Published on: October 28, 2023
ಪ್ರಧಾನಮಂತ್ರಿ ಸ್ವನಿಧಿ ಯೋಜನೆ
ಪ್ರಧಾನಮಂತ್ರಿ ಸ್ವನಿಧಿ ಯೋಜನೆ
ಸುದ್ದಿಯಲ್ಲಿ ಏಕಿದೆ? ಪ್ರತಿದಿನ ಮನೆಗಳಿಗೆ ದಿನ ಪತ್ರಿಕೆಗಳನ್ನು ಹಂಚಿಕೆ ಮಾಡುವವರನ್ನು ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಸ್ವನಿಧಿ ಯೋಜನೆ ವ್ಯಾಪ್ತಿಗೆ ಒಳಪಡಿಸಲಾಗಿದೆ.
ಯೋಜನೆಯ ವಿವರ
- ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (MoHUA) ಜೂನ್ 01, 2020 ರಂದು ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿ (PM SVANIdhi) ಯೋಜನೆಯನ್ನು ಪ್ರಾರಂಭಿಸಿದೆ
- ಕೋವಿಡ್ ಸಂದರ್ಭದಲ್ಲಿ ಲೇವಾದೇವಿಗಾರರು ಬೀದಿ ಬದಿ ವ್ಯಾಪಾರಿಗಳಿಗೆ ತೊಂದರೆ ಕೊಡುವುದನ್ನು ತಡೆಯಲು ಮತ್ತು ಬೀದಿ ಬದಿ ವ್ಯಾಪಾರಿಗಳ ಸಬಲೀಕರಣಕ್ಕಾಗಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ.
- ಯೋಜನೆಯಡಿ ಮೊದಲ ಬಾರಿಗೆ ರೂ. 10,000, ಎರಡನೇ ಬಾರಿಗೆ ರೂ. 20,000ಮೂರನೇ ಬಾರಿಗೆ ರೂ. 50,000ದವರೆಗೆ ಸಾಲ ಪಡೆಯಬಹುದು. ಬ್ಯಾಂಕ್ಗಳು ನಿರ್ಧಿಷ್ಟ ಪ್ರಮಾಣದ ಬಡ್ಡಿ ವಿಧಿಸಿದರೂ ಸರ್ಕಾರ ಶೇ 7ರಷ್ಟು ಬಡ್ಡಿ ಮರುಪಾವತಿ ಮಾಡುವುದರಿಂದ ಬಹುತೇಕ ಶೂನ್ಯ ಬಡ್ಡಿದರದಲ್ಲಿ ಸಾಲ ಸಿಗಲಿದೆ. ಮೊದಲ ಹಂತದಲ್ಲಿ ನಿಗದಿತ ಅವಧಿಯೊಳಗೆ ಸಾಲ ಮರುಪಾವತಿ ಮಾಡಿದವರು ಎರಡು ಮತ್ತು ಮೂರನೇ ಹಂತದಲ್ಲಿ ಸಾಲ ಪಡೆಯಲು ಅರ್ಹತೆ ಪಡೆಯುತ್ತಾರೆ.