾರತದ ಪ್ಯಾರಾ-ಅಥ್ಲೀಟ್‌ಗಳು ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಪ್ಯಾರಾ ಏಷ್ಯನ್ ಗೇಮ್ಸ್‌ನ 29 ಚಿನ್ನ, 31 ಬೆಳ್ಳಿ ಮತ್ತು 51 ಕಂಚು ಸೇರಿದಂತೆ 111 ಪದಕಗಳನ್ನು ಗೆಲ್ಲುವ ಮೂಲಕ  ಐತಿಹಾಸಿಕಲ್ಲಿ ಸಾಧನೆ ಗೈದಿದ್ದಾರೆ.

ಮುಖ್ಯಾಂಶಗಳು

  • ಇದರೊಂದಿಗೆ ಭಾರತವು ಚೀನಾ, ಇರಾನ್, ಜಪಾನ್ ಮತ್ತು ಕೊರಿಯಾ ಗಣರಾಜ್ಯವನ್ನು ಹಿಂದಿಕ್ಕಿ ಒಟ್ಟಾರೆ ಪದಕ ಪಟ್ಟಿಯಲ್ಲಿ 5 ನೇ ಸ್ಥಾನವನ್ನು ಪಡೆದುಕೊಂಡಿದೆ.
  • ಪಡೆದುಕೊಂಡಿರುವ 111 ಪದಕಗಳಲ್ಲಿ, 40 ಪದಕಗಳನ್ನು ಗಳಿಸುವ ಮೂಲಕ ಮಹಿಳಾ ಪ್ಯಾರಾ-ಅಥ್ಲೀಟ್‌ಗಳು ಗಣನೀಯ ಕೊಡುಗೆ ನೀಡಿದ್ದಾರೆ.

ಏಷ್ಯನ್ ಪ್ಯಾರಾ ಗೇಮ್ಸ್

  • ಪ್ಯಾರಾ ಏಷ್ಯಾಡ್ ಎಂದೂ ಕರೆಯುತ್ತಾರೆ, ಇದು ಏಷ್ಯನ್ ಪ್ಯಾರಾಲಿಂಪಿಕ್ ಸಮಿತಿಯಿಂದ ನಿಯಂತ್ರಿಸಲ್ಪಡುವ ಬಹು-ಕ್ರೀಡಾ ಕಾರ್ಯಕ್ರಮವಾಗಿದ್ದು, ದೈಹಿಕ ವಿಕಲಾಂಗತೆ ಹೊಂದಿರುವ ಕ್ರೀಡಾಪಟುಗಳಿಗಾಗಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಪ್ರತಿ ಏಷ್ಯನ್ ಕ್ರೀಡಾಕೂಟದ ನಂತರ ನಡೆಯುತ್ತದೆ.
  • ಮೊದಲ ಈವೆಂಟ್: 2010 ರಲ್ಲಿ ಚೀನಾದ ಗುವಾಂಗ್‌ಝೌನಲ್ಲಿ ನಡೆಯಿತು
  • ಇಲ್ಲಿಯವರೆಗೆ ಮೂರು ರಾಷ್ಟ್ರಗಳು ಏಷ್ಯನ್ ಪ್ಯಾರಾ ಗೇಮ್ಸ್ ಅನ್ನು ಆಯೋಜಿಸಿವೆ ಮತ್ತು ನಲವತ್ತನಾಲ್ಕು ರಾಷ್ಟ್ರಗಳು ಕ್ರೀಡಾಕೂಟದಲ್ಲಿ ಭಾಗವಹಿಸಿವೆ.
  • 2018 ರಲ್ಲಿ ಇಂಡೋನೇಷ್ಯಾದಲ್ಲಿ ನಡೆಯಿತು
  • 2014 ರಲ್ಲಿ ದಕ್ಷಿಣ ಕೊರಿಯಾದ ಇಂಚಿಯಾನ್‌ನಲ್ಲಿ ನಡೆಯಿತು
  • 2026 ರಲ್ಲಿ ಪ್ಯಾರಾ ಏಷ್ಯನ್ ಗೇಮ್ಗಳು   ಜಪಾನ್‌ನ ನಗೋಯಾದಲ್ಲಿ ನಡೆಯಲಿವೆ.