Published on: July 1, 2024
ಪ್ರಯಾಸ್ ಯೋಜನೆ
ಪ್ರಯಾಸ್ ಯೋಜನೆ
ಸುದ್ದಿಯಲ್ಲಿ ಏಕಿದೆ? ಬಿಎಂಟಿಸಿ ನೌಕರರು ನಿವೃತ್ತರಾದಾಗ ಇಪಿಎಫ್, ಪಿಂಚಣಿಗಾಗಿ ಅಲೆದಾಟ ನಡೆಸುವುದನ್ನು ‘ಪ್ರಯಾಸ್’ ಯೋಜನೆ ತಪ್ಪಿಸಿದೆ. ನಿವೃತ್ತರಾದ ಒಂದೇ ತಿಂಗಳಲ್ಲಿ ಈ ಸೌಲಭ್ಯಗಳು ನೌಕರರ ಕೈ ಸೇರುತ್ತಿವೆ. ಬಿಎಂಟಿಸಿ ಈ ಯೋಜನೆಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುತ್ತಿದೆ.
ಏನಿದು ‘ಪ್ರಯಾಸ್’?
- ನಿವೃತ್ತಿಯಾಗಲು ಕೆಲವು ತಿಂಗಳು ಬಾಕಿ ಇರುವಾಗಲೇ ನೌಕರರು ಕೆಲಸ ಮಾಡುವ ಸಂಸ್ಥೆ ಹಾಗೂ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಸಹಯೋಗದೊಂದಿಗೆ ದಾಖಲೆಗಳನ್ನು ಒಟ್ಟುಗೂಡಿಸಿ ಸಲ್ಲಿಸಬೇಕು. ದಾಖಲೆಗಳನ್ನು ಪರಿಶೀಲಿಸಿ ನೌಕರರು ನಿವೃತ್ತಿಯಾಗುವ ತಿಂಗಳಲ್ಲಿಯೇ ಪಿಂಚಣಿ ಪಾವತಿ ಆದೇಶವನ್ನು ಪಡೆಯುವ ಸೌಲಭ್ಯವೇ ‘ಪ್ರಯಾಸ್’ ಯೋಜನೆಯಾಗಿದೆ.
- 2020ರಲ್ಲಿ ಈ ಯೋಜನೆಯನ್ನು ಜಾರಿಮಾಡಲಾಗಿದೆ.
- ಪ್ರಯಾಸ್ ಉಪಕ್ರಮದ ಮೂಲಕ ನೌಕರರ ಪಿಂಚಣಿ ಯೋಜನೆ, 1995 ರ ಅಡಿಯಲ್ಲಿ ನಿವೃತ್ತ ಉದ್ಯೋಗಿಗಳಿಗೆ ಪಿಂಚಣಿ ಪಾವತಿ ಆದೇಶಗಳನ್ನು ನೀಡುತ್ತದೆ. ನಿವೃತ್ತಿ / ನಿವೃತ್ತಿಯ ದಿನದಂದು ಪಿಂಚಣಿ ಪಾವತಿ ಆದೇಶವನ್ನು ವಿತರಿಸಲು ಪ್ರಯಾಸ್ ಇಪಿಎಫ್ಒನ ಉಪಕ್ರಮವಾಗಿದೆ.